ಬೆಂಗಳೂರು: ಸ್ವಂತ ಪರಿಶ್ರಮದಿಂದ ಉದ್ಯಮಿಗಳಾಗಿರುವವರು ಸ್ಥಾಪನೆ ಮಾಡಿರುವ ಅತ್ಯಂತ ಮೌಲ್ಯಯುತ ಕಂಪನಿಗಳಿಗೆ ದೇಶದಲ್ಲಿಯೇ ಬೆಂಗಳೂರು ಅತಿದೊಡ್ಡ ಕೇಂದ್ರವಾಗಿದೆ ಎಂದು ಹುರೂನ್ ಇಂಡಿಯಾ ಹೇಳಿದೆ.

ಬೆಂಗಳೂರು ಅತ್ಯಂತ ಮೌಲ್ಯಯುತ 129 ಕಂಪನಿಗಳ ಆಶ್ರಯವಾಗಿದೆ. ಮುಂಬೈನಲ್ಲಿ 78, ಗುರುಗ್ರಾಮ ಮತ್ತು ನವದೆಹಲಿಯಲ್ಲಿ 49 ಕಂಪನಿಗಳಿವೆ ಎಂದು ವರದಿ ಹೇಳಿದೆ. 2000ನೇ ವರ್ಷದಿಂದ ಈಚೆಗೆ ಆರಂಭ ಆಗಿರುವ 200 ಕಂಪನಿಗಳ 405 ಸ್ಥಾಪಕರ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಈ ಕಂಪನಿಗಳ ಒಟ್ಟು ಮೌಲ್ಯವು ₹30 ಲಕ್ಷ ಕೋಟಿಯಷ್ಟು ಇದೆ ಎಂದು ಗುರುವಾರ ಬಿಡುಗಡೆ ಮಾಡಿರುವ ವರದಿಯಲ್ಲಿ ತಿಳಿಸಿದೆ.

ಡಿ–ಮಾರ್ಟ್ ಮೂಲಕ ಕಾರ್ಯಾಚರಿಸುವ ರಾಧಾಕಿಷನ್ ದಮನಿ ಅವರ ಅವೆನ್ಯು ಸೂಪರ್ಮಾರ್ಕೆಟ್ಸ್ ಮೌಲ್ಯಯತ ಕಂಪನಿಗಳ ಸಾಲಿನಲ್ಲಿ ಮೊದಲ ಸ್ಥಾನದಲ್ಲಿದೆ. ಇದರ ಮಾರುಕಟ್ಟೆ ಮೌಲ್ಯವು ಸೆಪ್ಟೆಂಬರ್ ಅಂತ್ಯಕ್ಕೆ ₹2.38 ಲಕ್ಷ ಕೋಟಿಯಷ್ಟು ಆಗಿದೆ. ಬಿನ್ನಿ ಬನ್ಸಲ್ ಮತ್ತು ಸಚಿನ ಬನ್ಸಲ್ ಅವರು ಸ್ಥಾಪಿಸಿರುವ ಫ್ಲಿಪ್ಕಾರ್ಟ್ ಕಂಪನಿಯು ಎರಡನೇ ಸ್ಥಾನದಲ್ಲಿದ್ದು ಮಾರುಕಟ್ಟೆ ಮೌಲ್ಯ ₹1.19 ಲಕ್ಷ ಕೋಟಿಯಷ್ಟು ಇದೆ.

ನೋಂದಾಯಿತ ಮತ್ತು ನೋಂದಣಿ ಆಗದೇ ಇರುವ ಕಂಪನಿಗಳು ಸಹ ಪಟ್ಟಿಯಲ್ಲಿ ಇವೆ. ಕಂಪನಿಗಳ ಮಾರುಕಟ್ಟೆ ಮೌಲ್ಯವನ್ನು ಪರಿಗಣಿಸಲಾಗಿದೆ ಎಂದು ಹುರೂನ್ ಇಂಡಿಯಾದ ಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಅನಸ್ ರಹಮಾನ್ ಜುನೈದ್ ತಿಳಿಸಿದ್ದಾರೆ.

ನೈಕಾ ಕಂಪನಿಯ ಸಿಇಒ ಫಲ್ಗುಣಿ ನಾಯರ್ ಅವರನ್ನೂ ಒಳಗೊಂಡು 20 ಮಹಿಳಾ ಉದ್ಯಮಿಗಳು ಪಟ್ಟಿಯಲ್ಲಿದ್ದಾರೆ. ವಯಸ್ಸಿನ ಆಧಾರದಲ್ಲಿ ಹ್ಯಾಪಿಯೆಸ್ಟ್ ಮೈಂಡ್ಸ್ ಕಂಪನಿಯ ಸಂಸ್ಥಾಪಕ 80 ವರ್ಷದ ಅಶೋಕ್ ಸೂಟಾ, 21 ವರ್ಷದ ಜೆಪ್ಟೊ ಕಂಪನಿಯ ಕೈವಲ್ಯ ವೊಹ್ರಾ ಇದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.