ನವದೆಹಲಿ: ಮೊಬೈಲ್ ಸೇವಾ ಶುಲ್ಕ ಏರಿಕೆ ಮಾಡಿದ್ದರಿಂದ ಜುಲೈನಲ್ಲಿ ರಿಲಯನ್ಸ್ ಜಿಯೊ, ಭಾರ್ತಿ ಏರ್ಟೆಲ್ ಹಾಗೂ ವೊಡೊಫೋನ್ ಐಡಿಯಾ ಕಂಪನಿಗಳ ಒಟ್ಟಾರೆ ಬಳಕೆದಾರರ ಸಂಖ್ಯೆಯಲ್ಲಿ ಇಳಿಕೆಯಾಗಿದೆ ಎಂದು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದ (ಟ್ರಾಯ್) ವರದಿ ತಿಳಿಸಿದೆ.

ಈ ಮೂರು ಕಂಪನಿಗಳು ಶೇ 10ರಿಂದ ಶೇ 27ರಷ್ಟು ಮೊಬೈಲ್ ಸೇವಾ ಶುಲ್ಕವನ್ನು ಏರಿಕೆ ಮಾಡಿದ್ದವು. ಏರ್ಟೆಲ್ ಮತ್ತು ವೊಡೊಫೋನ್ ಐಡಿಯಾ ಕಂಪನಿಯು ಆರಂಭಿಕ ಶುಲ್ಕವನ್ನು ದುಪ್ಪಟ್ಟುಗೊಳಿಸಿದ್ದವು.

ಖಾಸಗಿ ಕಂಪನಿಗಳ ದರ ಏರಿಕೆ ನೀತಿಯು ಬಿಎಸ್ಎನ್ಎಲ್ಗೆ ವರದಾನವಾಗಿದ್ದು, ಹೊಸದಾಗಿ 29.4 ಲಕ್ಷ ಚಂದಾದಾರರು ಸೇರ್ಪಡೆಯಾಗಿದ್ದಾರೆ ಎಂದು ಟ್ರಾಯ್ ತಿಳಿಸಿದೆ.

ಭಾರ್ತಿ ಏರ್ಟೆಲ್ 16.90 ಲಕ್ಷ ಬಳಕೆದಾರರನ್ನು ಕಳೆದುಕೊಂಡಿದೆ. ವೊಡೊಫೋನ್ ಐಡಿಯಾ ಮತ್ತು ರಿಲಯನ್ಸ್ ಜಿಯೊ 14.10 ಲಕ್ಷ ಚಂದಾದಾರರನ್ನು ಕಳೆದುಕೊಂಡಿವೆ ಎಂದು ವಿವರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.