ನವದೆಹಲಿ: ಕರ್ನಾಟಕದ ಚಿತ್ರದುರ್ಗ ಸೇರಿದಂತೆ ದೇಶದ 34 ನಗರಗಳಲ್ಲಿ ಇಂದಿನಿಂದ (ಮಂಗಳವಾರ) 5ಜಿ ಸೇವೆಗಳನ್ನು ಆರಂಭಿಸಲಾಗಿದೆ ಎಂದು ರಿಲಯನ್ಸ್ ಜಿಯೊ ತಿಳಿಸಿದೆ.

ಇದರೊಂದಿಗೆ ದೇಶದಲ್ಲಿ 23 ರಾಜ್ಯಗಳು ಸೇರಿದಂತೆ ಕೇಂದ್ರಾಡಳಿತ ಪ್ರದೇಶಗಳ 225 ನಗರಗಳಲ್ಲಿ ಗ್ರಾಹಕರಿಗೆ 5ಜಿ ಸೇವೆ ಲಭ್ಯವಾಗಿದೆ. ರಾಜ್ಯದ ಬೆಂಗಳೂರು, ಮೈಸೂರು, ಹಾಸನ, ಮಂಡ್ಯ, ಚಿತ್ರದುರ್ಗದಲ್ಲಿ 5ಜಿ ಸೇವೆ ಲಭ್ಯವಾಗಿದೆ.

ಹೊಸದಾಗಿ ಈಶಾನ್ಯ ಭಾರತದ ಶಿಲ್ಲಾಂಗ್, ಇಂಫಾಲ್, ಐಜ್ವಾಲ್, ಅಗರ್ತಲಾ, ಇಟಾನಗರ, ಕೊಹಿಮಾ ಮತ್ತು ದಿಮಾಪುರ ನಗರಗಳಲ್ಲಿ ಗ್ರಾಹಕರಿಗೆ 5ಜಿ ಸೇವೆ ಲಭ್ಯವಾಗಿದೆ ಎಂದು ಕಂಪನಿ ಹೇಳಿದೆ.

ಬಳಕೆದಾರರು ಇಂದಿನಿಂದ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ, 1 Gbps+ ವೇಗದಲ್ಲಿ ಅನಿಯಮಿತ ಡೇಟಾವನ್ನು ಬಳಸಬಹುದು ಎಂದು ಕಂಪನಿ ಹೇಳಿದೆ.

ಆಂಧ್ರಪ್ರದೇಶದ ಅನಂತಪುರಂ, ಭೀಮಾವರಂ, ಚಿರಾಲ, ಗುಂತಕಲ್, ನಂದ್ಯಾಲ, ತೆನಾಲಿ, ಅಸ್ಸಾಂನ ದಿಬ್ರುಗಢ, ಜೋರ್ಹತ್, ತೇಜ್‌ಪುರ, ಬಿಹಾರದ ಗಯಾ, ಛತ್ತೀಸ್‌ಗಢದ ಅಂಬಿಕಾಪುರ, ಧಮತರಿ, ಹರಿಯಾಣದ ಥಾನೇಸರ್, ಯಮುನಾನಗರ, ಕರ್ನಾಟಕದ ಚಿತ್ರದುರ್ಗ, ಮಹಾರಾಷ್ಟ್ರದ ಜಲಗಾಂವ್, ಲಾತೂರ್, ಒಡಿಶಾದ ಬಲಂಗಿರ್, ನಾಲ್ಕೊ, ಪಂಜಾಬ್‌ನ ಜಲಂಧರ್, ಫಾಗ್ವಾರ, ರಾಜಸ್ಥಾನದ ಅಜ್ಮೀರ್, ತಮಿಳುನಾಡಿನ ಕಡಲೂರು, ದಿಂಡಿಗಲ್, ಕಾಂಚೀಪುರಂ, ಕರೂರ್, ಕುಂಭಕೋಣಂ, ನಾಗರ್‌ಕೋಯಿಲ್, ತಂಜಾವೂರು, ತಿರುವಣ್ಣಾಮಲೈ ತೆಲಂಗಾಣದ ಅದಿಲಾಬಾದ್, ಮಹಬೂಬ್‌ನಗರ, ರಾಮಗುಂಡಂ, ಉತ್ತರ ಪ್ರದೇಶದ ಮಥುರಾದಲ್ಲಿ ಗ್ರಾಹಕರಿಗೆ 5ಜಿ ಸೇವೆ ಲಭ್ಯವಾಗಿದೆ.

ಓದಿ... ಹಾಸನ, ಮಂಡ್ಯ ಸೇರಿ 50 ನಗರಗಳಲ್ಲಿ ಇಂದಿನಿಂದ ಜಿಯೊ 5ಜಿ ಸೇವೆ ಪ್ರಾರಂಭ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.