ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಹೀಂದ್ರ: ತೆರಿಗೆ ನಂತರದ ಲಾಭ ಶೇ 6ರಷ್ಟು ಹೆಚ್ಚಳ

Published 10 ನವೆಂಬರ್ 2023, 13:41 IST
Last Updated 10 ನವೆಂಬರ್ 2023, 13:41 IST
ಅಕ್ಷರ ಗಾತ್ರ

ಮುಂಬೈ: ಮಹೀಂದ್ರ ಆ್ಯಂಡ್‌ ಮಹೀಂದ್ರ ಕಂಪನಿಯ ತೆರಿಗೆ ನಂತರದ ಲಾಭವು 2023–24ರ ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ಶೇ 6ರಷ್ಟು ಹೆಚ್ಚಾಗಿ ₹2,348 ಕೋಟಿಗೆ ತಲುಪಿದೆ.

ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ತೆರಿಗೆ ನಂತರದ ಲಾಭವು ₹2,348 ಕೋಟಿಯಷ್ಟು ಆಗಿತ್ತು ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.

ವರಮಾನ ಶೇ 15ರಷ್ಟು ಹೆಚ್ಚಾಗಿ ₹34,436 ಕೋಟಿಗೆ ಏರಿಕೆ ಕಂಡಿದೆ. ಕಂಪನಿಯ ವಾಹನ ವಹಿವಾಟಿನಿಂದ ಬಂದಿರುವ ವರಮಾನವು ಶೇ 20ರಷ್ಟು ಹೆಚ್ಚಾಗಿ ₹18,869 ಕೋಟಿಗೆ ತಲುಪಿದೆ. ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಕಂಪನಿಯು 2.12 ಲಕ್ಷ ವಾಹನಗಳನ್ನು ಮಾರಾಟ ಮಾಡಿದೆ. ಹಿಂದಿನ ಹಣಕಾಸು ವರ್ಷದ ಇದೇ ಅವಧಿಗೆ ಹೋಲಿಸಿದರೆ (1.79 ಲಕ್ಷ) ಮಾರಾಟದಲ್ಲಿ ಶೇ 18ರಷ್ಟು ಏರಿಕೆ ಕಂಡುಬಂದಿದೆ ಎಂದು ಕಂಪನಿಯು ಮಾಹಿತಿ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT