ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

8 ಕಂಪನಿಗಳ ಎಂ–ಕ್ಯಾಪ್‌ ₹2 ಲಕ್ಷ ಕೋಟಿ ಇಳಿಕೆ

Published : 8 ಸೆಪ್ಟೆಂಬರ್ 2024, 14:35 IST
Last Updated : 8 ಸೆಪ್ಟೆಂಬರ್ 2024, 14:35 IST
ಫಾಲೋ ಮಾಡಿ
Comments

ನವದೆಹಲಿ: ಕಳೆದ ವಾರ ನಡೆದ ವಹಿವಾಟಿನಲ್ಲಿ ಷೇರು ಸೂಚ್ಯಂಕಗಳು ಇಳಿಕೆ ಕಂಡ ಪರಿಣಾಮ ಪ್ರಮುಖ 10 ಕಂಪನಿಗಳ ಪೈಕಿ 8 ಕಂಪನಿಗಳ ಸಂಯೋಜಿತ ಮಾರುಕಟ್ಟೆ ಮೌಲ್ಯ (ಎಂ–ಕ್ಯಾಪ್‌) ₹2.01 ಲಕ್ಷ ಕೋಟಿ ಕರಗಿದೆ. 

ರಿಲಯನ್ಸ್‌ ಇಂಡಸ್ಟ್ರಿಸ್‌ ಮಾರುಕಟ್ಟೆ ಮೌಲ್ಯ ₹60,824 ಕೋಟಿ ಕರಗಿದ್ದು, ಕಂಪನಿಯ ಒಟ್ಟು ಎಂ–ಕ್ಯಾಪ್ ₹19.82 ಲಕ್ಷ ಕೋಟಿಯಾಗಿದೆ.

ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌ (ಟಿಸಿಎಸ್‌) ₹34,136 ಕೋಟಿ, ಎಸ್‌ಬಿಐ ₹29,495 ಕೋಟಿ, ಭಾರ್ತಿ ಏರ್‌ಟೆಲ್‌ ₹28,379 ಕೋಟಿ, ಇನ್ಫೊಸಿಸ್‌ ₹17,061 ಕೋಟಿ, ಎಲ್‌ಐಸಿ ₹16,381 ಕೋಟಿ, ಐಸಿಐಸಿಐ ಬ್ಯಾಂಕ್‌ ₹15,169 ಕೋಟಿ ಮತ್ತು ಐಟಿಸಿ ₹250 ಕೋಟಿ ಎಂ–ಕ್ಯಾಪ್‌ ಇಳಿಕೆಯಾಗಿದೆ.

ಹಿಂದುಸ್ತಾನ್‌ ಯೂನಿಲಿವರ್‌ ₹14,179 ಕೋಟಿ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್‌ ಮಾರುಕಟ್ಟೆ ಮೌಲ್ಯಕ್ಕೆ ₹3,735 ಕೋಟಿ ಸೇರ್ಪಡೆಯಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT