ಬೆಂಗಳೂರು: ಸ್ಮಾರ್ಟ್‌ಫೋನ್, ಇಂಟರ್‌ನೆಟ್ ಬಳಕೆ ಹೆಚ್ಚಾಗಿರುವ ಬೆನ್ನಲ್ಲೇ ಡಿಜಿಟಲ್ ಜಾಹೀರಾತಿನ ಮೇಲೆ ವ್ಯಯಿಸುವುದು ಕೂಡ ಜಾಸ್ತಿಯಾಗಿದ್ದು 2028ರ ವೇಳೆಗೆ ಈ ಆದಾಯ 21 ಶತಕೋಟಿ ಡಾಲರ್(ಅಂದಾಜು ₹17.3 ಲಕ್ಷ ಕೋಟಿ) ತಲುಪಲಿದೆ ಎಂದು ವರದಿಯೊಂದು ಹೇಳಿದೆ.

ವೈಯಕ್ತಿಕ ಕ್ರಿಯೇಟರ್‌ಗಳು ಮತ್ತು ಇನ್‌ಫ್ಲ್ಯುಯನ್ಸರ್‌ಗಳು ಬಲವರ್ಧನೆಗೊಳ್ಳುತ್ತಿದ್ದು ಡಿಜಿಟಲ್ ಜಾಹೀರಾತು ಗಮನಾರ್ಹವಾಗಿ, ಬಳಕೆದಾರರಿಂದ ರಚಿತ ಕಂಟೆಂಟ್(ಆಡಿಯೊ,ವಿಡಿಯೊ, ಟೆಕ್ಸ್ಟ್) ಬೆಳವಣಿಗೆಯು ಕಂಟೆಂಟ್ ಕ್ರಿಯೇಟರ್‌ಗಳು ಮತ್ತು ಸಾಮಾಜಿಕ ಜಾಲತಾಣದ ಪ್ರಭಾವಿಗಳಿಗೆ ತಮ್ಮ ಡಿಜಿಟಲ್ ಗುರುತನ್ನು ಹೆಚ್ಚಿಸಿಕೊಳ್ಳುವ ಅಧಿಕಾರ ನೀಡುತ್ತಿದೆ.

25–30 ಲಕ್ಷ ಕ್ರಿಯೇಟರ್‌ಗಳ ಮೇಲೆ 2028ರ ಸುಮಾರಿಗೆ 2.8–3.5 ಶತಕೋಟಿ ವ್ಯಯವಾಗಲಿದೆ ಎಂದು ರೆಡ್‌ಸೀರ್ ಕನ್ಸ್‌ಲ್ಟೆಂಟ್ ವರದಿ ಹೇಳಿದೆ. 2023ನೇ ಆರ್ಥಿಕ ವರ್ಷದಲ್ಲಿ ಡಿಜಿಟಲ್ ಜಾಹೀರಾತಿನ ಮೇಲಿನ ವ್ಯಯಿಸುವಿಕೆ ಭಾರತದಲ್ಲಿನ ಒಟ್ಟಾರೆ ಜಾಹೀರಾತು ವೆಚ್ಚದಲ್ಲಿ 65-70 ಪ್ರತಿಶತವನ್ನು ಹೊಂದಿದೆ.

ಭಾರತದಲ್ಲಿ ಡಿಜಿಟಲ್ ಜಾಹೀರಾತು ವೆಚ್ಚ ಗಮನಾರ್ಹವಾಗಿ ಕಡಿಮೆಯಾದ ವರದಿಗಳನ್ನು ನೋಡುತ್ತಿದ್ದೇವೆ. ಆದಾಗ್ಯೂ, ಕಂಪನಿಗಳು ಪ್ರಚಾರಕ್ಕಾಗಿ ಪ್ರಭಾವಶಾಲಿ ಮಾರ್ಕೆಟಿಂಗ್, ಗೇಮಿಂಗ್, ಡಿಜಿಟಲ್ ವೇದಿಕೆಗಳನ್ನು ಅವಲಂಬಿಸಿವೆ ಎಂದು ರೆಡ್‌ಸೀರ್ ಹೇಳಿದೆ.

ಇ-ಕಾಮರ್ಸ್ ವೇದಿಕೆಗಳು, ಶಾರ್ಟ್ ವಿಡಿಯೊ, ಒಟಿಟಿ, ಸಾಮಾಜಿಕ ಜಾಲತಾಣ, ಧೀರ್ಘಾವಧಿಯ ವಿಡಿಯೊ ಮತ್ತು ಸುದ್ದಿ ಸಂಸ್ಥೆಗಳು ಡಿಜಿಟಲ್ ಜಾಹೀರಾತಿನ ಮುಖ್ಯ ವೇದಿಕೆಗಳಾಗಿವೆ ಎಂದು ವರದಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.