ನವದೆಹಲಿ : ‘ಸಾಲದ ಹಣವನ್ನು ಉಚಿತ ವಿದ್ಯುತ್ ಪೂರೈಕೆಯಂತಹ ಜನಪ್ರಿಯ ಯೋಜನೆಗಳಿಗೆ ವಿನಿಯೋಗಿಸಬಾರದು. ಇಂತಹ ಸಾಹಸಕ್ಕೆ ಮುಂದಾದರೆ ಪಂಜಾಬ್ ರಾಜ್ಯದಂತೆ ಸಾಲದ ಸುಳಿಗೆ ಸಿಲುಕಬೇಕಾಗುತ್ತದೆ’ ಎಂದು ಕೇಂದ್ರ ಇಂಧನ ಸಚಿವ ಆರ್.ಕೆ. ಸಿಂಗ್ ಎಚ್ಚರಿಸಿದ್ದಾರೆ.

ಇತರೆ ಸರಕುಗಳಂತೆ ವಿದ್ಯುತ್ ಉತ್ಪಾದನೆಗೂ ಹಣ ವ್ಯಯಿಸಬೇಕಿದೆ. ಯಾವುದೇ ರಾಜ್ಯವು ಜನರಿಗೆ ಉಚಿತವಾಗಿ ವಿದ್ಯುತ್ ಪೂರೈಸಲು ಮುಂದಾದರೆ ಅದರ ಉತ್ಪಾದನೆಗೆ ಅಗತ್ಯವಿರುವಷ್ಟು ಹಣವನ್ನು ಆ ರಾಜ್ಯಗಳೇ ಪಾವತಿಸಬೇಕಿದೆ ಎಂದು ಪಿಟಿಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

2022ರಲ್ಲಿ ಪಂಜಾಬ್ನಲ್ಲಿ ಆಮ್ ಆದ್ಮಿ ಪಕ್ಷದ ಸರ್ಕಾರ ಅಧಿಕಾರಕ್ಕೆ ಬಂದಿತು. ಪ್ರತಿ ಮನೆಗೆ 300 ಯೂನಿಟ್ ಉಚಿತ ವಿದ್ಯುತ್ ಪೂರೈಕೆ ಸೇರಿ ಹಲವು ಜನಪ್ರಿಯ ಯೋಜನೆಗಳನ್ನು ಜಾರಿಗೆ ತಂದಿತು. ಪಂಜಾಬ್ ಈಗಾಗಲೇ ಸಾಲದಿಂದ ಬಳಲುತ್ತಿದೆ. ಅಧಿಕಾರಕ್ಕೆ ಎರಡು ವರ್ಷಗಳಲ್ಲಿ ಸರ್ಕಾರವು ₹47 ಸಾವಿರ ಕೋಟಿ ಸಾಲ ಮಾಡಿದೆ. ಹಲವು ರಾಜ್ಯಗಳು ಇದೇ ಮಾದರಿಯಲ್ಲಿ ಸಾಲದ ಸುಳಿಗೆ ಸಿಲುಕಿವೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.