ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಎಸ್‌ಬಿಐ: ಮೂಲ ಸೌಕರ್ಯ ಬಾಂಡ್‌ ವಿತರಣೆ

Published 26 ಜೂನ್ 2024, 15:59 IST
Last Updated 26 ಜೂನ್ 2024, 15:59 IST
ಅಕ್ಷರ ಗಾತ್ರ

ನವದೆಹಲಿ: ಸರ್ಕಾರಿ ಸ್ವಾಮ್ಯದ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾವು (ಎಸ್‌ಬಿಐ) ಮೂಲ ಸೌಕರ್ಯ ಬಾಂಡ್‌ ವಿತರಣೆ ಮೂಲಕ ₹10 ಸಾವಿರ ಕೋಟಿ ಬಂಡವಾಳ ಸಂಗ್ರಹಿಸಲು ಮುಂದಾಗಿದೆ.

‘ಈ ಬಾಂಡ್‌ಗಳಿಗೆ ವಾರ್ಷಿಕ ಶೇ 7.36ರಷ್ಟು ಬಡ್ಡಿ ದರ ನಿಗದಿಪಡಿಸಲಾಗಿದೆ. ನಿರೀಕ್ಷೆಗೂ ಮೀರಿ ಬಾಂಡ್‌ ಖರೀದಿಗೆ ₹19,884 ಕೋಟಿ ಮೌಲ್ಯದ 143 ಬಿಡ್‌ಗಳು ಸಲ್ಲಿಕೆಯಾಗಿವೆ’ ಎಂದು ಎಸ್‌ಬಿಐ, ಷೇರುಪೇಟೆಗೆ ಬುಧವಾರ ಮಾಹಿತಿ ನೀಡಿದೆ. 

ಭವಿಷ್ಯ ನಿಧಿ, ಪಿಂಚಣಿ ನಿಧಿ, ವಿಮಾ ಕಂಪನಿಗಳು, ಮ್ಯೂಚುವಲ್‌ ಫಂಡ್‌ ಕಂಪನಿಗಳು ಹಾಗೂ ಕಾರ್ಪೊರೇಟ್‌ ಕಂಪನಿಗಳು ಬಿಡ್‌ ಸಲ್ಲಿಸಿವೆ. ದೀರ್ಘಾವಧಿಯ ಈ ಬಾಂಡ್‌ಗಳಿಂದ ಸಂಗ್ರಹಿಸುವ ಬಂಡವಾಳವನ್ನು ಕೈಗೆಟಕುವ ವಸತಿ ನಿರ್ಮಾಣದ ಮೂಲ ಸೌಕರ್ಯಕ್ಕೆ ಸಾಲ ನೀಡಲು ವಿನಿಯೋಗಿಸಲಾಗುವುದು ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT