ಬೆಂಗಳೂರು: ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಅಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಿದ್ದ ಸುಬ್ರಾಯ ಎಂ. ಹೆಗಡೆ ಮತ್ತು ಡಿ. ಶಿವಣ್ಣ ಅವರು ಜೊತೆಯಾಗಿ, ಇಂಗ್ಲಿಷ್–ಕನ್ನಡ ತೆರಿಗೆ ಪದಕೋಶ ರಚಿಸಿದ್ದಾರೆ.

220 ಪುಟಗಳು ಇರುವ ಈ ಸಂಕ್ಷಿಪ್ತ ಪದಕೋಶವು ಶುಕ್ರವಾರ ಬಿಡುಗಡೆ ಆಗುತ್ತಿದೆ. ‘ವಾಣಿಜ್ಯ ತೆರಿಗೆ ವಿಷಯದಲ್ಲಿ ಕನ್ನಡದ ಪದಗಳನ್ನು ಬಳಸುವಾಗ ಏಕರೂಪತೆ ಇರಬೇಕು ಎಂಬ ಉದ್ದೇಶದಿಂದ ಈ ಶಬ್ದಕೋಶ ರಚಿಸಿದ್ದೇವೆ. ಇಲ್ಲಿ ಇಂಗ್ಲಿಷ್, ಲ್ಯಾಟಿನ್, ಗ್ರೀಕ್ ಮೂಲದ ಪದಗಳಿಗೆ ವಾಣಿಜ್ಯ ತೆರಿಗೆಯ ಚೌಕಟ್ಟಿನಲ್ಲಿ ಇರುವ ಕನ್ನಡದ ಅರ್ಥ ವಿವರಣೆಯನ್ನು ನೀಡಲಾಗಿದೆ’ ಎಂದು ಹೆಗಡೆ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. ಇಂತಹ ಪ್ರಯತ್ನ ಕನ್ನಡದಲ್ಲಿ ಈ ಮೊದಲು ಆದಂತಿಲ್ಲ ಎಂದು ಅವರು ಹೇಳಿದರು.

‘ಇಡೀ ದೇಶಕ್ಕೆ ಅನ್ವಯ ಆಗುವಂತೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆ 2017ರಲ್ಲಿ ಜಾರಿಗೆ ಬಂತು. ಇದಾದ ನಂತರದಲ್ಲಿ, ತೆರಿಗೆಗೆ ಸಂಬಂಧಿಸಿದ ಬರವಣಿಗೆಗಳಲ್ಲಿ ಏಕರೂಪತೆ ಹಾಗೂ ಖಚಿತತೆ ಬರಬೇಕಾದರೆ ಕನ್ನಡದಲ್ಲಿ ಒಂದು ಪ್ರತ್ಯೇಕ ಪದಕೋಶದ ಅಗತ್ಯ ಇದೆ ಎಂದು ಅನ್ನಿಸಿತು. ಹಾಗಾಗಿ ನಾವಿಬ್ಬರೂ ಈ ಪದಕೋಶದ ರಚನೆಯಲ್ಲಿ ತೊಡಗಿಸಿಕೊಂಡೆವು’ ಎಂದು ಶಿವಣ್ಣ ಅವರುಹೇಳಿದರು.

ಈ ಕೃತಿಯನ್ನು ವಿಧಾನಸಭೆಯ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಬೆಂಗಳೂರಿನಲ್ಲಿ ಬಿಡುಗಡೆ ಮಾಡಲಿದ್ದಾರೆ. ಐದು ಸಾವಿರಕ್ಕೂ ಹೆಚ್ಚಿನ ಪದಗಳಿಗೆ ಕನ್ನಡದಲ್ಲಿ ಅರ್ಥ ವಿವರಣೆ ಈ ಕೃತಿಯಲ್ಲಿ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.