ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಯಮಹಾ ದ್ವಿಚಕ್ರ ವಾಹನ ಮಾರಾಟ ಶೇ 14ರಷ್ಟು ಏರಿಕೆ

Published 4 ಜುಲೈ 2024, 16:25 IST
Last Updated 28 ಆಗಸ್ಟ್ 2024, 11:17 IST
ಅಕ್ಷರ ಗಾತ್ರ

ಬೆಂಗಳೂರು: ಯಮಹಾ ಬ್ರಾಂಡ್ ತಮ್ಮ ಪ್ರೀಮಿಯಂ ದ್ವಿಚಕ್ರ ವಾಹನಗಳ ಮಾರಾಟದಲ್ಲಿಯೂ ಹೆಚ್ಚಿನ ಸಾಧನೆ ಮಾಡಿದ್ದು, 2024ರಲ್ಲಿ ಮೊದಲ ಆರು ತಿಂಗಳಲ್ಲಿ (ಜನವರಿಯಿಂದ ಜೂನ್) 25 ಸಾವಿರಕ್ಕೂ ಹೆಚ್ಚು ಬೈಕ್, ಸ್ಕೂಟರ್‌ಗಳು ಮಾರಾಟಗೊಂಡಿವೆ ಎಂದು ಕಂಪನಿ ತಿಳಿಸಿದೆ.

ಕಳೆದ ವರ್ಷ ಇದೇ ಅವಧಿಯಲ್ಲಿ ಮಾರಾಟಗೊಂಡ ಮಾರಾಟ ಸಂಖ್ಯೆಗಿಂತ ಈ ವರ್ಷ ಶೇ.22 ಹೆಚ್ಚು ಬೆಳವಣಿಗೆ ಉಂಟಾಗಿದೆ. ದಕ್ಷಿಣ ಭಾರತದಲ್ಲಿ ಶೇ. 21 ಬೆಳವಣಿಗೆಯಾಗಿದ್ದು, 1.57 ಲಕ್ಷ ವಾಹನಗಳು ಮಾರಾಟವಾಗಿವೆ ಎಂದು ಯಮಹಾ ತಿಳಿಸಿದೆ. ಬ್ಲೂ ಸ್ಕ್ವೇರ್ ಶೋರೂಮ್ ಮೂಲಕ ವಿಶೇಷವಾಗಿ ಪ್ರೀಮಿಯಂ ಉತ್ಪನ್ನಗಳು ಹೆಚ್ಚು ಮಾರಾಟವಾಗಿವೆ.

ಈ ಪ್ರೀಮಿಯಂ ಮಳಿಗೆಗಳಲ್ಲಿ ಯಮಹಾದ ಆರ್3, ಎಂಟಿ-03, ಏರಾಕ್ಸ್ 155, ವೈಝಡ್ಎಫ್- ಆರ್15 ವಿ4, ಎಂಟಿ-15 ವಿ2, ಎಫ್ ಝಡ್ ಎಸ್-ಎಫ್ಐ ಸರಣಿ, ಎಫ್ ಝಡ್-ಎಕ್ಸ್, ಫ್ಯಾಸಿನೋ 125 ಎಫ್ಐ ಹೈಬ್ರಿಡ್, ರೇ-ಝಡ್ಆರ್ 125 ಎಫ್ಐ ಹೈಬ್ರಿಡ್ ಇತ್ಯಾದಿ ಲಭ್ಯವಿದೆ.

ಯುವ ಸಮುದಾಯದ, ವಿಶೇಷವಾಗಿ 18-25 ವಯಸ್ಸಿನವರ ಬೇಡಿಕೆಗಳಿಗೆ ಅನುಗುಣವಾಗಿ ಪ್ರೀಮಿಯಂ ದ್ವಿಚಕ್ರ ವಾಹನಗಳ ಮಾರಾಟವನ್ನು ವೃದ್ಧಿಸುವತ್ತ ನಾವು ಗಮನ ಕೇಂದ್ರೀಕರಿಸಿದ್ದು, ಗ್ರಾಹಕ ಕೇಂದ್ರಿತ ಕಾರ್ಯವಿಧಾನ ಮತ್ತು ವೈವಿಧ್ಯಮಯ ಉತ್ಪಾದನಾ ಕಾರ್ಯತಂತ್ರಗಳೊಂದಿಗೆ ಅವರೆಲ್ಲರನ್ನೂ ಯಮಹಾಕ್ಕೆ ನಿಷ್ಠರಾಗಿರುವ ಗ್ರಾಹಕರನ್ನಾಗಿ ಪರಿವರ್ತಿಸುವುದು ನಮ್ಮ ಗುರಿ ಎಂದು ಯಮಹಾ ಮೋಟರ್ ಇಂಡಿಯಾ ಮಾರಾಟ ವಿಭಾಗದ ಹಿರಿಯ ಉಪಾಧ್ಯಕ್ಷ ರವೀಂದರ್ ಸಿಂಗ್ ಹೇಳಿದ್ದಾರೆ.

ಹೆಚ್ಚಿನ ಸಿಸಿ ಬೈಕ್‌ಗಳ ಮಾರಾಟದಲ್ಲಿ ಏರಿಕೆಯಾಗಿದ್ದು, ದೃಢವಾದ ಬೆಳವಣಿಗೆ ದಾಖಲಿಸುವ ಜೊತೆಗೆ ಮಾರುಕಟ್ಟೆ ಪಾಲನ್ನು ಹೆಚ್ಚಿಸಿಕೊಂಡಿದೆ ಎಂದು ಪ್ರಕಟಣೆ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT