ಮಂಗಳೂರು: 2024–25ನೇ ಹಣಕಾಸು ವರ್ಷದ ಜೂನ್ ತ್ರೈಮಾಸಿಕ ದಲ್ಲಿ ಕರ್ಣಾಟಕ ಬ್ಯಾಂಕ್, ₹400 ಕೋಟಿ ನಿವ್ವಳ ಲಾಭ ದಾಖಲಿಸಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ (₹370 ಕೋಟಿ) ಲಾಭದಲ್ಲಿ ಶೇ 7.99ರಷ್ಟು ಏರಿಕೆಯಾಗಿದೆ ಎಂದು ಬ್ಯಾಂಕ್ ತಿಳಿಸಿದೆ.

ಮಂಗಳೂರಿನಲ್ಲಿರುವ ಬ್ಯಾಂಕ್ನ ಕೇಂದ್ರ ಕಚೇರಿಯಲ್ಲಿ ಬುಧವಾರ ನಡೆದ ಆಡಳಿತ ಮಂಡಳಿಯ ನಿರ್ದೇಶಕರ ಸಭೆಯಲ್ಲಿ ಮೊದಲ ತ್ರೈಮಾಸಿಕದ ಆರ್ಥಿಕ ಫಲಿತಾಂಶಕ್ಕೆ ಅನುಮೋದನೆ ನೀಡಲಾಯಿತು.

ಕಳೆದ ವರ್ಷಕ್ಕೆ ಹೋಲಿಸಿದರೆ ಬ್ಯಾಂಕ್ನ ಒಟ್ಟಾರೆ ವಹಿವಾಟು ಶೇ 17.10ರಷ್ಟು ಏರಿಕೆಯಾಗಿ ₹1,75,619 ಕೋಟಿಗೆ ತಲುಪಿದೆ (ಕಳೆದ ವರ್ಷ ₹1,49,971 ಕೋಟಿ). ನಿಶ್ಚಿತ ಠೇವಣಿ ಪ್ರಮಾಣ ಶೇ 15.18ರಷ್ಟು ಏರಿಕೆಯಾಗಿ ₹1,00,164 ಕೋಟಿ (ಕಳೆದ ವರ್ಷ ₹86,960 ಕೋಟಿ) ಆಗಿದೆ. ಮುಂಗಡ ಪ್ರಮಾಣ ಶೇ 19.75ರಷ್ಟು ಏರಿಕೆಯಾಗಿ ₹75,455 ಕೋಟಿಗೆ (ಕಳೆದ ವರ್ಷ ₹63,012 ಕೋಟಿ) ತಲುಪಿದೆ.

ವಸೂಲಾಗದ ಸಾಲದ ಸರಾಸರಿ ಪ್ರಮಾಣ (ಜಿಎನ್ಪಿಎ) ಶೇ 3.54ಕ್ಕೆ (ಕಳೆದ ವರ್ಷ ಶೇ 3.68) ಇಳಿಕೆಯಾಗಿದೆ. ನಿವ್ವಳ ಎನ್ಪಿಎ ಕಳೆದ ವರ್ಷ ಶೇ 1.43ರಷ್ಟಿದ್ದರೆ ಈ ಬಾರಿ ಶೇ 1.66ಕ್ಕೆ ಏರಿಕೆಯಾಗಿದೆ.

‘ಒಟ್ಟಾರೆ ವಹಿವಾಟು, ಠೇವಣಿ ಮತ್ತು ಸಾಲ ವಿತರಣೆ ಪ್ರಮಾಣ ಮುಂತಾದ ವಿವಿಧ ಭಾಗಗಳಲ್ಲಿ ಮೊದಲ ತ್ರೈಮಾಸಿಕದಲ್ಲಿ ಹಲವು ಮೈಲುಗಲ್ಲು ಗಳನ್ನು ಸ್ಥಾಪಿಸಲು ಸಾಧ್ಯವಾಗಿದೆ’ ಎಂದು ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಹಣಾ ಧಿಕಾರಿ ಶ್ರೀಕೃಷ್ಣನ್ ಎಚ್. ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.