ಕೆ. ವೀರಣ್ಣ,ರಾಯಚೂರು

l ಪ್ರಶ್ನೆ: ನಾನು 1990ರಲ್ಲಿ ಮನೆ ಕಟ್ಟಿಸಿದ್ದೇನೆ. ಈಗ ಅದನ್ನು ಮಾರಾಟ ಮಾಡಬೇಕು ಅಂದುಕೊಂಡಿದ್ದೇನೆ. ಅದು ಸುಮಾರು ₹ 25-30 ಲಕ್ಷಕ್ಕೆ ಮಾರಾಟವಾಗಬಹುದು. ಅದರಿಂದ ಬರುವ ಹಣದಿಂದ ₹10-15 ಲಕ್ಷದೊಳಗೆ ಒಂದು ಮನೆಯನ್ನು ಕಟ್ಟಿಸಿಕೊಳ್ಳಬೇಕೆಂದಿದ್ದೇನೆ. ಇದರಿಂದ ನನಗೆ ಬಂಡವಾಳ ವೃದ್ಧಿ ತೆರಿಗೆ ಬರುವುದೇ? ಹಣದುಬ್ಬರ ಸೂಚ್ಯಂಕ 1990ರಲ್ಲಿ 11.79 ಮತ್ತು 2022ರಲ್ಲಿ ಅಂದಾಜು 5.70 ಇದೆ. ಇದರ ಪ್ರಕಾರ ಮನೆಯ ಪ್ರಸ್ತುತ ಬೆಲೆ ಅಂದಾಜಿಸುವುದು ಹೇಗೆ?

ಉತ್ತರ: ಯಾವುದೇ ಬಂಡವಾಳ ಆಸ್ತಿ ಮಾರಾಟ ಮಾಡಿದಾಗ ಆದಾಯ ತೆರಿಗೆ ಕಾನೂನಿನ ಅನ್ವಯ ಶೇಕಡ 20ರಷ್ಟು ಬಂಡವಾಳ ವೃದ್ಧಿ ತೆರಿಗೆ ಅನ್ವಯಿಸುತ್ತದೆ. ನೀವು ಮೇಲೆ ಉಲ್ಲೇಖಿಸಿರುವುದು ಹಣದುಬ್ಬರದ ಸೂಚ್ಯಂಕವಷ್ಟೇ? ಆದಾಯ ತೆರಿಗೆ ಲೆಕ್ಕಹಾಕಲು ಬೇರೆ ಸೂಚ್ಯಂಕವನ್ನು ಪ್ರತಿ ವರ್ಷ ಆದಾಯ ತೆರಿಗೆ ಇಲಾಖೆ ಬಿಡುಗಡೆ ಮಾಡುತ್ತದೆ. ಪ್ರಸ್ತುತ 2001-02ನೇ ಸಾಲಿನಿಂದ ಅನ್ವಯಿಸುವಂತೆ ಹಳೆಯ ಸೂಚ್ಯಂಕವನ್ನು (1981-2017) ಮರು ಹೊಂದಾಣಿಕೆ ಮಾಡಿ ಅದರ ಮೌಲ್ಯ 100 ಎಂದು ಪರಿಗಣಿಸಲಾಗಿದೆ. ಆದೇ ರೀತಿ ಆರ್ಥಿಕ ವರ್ಷ 2021-22ಕ್ಕೆ ಅನ್ವಯವಾಗುವ ಮೌಲ್ಯ 317 ಆಗಿದೆ. ನೀವು ಮುಂದಿನ ವರ್ಷ ಮನೆಯನ್ನು ಮಾರಾಟ ಮಾಡಿದಾಗ ಪರಿಗಣಿಸಬೇಕಾದ ಮೌಲ್ಯ ತುಸು ವೃದ್ಧಿಯಾಗಬಹುದು.

ನಿಮ್ಮ ಮನೆ 2001ರ ಏಪ್ರಿಲ್ 1ಕ್ಕಿಂತ ಹಿಂದೆಯೇ ಕಟ್ಟಿಸಿರುವ ಕಾರಣ, ಆ ದಿನದಂದು (2001ರ ಏಪ್ರಿಲ್ 1) ನಿಮ್ಮ ಆಸ್ತಿಯ ನ್ಯಾಯೋಚಿತ ಮೌಲ್ಯ (Fare Market Value) ಏನೆಂಬುದನ್ನು ತಿಳಿದುಕೊಳ್ಳಿ. ಈ ಮೌಲ್ಯವನ್ನು ಆಸ್ತಿ ಮಾರಾಟ ಮಾಡಲಾದ ವರ್ಷಕ್ಕೆ ಅನ್ವಯವಾಗುವ ಸೂಚ್ಯಂಕದಿಂದ (ಉದಾಹರಣೆಗೆ 317) ಗುಣಿಸಿ ಬಂದ ಮೊತ್ತವನ್ನು ಖರೀದಿಸಿದ ವರ್ಷಕ್ಕೆ ಅನ್ವಯಿಸುವ ಸೂಚ್ಯಂಕದಿಂದ ಭಾಗಿಸಿದಾಗ ಬರುವ ಸಂಖ್ಯೆಯೇ ನಿಮ್ಮ ಆಸ್ತಿಯ ಹಣದುಬ್ಬರ ಸೂಚ್ಯಂಕ ಸರಿದೂಗಿಸಿದ ಪ್ರಸ್ತುತ ಮೌಲ್ಯ. ನಿಮ್ಮ ಆಸ್ತಿ 2001ಕ್ಕಿಂತ ಮೊದಲೇ ಖರೀದಿಸಿರುವ ಕಾರಣ, ಮೇಲೆ ತಿಳಿಸಿರುವಂತೆ, ಈ ಮೌಲ್ಯಾಂಕ 100. ಮಾರಾಟದ ಮೌಲ್ಯ ಹಣದುಬ್ಬರ ಸರಿದೂಗಿಸಿದ ಮೊತ್ತಕ್ಕಿಂತ ಅಧಿಕವಿದ್ದರೆ ಲಾಭ, ಕಡಿಮೆ ಇದ್ದರೆ ನಷ್ಟ.

ಆದಾಯ ತೆರಿಗೆಯ ನಿಯಮ 54ರ ಪ್ರಕಾರ ಹೊಸ ಮನೆಯ ಖರೀದಿ ಅಥವಾ ನಿರ್ಮಾಣಕ್ಕೆ ಮನೆಯ ಮಾರಾಟದಿಂದ ಬರುವ ಬಂಡವಾಳ ವೃದ್ಧಿಯ ಮೊತ್ತಕ್ಕೆ ತೆರಿಗೆ ವಿನಾಯಿತಿ ಇದೆ. ಮೇಲಿನ ಲೆಕ್ಕದಂತೆ, ನಿಮ್ಮ ಹೊಸ ಮನೆಯ ಖರೀದಿ/ನಿರ್ಮಾಣ ವೆಚ್ಚ, ಲಾಭಕ್ಕಿಂತ ಅಧಿಕ ಇದ್ದರೆ, ಸಂಪೂರ್ಣ ತೆರಿಗೆ ವಿನಾಯಿತಿ ಸಿಗುತ್ತದೆ. ಒಂದು ವೇಳೆ, ಅದಕ್ಕಿಂತ ಕಡಿಮೆ ಇದ್ದರೆ, ವ್ಯತ್ಯಾಸದ ಮೊತ್ತದ ಮೇಲಷ್ಟೇ ತೆರಿಗೆ ಅನ್ವಯಿಸುತ್ತದೆ. ಒಟ್ಟಾರೆ ಮೌಲ್ಯ ನಷ್ಟವಾದರೆ, ಮುಂದಿನ ಎಂಟು ವರ್ಷ ಅದೇ ರೀತಿಯ ಆದಾಯವಿದ್ದ ಸನ್ನಿವೇಶದಲ್ಲಿ ಅದರೊಡನೆ ವಜಾ ಮಾಡುವ ಅವಕಾಶವಿದೆ.

ರಮೇಶ ಹೇಮರೆಡ್ಡಿ,ಕನಕಗಿರಿ, ಕೊಪ್ಪಳ

l ಪ್ರಶ್ನೆ: ನಾನು 2020ರ ಡಿಸೆಂಬರ್ ತಿಂಗಳಿನಿಂದ ಉಪನ್ಯಾಸಕನಾಗಿ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದೇನೆ. ನನಗೆ ಅಂದಿನಿಂದ ಬರಬೇಕಾಗಿದ್ದ ವೇತನವು 2021ರ ಮೇ ತಿಂಗಳಲ್ಲಿ ಸಂದಾಯವಾಗಿದೆ. ಈಗ ನಾನು 2021-22ನೇ ಹಣಕಾಸು ವರ್ಷದಲ್ಲಿ ಈ ವೇತನ ಬಾಕಿ ಹಣವನ್ನು ಪ್ರಸ್ತುತ ವರ್ಷದ ಆದಾಯಕ್ಕೆ ಸೇರಿಸಿ ಆದಾಯ ತೆರಿಗೆ ಪಾವತಿಸಬೇಕೇ? ಈ ವೇತನ ಬಾಕಿ ಹಣ ಸೇರಿಸದಿದ್ದರೆ ನನ್ನ ಪ್ರಸ್ತುತ ವರ್ಷದ ತೆರಿಗೆಗೊಳಪಡುವ ಆದಾಯ ₹ 5 ಲಕ್ಷಕ್ಕಿಂತ ಕಡಿಮೆ ಇರುತ್ತದೆ. 2020-21ನೇ ಸಾಲಿನಲ್ಲಿ ನಾನು ಯಾವುದೇ ಕೆಲಸದಲ್ಲಿ ಇರಲಿಲ್ಲ. ಆದ್ದರಿಂದ ನನಗೆ ಯಾವುದೇ ಆದಾಯವಿರಲಿಲ್ಲ. ಈ ಬಗ್ಗೆ ನನಗೆ ಮಾರ್ಗದರ್ಶನ ನೀಡಿ. ತಮ್ಮ ಮಾರ್ಗದರ್ಶನದಿಂದ ನನ್ನ ಹಾಗೆ 2020ರ ಡಿಸೆಂಬರ್‌ನಲ್ಲಿ ಕೆಲಸಕ್ಕೆ ಸೇರಿ 2021ರ ಮೇ ತಿಂಗಳಲ್ಲಿ ವೇತನ ಬಾಕಿ ರೂಪದಲ್ಲಿ ಹಣ ಪಡೆದ ಅನೇಕರಿಗೆ ಅನುಕೂಲವಾಗುತ್ತದೆ.

ಉತ್ತರ: ಪ್ರತಿ ವರ್ಷ ಮೇ ತಿಂಗಳೊಳಗೆ, ಉದ್ಯೋಗದಾತರು ತಮ್ಮ ಉದ್ಯೋಗಿಗಳಿಗೆ ಆದಾಯ ತೆರಿಗೆ ಕಾನೂನಿನನ್ವಯ ‘ಫಾರಂ 16’ ಕೊಡಬೇಕು. ಉದ್ಯೋಗಿಗಳ ವೇತನದಿಂದ ಯಾವುದೇ ತೆರಿಗೆ ಕಡಿತಗೊಳಿಸಿದ್ದರೆ ಅಥವಾ ಅವರ ವಾರ್ಷಿಕ ಆದಾಯ, ತೆರಿಗೆ ವಿನಾಯಿತಿಯ ಗರಿಷ್ಠ ಮೊತ್ತವಾದ ₹ 2.50 ಲಕ್ಷಕ್ಕಿಂತ ಅಧಿಕವಿದ್ದರೆ ಇದನ್ನು ಕೊಡಬೇಕು. ನಿಮ್ಮ ವೇತನ ಬಾಕಿ ಮೊತ್ತವನ್ನು ಹೊರತುಪಡಿಸಿದ ಆದಾಯ ₹ 5 ಲಕ್ಷಕ್ಕಿಂತ ಕಡಿಮೆ ಎಂದಿದ್ದೀರಿ. ಇದು ₹ 2.50 ಲಕ್ಷಕ್ಕಿಂತ ಅಧಿಕವೆಂದು ಭಾವಿಸೋಣ. ಹಾಗಾಗಿ ನೀವು ತೆರಿಗೆ ವಿವರ ಸಲ್ಲಿಸುವುದು ಅನಿವಾರ್ಯ. ನಿಮ್ಮಲ್ಲಿ ಆದಾಯ ತೆರಿಗೆ ವಿನಾಯಿತಿ ಕಲ್ಪಿಸುವ ಯಾವುದೇ ಹೂಡಿಕೆಗಳಿದ್ದಲ್ಲಿ ಅದನ್ನು ನಿಮ್ಮ ಒಟ್ಟು ಆದಾಯದಿಂದ ಕಡಿತಗೊಳಿಸಲಾಗುತ್ತದೆ. ಆ ಮಾಹಿತಿಯನ್ನು ನಿಮ್ಮ ಸಂಸ್ಥೆಗೆ ಕೊಡಿ. ಒಟ್ಟು ತೆರಿಗೆ ಲೆಕ್ಕ ಹಾಕುವಾಗ ನೀವು ತೆರಿಗೆ ಕಟ್ಟುವ ಪ್ರಮೇಯ ಬರದಿದ್ದರೂ, ನಿಯಮದ ಅನ್ವಯ ಆದಾಯ ಹಾಗೂ ಕಡಿತಗಳನ್ನು ತೋರಿಸಿ ವಿವರ ಸಲ್ಲಿಸಬೇಕಾಗುತ್ತದೆ.

ವೇತನ ಬಾಕಿ ಮೊತ್ತಕ್ಕೆ ಸಂಬಂಧಪಟ್ಟಂತೆ, ನಿಮ್ಮ ಸಂಸ್ಥೆ ಕಳೆದ ವರ್ಷದ ನಾಲ್ಕು ತಿಂಗಳ ಆದಾಯವನ್ನು 2021-22ನೇ ಹಣಕಾಸು ವರ್ಷದಲ್ಲಿ ಪಾವತಿಸಿರುವುದರಿಂದ ಆ ಮೊತ್ತವನ್ನು ಪ್ರಸ್ತುತ ವರ್ಷದ ‘ಫಾರಂ 16’ರಲ್ಲಿ ಸೇರ್ಪಡೆಗೊಳಿಸಬೇಕಾಗುತ್ತದೆ. ಆದರೆ ಆದಾಯವು 2020-21ಕ್ಕೆ ಸಂಬಂಧಿಸಿದ್ದಾಗಿರುವ ಕಾರಣ ನೀವು ತೆರಿಗೆ ವಿವರ ಸಲ್ಲಿಸುವಾಗ ಸೆಕ್ಷನ್ 89ರ ಅಡಿ ಯಾವುದೇ ಹಿಂದಿನ ವರ್ಷಗಳ ವೇತನ ಬಾಕಿಗೆ ಸಂಬಂಧಪಟ್ಟಂತೆ ತೆರಿಗೆ ರಿಯಾಯಿತಿ ಪಡೆಯಬಹುದು. ಇದಕ್ಕಾಗಿ ಆದಾಯ ತೆರಿಗೆಯ ‘ಫಾರಂ 10ಇ’ಯನ್ನು ಮೊದಲು ಸಲ್ಲಿಸಬೇಕು. ವಿವರ ಸಲ್ಲಿಸುವ ಮೊದಲು ಎಲ್ಲಾ ಮಾಹಿತಿಯೊಡನೆ ತೆರಿಗೆ ಸಲಹೆಗಾರರನ್ನು ಸಂಪರ್ಕಿಸಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.