ವಾಷಿಂಗ್ಟನ್: ‘ಕೋವಿಡ್–19‘ರ ವಿರುದ್ಧ ಹೋರಾಡುತ್ತಿರುವ ಭಾರತಕ್ಕೆ ವೆಂಟಿಲೇಟರ್‌ಗಳನ್ನು ಪೂರೈಸುವುದಾಗಿ ಅಮೆರಿಕ ಯೋಗ ಮತ್ತು ಧ್ಯಾನ ಅಕಾಡೆಮಿ (ಎಎವೈಎಂ) ಪ್ರಕಟಿಸಿದೆ.

ಅಂತರರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ವರ್ಚುವಲ್ ಆಗಿ ಆಯೋಜಿಸಿರುವ ‘ಯೋಗಾ‘ ಕಾನ್ ಯುಎಸ್‌ಎ–2021‘ ಸಮ್ಮೇಳನದಲ್ಲಿ ಎಎವೈಎಂ ಸಂಸ್ಥೆ ಈ ನೆರವು ಪ್ರಕಟಿಸಿದೆ. ಕಾರ್ಯಕ್ರಮದಲ್ಲಿ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ. ಮುರುಳೀಧರನ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಎಎವೈಎಂ ಅಧ್ಯಕ್ಷ ಡಾ. ಇಂದ್ರಾನಿಲ್ ಬಸು ರೇ ಮಾತನಾಡಿ ‘ಭಾರತದಲ್ಲಿ ಕೋವಿಡ್ ಎರಡನೇ ಅಲೆ ಇನ್ನೂ ಕಡಿಮೆಯಾಗಿಲ್ಲ. ಈಗ ಮೂರನೇ ಅಲೆಯ ಲಕ್ಷಣಗಳು ಕಾಣಿಸಿಕೊಳ್ಳುತ್ತಿವೆ. ಕೋವಿಡ್ ವಿರುದ್ಧ ಹೋರಾಡುವುದಕ್ಕಾಗಿ ಭಾರತಕ್ಕೆ ವೆಂಟಿಲೇಟರ್‌ಗಳನ್ನು ಕಳುಹಿಸುತ್ತಿದ್ದೇವೆ’ ಎಂದರು.

‘ಡೆಲ್ಟಾ ವೈರಸ್ ಸೃಷ್ಟಿಸುತ್ತಿರುವ ಅವಾಂತರವನ್ನು ಗಮನಿಸಿದರೆ, ಭಾರತಕ್ಕೆ ಆಮ್ಲಜನಕ ಕಾನ್ಸನ್‌ಟ್ರೇಟರ್‌ಗಳಿಗಿಂತ ವೆಂಟಿಲೇಟರ್‌ಗಳ ಹೆಚ್ಚಿನ ಅಗತ್ಯವಿರಬಹುದೆಂದು ನಾವು ಅಂದಾಜಿಸಿದ್ದೇವೆ‘ ಎಂದು ಜಾಗತಿಕ ವಿಪತ್ತು ಉಪಕ್ರಮದ ಮುಖ್ಯಸ್ಥ ಮತ್ತು ಎಎವೈಎಂನ ಉಪಾಧ್ಯಕ್ಷ ಡಾ.ಅಮಿತ್ ಚಕ್ರವರ್ತಿ ಹೇಳಿದರು.

‘ಏಕಾಗ್ರತೆ ಮತ್ತು ಸಕಾರಾತ್ಮಕ ಚಿಂತನೆಗಳು, ದೃಢವಾದ ಮನಸ್ಸು ಮತ್ತು ದೇಹವನ್ನು ಆರೋಗ್ಯಕರವಾಗಿ ಇಟ್ಟಕೊಳ್ಳಲು ಜಗತ್ತಿಗೆ ಯೋಗ ಮತ್ತು ಧ್ಯಾನದ ಅಗತ್ಯವಿದೆ‘ ಎಂದು ಸಚಿವ ಮುರಳೀಧರನ್ ಪ್ರತಿಪಾದಿಸಿದರು.

ಎಸ್‌ವಿವೈಎಎಸ್‌ಎ ಕುಲಪತಿ ಡಾ. ಎಚ್. ಆರ್ ನಾಗೇಂದ್ರ, ದೀಪ ಬೆಳಗುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಎಎವೈಎಂ ಅವರ ದೂರದೃಷ್ಟಿ ಮತ್ತು ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟಕ್ಕೆ ಯೋಗ ಕೇಂದ್ರ ನೀಡಿರುವ ಕೊಡುಗೆ ಕುರಿತು ವಿವರಿಸಿದರು.

ಆಧುನಿಕ ಔಷಷಧವನ್ನು ಯೋಗದೊಂದಿಗೆ ಸಂಯೋಜಿಸುವ ಮೂಲಕ ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವ ನಿಟ್ಟಿನಲ್ಲಿ ಎಎವೈಎಂನ ನಿರಂತರ ಕೊಡುಗೆಯನ್ನು ನಾಗೇಂದ್ರ ಶ್ಲಾಘಿಸಿದರು.

ಯೋಗ ಸಮ್ಮೇಳನದಲ್ಲಿ ಲೇಖಕರಾದ ದೀಪಕ್ ಚೋಪ್ರಾ, ಡೇವಿಡ್ ಫ್ರೊಲೆ ಮತ್ತು ಇಂಟರ್‌ನ್ಯಾಷನಲ್ ಅಸೋಸಿಯೇಷನ್ ಆಫ್ ಯೋಗ ಥೆರಪಿಸ್ಟ್ಸ್ (ಐಎವೈಟಿ) ಸಿಇಒ ಅಲಿಸಾ ವರ್ಸೆಲ್ ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.