ನವದೆಹಲಿ: ಷೇರುಪೇಟೆ ಚಂಚಲವಾಗಿದ್ದು, ವಿದೇಶಿ ಬಂಡವಾಳ ಹೂಡಿಕೆದಾರರು ಬಂಡವಾಳ ಹಿಂತೆಗೆತಕ್ಕೆ ಗಮನ ನೀಡಿರುವ ಹೊತ್ತಿನಲ್ಲಿಯೇ ಈಕ್ವಿಟಿ ಮ್ಯೂಚುವಲ್ ಫಂಡ್‌ಗಳು ಫೆಬ್ರುವರಿಯಲ್ಲಿ ₹ 19,705 ಕೋಟಿ ಬಂಡವಾಳ ಆಕರ್ಷಿಸಿವೆ.

ಇದರಿಂದಾಗಿ ಸತತ 12ನೇ ತಿಂಗಳಿನಲ್ಲಿಯೂ ಬಂಡವಾಳ ಒಳಹರಿವು ಮುಂದುವರಿದಂತಾಗಿದೆ. ಜನವರಿಯಲ್ಲಿ ಈಕ್ವಿಟಿ ಮ್ಯೂಚುವಲ್ ಫಂಡ್‌ಗಳಲ್ಲಿ ₹ 14,888 ಕೋಟಿ ಬಂಡವಾಳ ಹೂಡಿಕೆ ಆಗಿತ್ತು ಎಂದು ಭಾರತೀಯ ಮ್ಯೂಚುವಲ್ ಫಂಡ್ ಕಂಪನಿಗಳ ಒಕ್ಕೂಟ (ಎಎಂಎಫ್‌ಐ) ಮಾಹಿತಿ ನೀಡಿದೆ.

ಚಿನ್ನದ ದರ ಭಾರೀ ಏರಿಕೆ; ಬೆಳ್ಳಿ ಕೆ.ಜಿಗೆ ₹72,698

2021ರ ಮಾರ್ಚ್‌ನಿಂದಲೂ ಈಕ್ವಿಟಿ ಮ್ಯೂಚುವಲ್ ಫಂಡ್‌ಗಳಲ್ಲಿ ಒಳಹರಿವು ನಿರಂತರವಾಗಿ ಕಂಡುಬಂದಿದೆ. ಈವರೆಗೆ ₹ 1 ಲಕ್ಷ ಕೋಟಿ ಬಂಡವಾಳ ಹೂಡಿಕೆ ಆಗಿದೆ. ಇದಕ್ಕೂ ಮುನ್ನ ಅಂದರೆ 2020ರ ಜುಲೈನಿಂದ 2021ರ ಫೆಬ್ರುವರಿವರೆಗಿನ ಅವಧಿಯಲ್ಲಿ ₹ 46,791 ಕೋಟಿ ಬಂಡವಾಳ ಹೊರಹರಿವು ಆಗಿತ್ತು.

ಒಟ್ಟಾರೆಯಾಗಿ ಮ್ಯೂಚುವಲ್ ಫಂಡ್ ಉದ್ಯಮವು ಈ ವರ್ಷದ ಫೆಬ್ರುವರಿ ತಿಂಗಳಿನಲ್ಲಿ ₹ 31,533 ಕೋಟಿ ಬಂಡವಾಳ ಆಕರ್ಷಿಸಿದೆ. ಜನವರಿಯಲ್ಲಿ ₹ 35,252 ಕೋಟಿ ಹೂಡಿಕೆ ಆಗಿತ್ತು. ಉದ್ಯಮದ ನಿರ್ವಹಣಾ ಸಂಪತ್ತು ಮೌಲ್ಯವು ಫೆಬ್ರುವರಿ ಅಂತ್ಯಕ್ಕೆ ₹ 38.01 ಲಕ್ಷ ಕೋಟಿಯಿಂದ ₹ 37.56 ಲಕ್ಷ ಕೋಟಿಗೆ ಇಳಿಕೆ ಆಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.