ದೇವರ ಮೂರ್ತಿಯನ್ನು ಅಲಂಕಾರ ಮಾಡುವುದು ಸೃಜನಾತ್ಮಕ ಕಲೆ. ಅಭಿರುಚಿಗೆ ತಕ್ಕ ಹಾಗೆ ವಿವಿಧ ರೀತಿಯಲ್ಲಿ ವಿನ್ಯಾಸ ಮಾಡಬಹುದು. ಈಗಂತೂ ಮಾರುಕಟ್ಟೆಯಲ್ಲಿ ಸಿದ್ಧ ದೀಪಗಳು, ಸೀರೆ, ಆಲಂಕಾರಿಕ ವಸ್ತುಗಳು ದೊರೆಯುತ್ತವೆ. ಅವುಗಳ ಮೂಲಕ ಸುಲಭವಾಗಿ ಅಲಂಕರಿಸಬಹುದು.
–ಉಮಾ ಸರ್ವೇಶ್, ಗೃಹಿಣಿ
ರಂಗೋಲಿಗಳು ಮನೆಯಲ್ಲಿ ಧನಾತ್ಮಕ ಮತ್ತು ಆಧ್ಯಾತ್ಮಿಕ ಶಕ್ತಿಯನ್ನು ಹೆಚ್ಚಿಸುತ್ತವೆ. ರಂಗೋಲಿ ಬಿಡಿಸುವುದು ಮನಸ್ಸಿಗೂ ಮುದ ನೀಡುತ್ತದೆ. ಅಲ್ಲದೆ ಕಡಿಮೆ ಖರ್ಚಿನಲ್ಲಿ ಮನೆ ಮತ್ತು ಪೂಜೆಯ ಮೆರುಗನ್ನು ಹೆಚ್ಚಿಸುತ್ತವೆ.