ಸುಖ ಎನ್ನುವುದು ಒಂದು ಮನಃಸ್ಥಿತಿ. ಸು ಎಂದರೆ ಒಳ್ಳೆಯದು. ಖ ಎಂದರೆ ಸ್ಥಿತಿ. ಖ ಎಂದರೆ ಸ್ಥಳ ಎಂದೂ ಹೌದು. ಹಾಗಾಗಿ ಸುಖವನ್ನು‘state of being good’ ಅಥವಾ‘good space’ ಎಂತಲೂ ಹೇಳಬಹುದು; ಅದು ಆಂತರ್ಯದ ಸಂತೋಷದ ಸ್ಥಿತಿಯೂ ಹೌದು.

ಸುಖಕ್ಕೆ ಎರಡು ಮಗ್ಗುಲು. ಒಂದು ದೈಹಿಕ, ಮತ್ತೊಂದು ಮಾನಸಿಕ. ದೈಹಿಕ ಸುಖವನ್ನು ಪಡೆಯಲು ಜಗತ್ತಿನಲ್ಲಿ ಅನೇಕ ಸಾಧನಗಳಿವೆ. ರುಚಿಯಾದ ತಿಂಡಿತಿನಿಸುಗಳಿಂದ ನಾಲಗೆಗೆ ಸುಖ. ಪ್ರೀತಿಪಾತ್ರವಾದುದನ್ನೋ, ಇಷ್ಟವಾದ ದೃಶ್ಯಕಲೆಯನ್ನೋ, ಸುಂದರವಾದದ್ದನ್ನೋ ನೋಡಿದಾಗ ಕಣ್ಣುಗಳಿಗೆ ಸುಖ. ಮಕ್ಕಳ ತೊದಲ್ನುಡಿ, ಇನಿಯರ ಪಿಸುಮಾತು, ಸೊಗಸಾದ ಸಂಗೀತ, ಮನತುಂಬುವ ಮಾತುಗಳೇ ಮೊದಲಾದವುಗಳಿಂದ ಕರ್ಣಗಳಿಗೆ ಸುಖ. ಕಂಪಿನಿಂದ ನಾಸಿಕಗಳಿಗೆ ಸುಖ. ಸ್ಪರ್ಶದಿಂದ ಚರ್ಮಕ್ಕೆ ಸುಖ. ಪಂಚೇಂದ್ರಿಯಗಳಿಗೆ ಸುಖವನ್ನು ಒದಗಿಸಲು ಸಾಕಷ್ಟು ಸರಕುಗಳಿವೆ. ದೈಹಿಕ ಸುಖದಿಂದ ಮಾನಸಿಕ ಸಂತೋಷ ಲಭ್ಯ. ಅದು ಬಹುಕಾಲ ನಿಲ್ಲುವಂಥದಲ್ಲ.
ಸದಾ ಮಾನಸಿಕ ಸುಖಿಯಾಗಿರುವುದು ಇವುಗಳಷ್ಟು ಸುಲಭ ಸಾಧ್ಯವಲ್ಲ. ಅದೊಂದು ಸ್ಥಿತಿ ಎನ್ನುವುದಾದರೆ, ಅದನ್ನು ಸಾಧಿಸಲು ಪ್ರಯತ್ನ, ಸಂಕಲ್ಪ ಅವಶ್ಯಕ.

ಮನುಷ್ಯ ಮಹಾ ಆಸೆಬುರುಕ. ಬೇಕೋ ಬೇಡವೋ – ಕಂಡದ್ದೆಲ್ಲವೂ ತನದಾಗಬೇಕೆಂಬ ದುರಾಸೆಯ ಪ್ರವೃತ್ತಿ ಇತ್ತೀಚಿಗೆ ಸಾಮಾನ್ಯವಾಗಿಬಿಟ್ಟಿದೆ. ಎಷ್ಟು ದಕ್ಕಿಸಿಕೊಂಡರೂ ಮಗದಷ್ಟು ಬೇಕು ಎನ್ನುವ ತವಕ ಇದ್ದಾಗ, ಸಿಕ್ಕ ಸುಖಗಳೆಲ್ಲವೂ ತಾತ್ಕಾಲಿಕವೇ ಆಗಿಬಿಡುತ್ತದೆ. ಆ ನಿಟ್ಟಿನಲ್ಲಿ ತೃಪ್ತಿ ಎನ್ನುವುದು ಮಾನಸಿಕ ಸುಖಕ್ಕೆ ರಹದಾರಿ ಎನ್ನಬಹುದು. ಮೈಮನಗಳ ಸಂಗಮ ಸಾಧನ ಯೋಗ, ಧ್ಯಾನ, ಒಳಿತುಗಳ ಬಗೆಗಿನ ಸಾಧಕರ ಉಪನ್ಯಾಸಗಳನ್ನು ನಿರಂತರವಾಗಿ ಕೇಳುವುದು, ಸನ್ಮಾರ್ಗದಲ್ಲಿ ನಡೆವ ಸಂಕಲ್ಪ, ಪರಿವರ್ತನೆಯ ಕಡೆ ಮುಖ ಮಾಡುವುದು, ಇವೆಲ್ಲಕ್ಕೂ ಮಿಗಿಲಾಗಿ ನಡೆನುಡಿಯಲ್ಲಿ ಸರಳತೆಯನ್ನು ಮೈಗೂಡಿಸಿಕೊಳ್ಳುವುದು ಸಂತೃಪ್ತಿಯನ್ನು ಸಾಧಿಸುವ ಹಾದಿಯ ಕೈಮರಗಳು. ಬಡವರಿಗೆ ಅನ್ನವನಿಕ್ಕುವುದು, ಸತ್ಯಮಾರ್ಗದಲ್ಲಿ ನಡೆಯುವುದು, ಇತರರಿಗೆ ಅನ್ಯಾಯ ಮಾಡದಿರುವುದು, ಎಲ್ಲ ಪ್ರಾಣಿಗಳನ್ನೂ ಜೀವದಯೆ ತೋರುವುದು, ಉತ್ತಮ ಹವ್ಯಾಸಗಳೂ ಮಾನಸಿಕ ಸುಖಕ್ಕೆ ನೆರವಾಗುತ್ತವೆ. ಆಸ್ತಿಕರಾದರೆ ದೈವದೊಂದಿಗಿನ ಉಪವಾಸ, ವ್ರತಕಥೆಗಳು; ನಾಸ್ತಿಕರಾದರೆ ಪ್ರಕೃತಿಯೊಂದಿಗಿನ ನಿಕಟ ಬಾಂಧವ್ಯ ದೈಹಿಕ ಮತ್ತು ಮಾನಸಿಕ ಸುಖಗಳೆರೆಡಕ್ಕೂ ಸಹಕಾರಿ.

ಎಲ್ಲ ನೋವು ದುಃಖಗಳಿಂದ ಮುಕ್ತವಾದ ಶಾಂತಿ ನೆಮ್ಮದಿಯ ಸಂತೃಪ್ತ ಜೀವನ ನಡೆಸುವ ಪರಮಸುಖದ ಬಗೆಗೆ ಬೆಳಕು ಚೆಲ್ಲುವ ಆಧ್ಯಾತ್ಮಿಕ ಜ್ನಾನವೇ ಭಾರತದ ಸಂಸ್ಕೃತಿಯ ಮೂಲಬೇರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.