ಗುಳೇದಗುಡ್ಡ: ‘ಕನ್ನಡದ ಪ್ರಥಮ ಮಹಿಳಾ ವಚನಕಾರ್ತಿಯಾಗಿ ಪುರುಷ ಪ್ರಧಾನ ವ್ಯವಸ್ಥೆಯ ಅಹಂ ಭಾವಕ್ಕೆ ಬಲಿಯಾಗದೆ ಅಧ್ಯಾತ್ಮದ ಶಿಖರವೇರಿ ಮಹಿಳಾ ಪರವಾಗಿ ಧ್ವನಿಯೆತ್ತಿದ ಮೊದಲ ಸ್ತ್ರೀವಾದಿ ಪ್ರಗತಿಪರ ಚಿಂತಕಿ ಅಕ್ಕಮಹಾದೇವಿ’ ಎಂದು ಸಾಹಿತಿ ಜಯಶ್ರೀ ಭಂಡಾರಿ ಹೇಳಿದರು.

ಪಟ್ಟಣದ ಜಗದ್ಗುರು ಗುರುಸಿದ್ದೇಶ್ವರ ಬ್ರಹನ್ಮಠದಲ್ಲಿ ಮಂಗಳವಾರ ಜರುಗಿದ ಅಕ್ಕಮಹಾದೇವಿ ಜಯಂತಿಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅಕ್ಕಮಹಾದೇವಿ ರಾಜಪ್ರಭುತ್ವ ಮತ್ತು ಪುರುಷ ಪ್ರಧಾನ ಸಮಾಜವನ್ನು ಏಕಕಾಲದಲ್ಲಿ ತಿರಸ್ಕರಿಸಿ ಲೋಕ ವಿರೋಧಿತನವನ್ನು 12ನೇ ಶತಮಾನದಲ್ಲಿ ತಿರಸ್ಕರಿಸಿ ಹಲವು ವಚನಗಳನ್ನ ಬರೆಯುವ ಮೂಲಕ ಸಮಾಜದ ಬದಲಾವಣೆಗೆ ಕಾರಣಳಾಗಿದ್ದಾಳೆ ಎಂದು ಹೇಳಿದರು.

ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಬಸವರಾಜ ಪಟ್ಟದಾರ್ಯ ಸ್ವಾಮೀಜಿ ಮಾತನಾಡಿ, ಅಕ್ಕಮಹಾದೇವಿ ಮಹಿಳೆಯ ಪರವಾಗಿ ಧ್ವನಿಯೆತ್ತಿ ಅದರೊಂದಿಗೆ ಸಮಾಜದ ಬದಲಾವಣೆಯನ್ನು ಬಯಸಿದಳು. ಸ್ತ್ರೀ ಸ್ವಾತಂತ್ರ್ಯ ಸಮಾಜದಲ್ಲಿ ಸ್ತ್ರೀ ಪುರುಷ ಭೇದವೆನ್ನುವ ಮನೋ ಧೋರಣೆಯನ್ನು ಹೊಡೆದು ಹಾಕಲು ಪ್ರಯತ್ನಿಸಿದರು. ಅಂತಹ ವ್ಯಕ್ತಿಯ ಆದರ್ಶವನ್ನ ಎಲ್ಲ ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕು ಎಂದರು.

ಜಗದ್ಗುರು ಗುರುಸಿದ್ದೇಶ್ವರ ಮಹಿಳಾ ಬಿ.ಎಡ್ ಕಾಲೇಜಿನ ಪ್ರಶಿಕ್ಷಣಾರ್ಥಿಗಳು ವಚನ ಕಂಠಪಾಠ, ವಚನ ಗಾಯನ ಹಾಗೂ ಅಕ್ಕಮಹಾದೇವಿಯವರ ಕುರಿತು ಮಾತನಾಡಿದರು.

ಇದೇ ಸಂದರ್ಭದಲ್ಲಿ ಜಯಶ್ರೀ ಭಂಡಾರಿ ಅವರನ್ನು ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಸಕ್ಕೂಬಾಯಿ ನೆಲ್ಲೂರು, ಬಿ.ಎ.ನದಾಫ್ ಇಂದುಮತಿ ಬೋರಣ್ಣವರ, ಎಸ್.ಸಿ.ಗದ್ಧಿಗೌಡರ. ವಿ.ಕೆ.ಬದಿ ಪ್ರಥಮ ಹಾಗೂ ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.