ರಬಕವಿ ಬನಹಟ್ಟಿ: ರಬಕವಿಯ ಈಶ್ವರ ಸಣಕಲ್ ರಸ್ತೆ ಮಾರ್ಗದ ಅಮರ ಚವಾಣ ತಮ್ಮ ಮುತ್ತಜ್ಜ, ಅಜ್ಜ, ತಂದೆ ಹಾಗೂ ತಾಯಿ ವೀಣಾ ನಡೆಸಿಕೊಂಡು ಬಂದಿರುವ ಶಾಸ್ತ್ರ ಬದ್ಧವಾದ ಗಣೇಶ ಮೂರ್ತಿಗಳನ್ನು ತಯಾರು ಮಾಡುವ ಕಾರ್ಯವನ್ನು ಮುಂದುವರೆಸಿಕೊಂಡು ಬಂದಿದ್ದಾರೆ. ಸದ್ಯ ಅವರ ಚಿಕ್ಕದಾದ ಮನೆಯಲ್ಲಿ ಹಲವಾರು ಗಣೇಶ ಮೂರ್ತಿಗಳು ಸಿದ್ಧಗೊಂಡು, ಕಂಗೊಳಿಸುತ್ತಿವೆ.

ರಬಕವಿಯ ಚವಾಣ ಕುಟುಂಬದ ಸದಸ್ಯರು ನಾಲ್ಕು ತಲೆ ಮಾರುಗಳಿಂದ ಮಣ್ಣಿನ ಮೂರ್ತಿಗಳನ್ನು ಮಾಡುತ್ತ ಬಂದಿದ್ದಾರೆ.

ರಾಮಚಂದ್ರರು ಮೊದಲು ಮೂರ್ತಿಗಳನ್ನು ಮಾಡತೊಡಗಿದರು, ನಂತರ ಅವರ ಮಗ ಜ್ಞಾನೇಶ್ವರ, ಅವರ ಮಗ ವಿಠ್ಠಲ, ವಿಠ್ಠಲ ನಿಧನದ ನಂತರ ಪತ್ನಿ ವೀಣಾ ಹಾಗೂ ಮಕ್ಕಳಾದ ಅಮರ ಮತ್ತು ರಾಹುಲ ಮೂರ್ತಿಗಳನ್ನು ಮಾಡುತ್ತ ಬಂದಿದ್ದಾರೆ.

ಮೂರು ತಿಂಗಳ ಮೊದಲೇ ಗೋಕಾಕ ತಾಲ್ಲೂಕಿನ ತಾವಲಗೇರಿ ಗ್ರಾಮದಿಂದ ಜೇಡಿ ಮಣ್ಣನ್ನು ತಂದು ಅದನ್ನು ಸ್ವಚ್ಛಗೊಳಿಸಿದ ನಂತರ ಅದಕ್ಕೆ ಹತ್ತಿಯನ್ನು ಕೂಡಿಸುತ್ತಾರೆ.

‘ಮಣ್ಣಿನಮೂರ್ತಿ ಳನ್ನು ಕೈಯಿಂದಲೇ ತಯಾರು ಮಾಡಬೇಕಾಗಿ ರುವುದರಿಂದ ಬಹಳ ಸಮಯ ಬೇಕಾಗುತ್ತದೆ. ಆಕರ್ಷಕವಾಗಿ ಮಾಡಲು ಸಾಕಷ್ಟು ಏಕಾಗ್ರತೆ, ತಾಳ್ಮೆಯೂ ಬೇಕಾ ಗುತ್ತದೆ’ ಎನ್ನುತ್ತಾರೆ ಅಮರ ಚವಾಣ.

‘ಕೆಲವು ಸಂಪ್ರದಾಯ ಕುಟಂಬಸ್ಥರು ಮೊದಲಿನಿಂದಲೂ ಮಣ್ಣಿನ ಗಣೇಶ ಮೂರ್ತಿಗಳನ್ನೇ ಖರೀದಿಸಿ ಪೂಜಿಸುತ್ತಾರೆ. ಆದ್ದರಿಂದ ಮಣ್ಣಿನ ಮೂರ್ತಿಗಳನ್ನು ಮಾಡುತ್ತೇವೆ’ ಎನ್ನುತ್ತಾರೆ ವೀಣಾ ಚವಾಣ.

ಅಮರ ಚವಾಣ ಅವರ ಕುಟುಂಬ ಗಣೇಶಮೂರ್ತಿಗಳ ಜೊತೆಗೆ ಕಾಮಣ್ಣ, ಗೌರಿ ಸೇರಿದಂತೆ ಇನ್ನೂ ಅನೇಕ ರೀತಿಯ ಮಣ್ಣಿನ ಮೂರ್ತಿಗಳನ್ನು ಸಿದ್ಧಪಡಿಸಿ ಮಾರಾಟ ಮಾಡುತ್ತಿದೆ.

‘ಗಣೇಶ ಮೂರ್ತಿ ಬೆಲೆ ಏರಿಕೆ’

‘ಮಣ್ಣು, ಬಣ್ಣ ಸೇರಿದಂತೆ ಮೂರ್ತಿ ತಯಾರು ಮಾಡಲು ಬೇಕಾದ ವಸ್ತುಗಳ ಬೆಲೆಗಳು ಜಾಸ್ತಿಯಾಗಿದ್ದರಿಂದ ಗಣೇಶ ಮೂರ್ತಿಗಳ ಬೆಲೆಗಳು ಕೂಡಾ ಜಾಸ್ತಿಯಾಗಿವೆ. ನಾಲ್ಕೂವರಿ ಅಡಿ ಎತ್ತರದ ಮಣ್ಣಿನ ಗಣೇಶ ಮೂರ್ತಿಗೆ ₹9 ಸಾವಿರದಿಂದ ₹10 ಸಾವಿರ ತನಕ ಬೆಲೆ ಇದೆ. ಬೆಂಗಳೂರಿನಲ್ಲಿ ನೆಲೆಸಿರುವ ರಬಕವಿಯ ಜನರಿಗೆ ನಾವು ಇಲ್ಲಿದಂಲೇ ಗಣೇಶ ಮೂರ್ತಿಗಳನ್ನು ಕಳುಹಿಸುತ್ತೇವೆ’ ಎಂದು ಅಮರ ಚವಾಣ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.