ಬಾಗಲಕೋಟೆ: ನಗರಕ್ಕೆ ಹೊಂದಿಕೊಂಡಿರುವ ಮುಚಖಂಡಿ ಕೆರೆ ಮುಂದೆ ಸುಂದರ ಉದ್ಯಾನ ತಲೆ ಎತ್ತಿದೆ. ಎಲ್ಲ ಕಾಮಗಾರಿಗಳು ಪೂರ್ಣಗೊಂಡಿದ್ದರೂ, ಉದ್ಘಾಟನೆ ಭಾಗ್ಯ ಲಭಿಸಿಲ್ಲ.

₹ 5 ಕೋಟಿ ವೆಚ್ಚದಲ್ಲಿ ಕೆರೆ ಸೌಂದರ್ಯೀಕರಣ ಹಾಗೂ ಉದ್ಯಾನ ನಿರ್ಮಾಣ ಕಾಮಗಾರಿಯನ್ನು ಬಾಗಲಕೋಟೆ ಅಭಿವೃದ್ಧಿ ಪ್ರಾಧಿಕಾರ ಕೈಗೆತ್ತಿಕೊಂಡಿತ್ತು. ₹ 79 ಲಕ್ಷ ವೆಚ್ಚದಲ್ಲಿ ನೃತ್ಯ ಕಾರಂಜಿ ನಿರ್ಮಾಣ ಮಾಡಲಾಗಿದೆ.

ಈ ಹಿಂದೆ ಘಟಫ್ರಬಾ ನದಿಯಲ್ಲಿ ನಿಲ್ಲುವ ಆಲಮಟ್ಟಿ ಹಿನ್ನೀರು ತಂದು ಕೆರೆ ತುಂಬಿಸುವ ಕಾಮಗಾರಿ ಮಾಡಲಾಗಿತ್ತು. ಪೈಪ್ಗಳ ಗಾತ್ರ ಸಣ್ಣದಿದ್ದರಿಂದ ನೀರು ತುಂಬಿಸಲು ಸಾಧ್ಯವಾಗಿರಲಿಲ್ಲ. ಈಗ ₹35 ಕೋಟಿ ವೆಚ್ಚದಲ್ಲಿ ಕೆರೆ ತುಂಬಿಸುವ ಯೋಜನೆ ನಡೆದಿದ್ದು, ಶೇ 70ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಜಾಕ್ವೆಲ್ ಕಾಮಗಾರಿ ಬಾಕಿ ಇದೆ.

ಗಾರ್ಡನ್ ಸುತ್ತಲು ಗೋಡೆ ನಿರ್ಮಾಣಕ್ಕಾಗಿಯೇ ₹1.02 ಕೋಟಿ, ಕಾರಂಜಿ, ಗಾರ್ಡನ್ ನಿರ್ವಹಣೆಗೆ ನೀರಿನ ಟ್ಯಾಂಕ್ ನಿರ್ಮಾಣಕ್ಕೆ ₹10.56 ಲಕ್ಷ ವೆಚ್ಚ ಮಾಡಲಾಗಿದೆ.

₹12 ಲಕ್ಷ ವೆಚ್ಚದಲ್ಲಿ 150 ಜನ ಬಯಲಿನಲ್ಲಿ ಕುಳಿತು ಸಣ್ಣದಾದ ಕಾರ್ಯಕ್ರಮಗಳನ್ನು ಆಯೋಜಿಸಲು ಅನುವಾಗುವಂತೆ ಆ್ಯಂಪಿ ಥೇಟರ್ ನಿರ್ಮಾಣ ಮಾಡಲಾಗಿದೆ. ₹5 ಲಕ್ಷ ವೆಚ್ಚದಲ್ಲಿ ಉದ್ಯಾನದಲ್ಲಿ ಮಕ್ಕಳ ಆಟಿಕೆ ಸಾಮಗ್ರಿಗಳನ್ನು ಅಳವಡಿಸಲಾಗಿದೆ. ₹58 ಲಕ್ಷ ವೆಚ್ಚದಲ್ಲಿ ಗುಡ್ಡಕ್ಕೆ ತಂತಿಬೇಲಿ ನಿರ್ಮಾಣ ಮಾಡಿ, ಒಂದು ಕಡೆಯಿಂದ ಮಾತ್ರ ಪ್ರವೇಶಕ್ಕೆ ಅನುಕೂಲ ಮಾಡಿಕೊಡಿಲಾಗಿದೆ.

ಗುಡ್ಡದ ಮೇಲಿನಿಂದ ಬಾಗಲಕೋಟೆ ನಗರ ವೀಕ್ಷಣೆಗೆ ವಿವ್ ಪಾಯಿಂಟ್ ನಿರ್ಮಾಣ ಮಾಡಲಾಗುತ್ತಿದೆ. ಗುಡ್ಡ ಹತ್ತಿಕೊಂಡು ಹೋಗಲು ಪಾವಟಿಗೆಗಳ ನಿರ್ಮಾಣ ಹಾಗೂ ವಿವ್ ಪಾಯಿಂಟ್ಗಾಗಿ ₹70 ಲಕ್ಷ ವೆಚ್ಚ ಮಾಡಲಾಗಿದೆ..

₹7.75 ಲಕ್ಷ ವೆಚ್ಚದಲ್ಲಿ ಪ್ರವೇಶ ದ್ವಾರ, ₹15 ಲಕ್ಷ ವೆಚ್ಚದಲ್ಲಿ ವೀಕ್ಷಣೆಗೆ ಬರುವ ಸಾರ್ವಜನಿಕರಿಗಾಗಿ ಶೌಚಾಲಯ ನಿರ್ಮಾಣ ಮಾಡಲಾಗಿದೆ ಎನ್ನುತ್ತಾರೆ ಕಾಮಗಾರಿ ಉಸ್ತುವಾರಿ ವಹಿಸಿಕೊಂಡಿರುವ ನಗರಸಭೆ ಜೂನಿಯರ್ ಎಂಜಿನಿಯರ್ ನವೀದ್ ಖಾಜಿ.

₹14 ಲಕ್ಷ ವೆಚ್ಚದಲ್ಲಿ ವಿದ್ಯುತ್ ದೀಪಲಂಕಾರ, ₹7.5 ಲಕ್ಷ ವೆಚ್ಚದಲ್ಲಿ ಮುಚಖಂಡಿ ಕೆರೆಯ ಸುತ್ತಲು ಸಸಿಗಳ ನಾಟಿ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿ ಮಾಡಲಾಗಿದೆ.

ಉದ್ಘಾಟನೆ ಯಾವಾಗ?

ಬಾಗಲಕೋಟೆ: ಮುಚಖಂಡಿ ಕೆರೆ ಅಭಿವೃದ್ಧಿ ಕಾರ್ಯ ಪೂರ್ಣಗೊಂಡು ಮೂರು ತಿಂಗಳುಗಳೇ ಕಳೆದಿವೆ. ಆದರೆ ಉದ್ಘಾಟನೆ ಭಾಗ್ಯ ಮಾತ್ರ ಸಿಕ್ಕಿಲ್ಲ. ಮುಚಖಂಡಿ ಕೆರೆ ಅಲ್ಲಿರುವ ವೀರಭದ್ರೇಶ್ವರ ದೇವಸ್ಥಾನಕ್ಕೆ ತೆರಳುವ ಭಕ್ತರು ದೂರದಿಂದಲೇ ಉದ್ಯಾನ ವೀಕ್ಷಣೆ ಮಾಡುತ್ತಾರೆ. ಉದ್ಘಾಟನೆಗೊಳ್ಳದ್ದರಿಂದ ವೀಕ್ಷಣೆ ಸಾಧ್ಯವಾಗಿಲ್ಲ. ಬುಡಾಕ್ಕೆ ಅಧ್ಯಕ್ಷರ ನೇಮಕ ಮಾಡಿಲ್ಲ. ಅಧಿಕಾರಿಗಳೇ ಉದ್ಘಾಟನೆಗಾಗಿ ಸರ್ಕಾರ ಮಟ್ಟದಲ್ಲಿ ವ್ಯವಹರಿಸಬೇಕಿದೆ. ಹದಿನೈದು ದಿನಗಳಲ್ಲಿ ಉದ್ಘಾಟನೆಯಾಗುವ ಸಾಧ್ಯತೆ ಇದೆ ಎನ್ನುತ್ತಾರೆ ಅಧಿಕಾರಿಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.