ಹುನಗುಂದ: ತಾಲ್ಲೂಕಿನ ಚಿತ್ತವಾಡಗಿ ಗ್ರಾಮದ ಹೊರ ವಲಯದಲ್ಲಿರುವ ಮಾರುತೇಶ್ವರ ಜಾತ್ರಾ ಪ್ರಯುಕ್ತ ಶನಿವಾರ ನಡೆದ ಸಂಗ್ರಾಣಿ ಕಲ್ಲು ಎತ್ತುವ ಸ್ಪರ್ಧೆಯ ಹಿರಿಯರ ವಿಭಾಗದಲ್ಲಿ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಆಸಂಗಿ ಗ್ರಾಮದ ಅಪ್ಜಲ್ ಖಾನ್ ಮುಜಾವರ್ 100 ಕೆ.ಜಿ ಸಿಂಗ್ರಾಣಿ ಕಲ್ಲು ಎತ್ತುವ ಮೂಲಕ ಪ್ರಥಮ ಸ್ಥಾನ ಪಡೆದರು.

ಬೀಳಗಿ ತಾಲ್ಲೂಕಿನ ಬಿಸನಾಳ ಗ್ರಾಮದ ರಿಯಾಜ್ ಜಮಾದಾರ್ ದ್ವಿತೀಯ, ಅದೇ ಗ್ರಾಮದ ಸಂತೋಷ ಬಿರಾದಾರ ತೃತೀಯ ಹಾಗೂ ತಾಳಿಕೋಟೆಯ ರಾಜು ಚತುರ್ಥ ಸ್ಥಾನ ಪಡೆದರು.

ದೇವಸ್ಥಾನ ಆವರಣದ ಪಕ್ಕದ ಹೊಲದಲ್ಲಿ ಸಂಗ್ರಾಣಿ ಕಲ್ಲು ಎತ್ತಲು ಮೈದಾನವನ್ನು ಸಿದ್ಧತೆ ಮಾಡಲಾಗಿತ್ತು. ಮಧ್ಯಾಹ್ನ 3 ಗಂಟೆ ಗೆ ಸ್ಪರ್ಧೆ ಆರಂಭಗೊಂಡು, ರೋಚಕ ಕ್ಷಣಕ್ಕೆ ಸಾಕ್ಷಿ ಆಯಿತು.

ಯುವ ಸಮುದಾಯ ಕೆಕೆ, ಸಿಳ್ಳೆ ಹೊಡೆಯುವ ಮೂಲಕ ಸ್ಪರ್ಧಿಗಳಲ್ಲಿ ಉತ್ಸಾಹ ಮೂಡಿಸಿತು. ಹೆಚ್ಚು ತೂಕದ ಕಲ್ಲು ಎತ್ತಿದಾಗ ಸ್ಪರ್ಧಿಗಳಿಗೆ ಪ್ರೋತ್ಸಾಹ ರೂಪದಲ್ಲಿ ವೀಕ್ಷಕರು ಹಣ ನೀಡಿ ಸ್ಪರ್ಧೆಗೆ ಹುರುದುಂಬಿಸಿದರು.

ಸ್ಪರ್ಧೆಗಳು ಮುಗಿದ ನಂತರ ದೇವಸ್ಥಾನದ ಮುಂಭಾಗದಲ್ಲಿ ವಿಜೇತರಿಗೆ ಬಹುಮಾನ ಮತ್ತು ನಗದು ನೀಡಿ ಗೌರವಿಸಲಾಯಿತು.

ಹನಮಂತ ಆಂದೇಲಿ, ರಾಮಣ್ಣ ಕೋರ್ತಿ, ಹೊನ್ನಪ್ಪ ಆಂದೇಲಿ, ಚಂದ್ರಶೇಖರ ಕಲ್ಲಹೊಲದ, ಶಿವಾನಂದ ಕರಪಡಿ, ನೀಲಪ್ಪ ಇದ್ದಲಗಿ, ಎಚ್.ವೈ.ಆಂದೇಲಿ, ಎಚ್.ಡಿ. ಹುಡೇದ, ಹನಮಂತ ಇದ್ದಲಗಿ, ಮುತ್ತಪ್ಪ ವಾಲಿಕಾರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.