ಗುಳೇದಗುಡ್ಡ: ಅನುಸೂಚಿತ ಜಾತಿ ಸ್ಥಾನಕ್ಕೆ ಮೀಸಲಾಗಿರುವ ಪುರಸಭೆಯ ಉಪಾಧ್ಯಕ್ಷ ಸ್ಥಾನಕ್ಕೆ ಅ.23 ರಂದು ತಾಲ್ಲೂಕು ಪಂಚಾಯಿತಿ ಕಾರ್ಯಾಲಯದಲ್ಲಿ ಮಧ್ಯಾಹ್ನ 2 ಗಂಟೆಗೆ ನಡೆಯಲಿದೆ.

ನಾಮನಿರ್ದೇಶನ ಪತ್ರ ಸಲ್ಲಿಸುವ ಅವಧಿ ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 12 ಗಂಟೆವರೆಗೆ. ನಾಮಪತ್ರ ಪರಿಶೀಲನೆ ಮಧ್ಯಾಹ್ನ 2 ಗಂಟೆಗೆ ಸಭೆ ಪ್ರಾರಂಭವಾದ ತಕ್ಷಣ, ನಾಮ ನಿರ್ದೇಶನ ಪತ್ರವನ್ನು ಹಿಂಪಡೆದುಕೊಳ್ಳುವ ಅವಧಿ ಸಭೆ ಆರಂಭವಾದ ಮೇಲೆ 10 ನಿಮಿಷಗಳ ಕಾಲಾವಧಿಯೊಳಗೆ ನಡೆದರೆ, ಚುನಾವಣೆ ಮಧ್ಯಾಹ್ನ 2.11ಕ್ಕೆ ಜರುಗಲಿದೆ ಎಂದು ಚುನಾವಣಾ ಅಧಿಕಾರಿ ತಹಶೀಲ್ದಾರ್ ಮಂಗಳಾ ಎಂ. ಅವರು ಹೊರಡಿಸಿರುವ ಸಭೆಯ ತಿಳುವಳಿಕೆ ಪತ್ರದಲ್ಲಿ ತಿಳಿಸಿದ್ದಾರೆ.

ಮತದಾನದ ಹಕ್ಕುಳ್ಳ ಬಾಗಲಕೋಟೆ ಲೋಕಸಭಾ ಸದಸ್ಯರು, ಬಾದಾಮಿ ಶಾಸಕರು, ಗುಳೇದಗುಡ್ಡ ಪುರಸಭೆ ಅಧ್ಯಕ್ಷರು ಹಾಗೂ ಪಟ್ಟಣ ಪುರಸಭೆಯ ಎಲ್ಲ ಚುನಾಯಿತ ಸದಸ್ಯರು ಬುಧವಾರ ಮಧ್ಯಾಹ್ನ 2 ಗಂಟೆಗೆ ಹಾಜರಿರುವಂತೆ ಕೋರಿದ್ದಾರೆ.

ಕಳೆದ ಆ.30ರಂದು ಪುರಸಭೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಎರಡೂ ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಆದರೆ ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಕೆಯಾಗದ ಕಾರಣ ಪುನ: ಈಗ ಅದೊಂದೆ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.