ಬಳ್ಳಾರಿ: ತಿರುಪತಿಗೆ ಭಾನುವಾರ ಭೇಟಿ ನೀಡಿರುವ ಮಾಜಿ ಸಚಿವ ಬಿ. ಶ್ರೀರಾಮುಲು, ಲಾಡು ಪ್ರಸಾದ ಸ್ವೀಕರಿಸಿದ್ದಾರೆ.

ಈ ಕುರಿತು ಸಾಮಾಜಿಕ ಮಾಧ್ಯಮ ‘ಫೇಸ್‌ಬುಕ್’ನಲ್ಲಿ ಪೋಸ್ಟ್ ಪ್ರಕಟಿಸಿರುವ ಅವರು ‘ತಿರುಪತಿಯ ತಿಮ್ಮಪ್ಪನ ಸನ್ನಿಧಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ, ನಾಡಿನ ಒಳಿತಿಗಾಗಿ ದೇವರಲ್ಲಿ ಪ್ರಾರ್ಥಿಸಿದೆ. ತಿರುಪತಿ ತಿಮ್ಮಪ್ಪ ದೇಗುಲ ಮತ್ತು ಅಲ್ಲಿಯ ಪ್ರಸಾದಕ್ಕೆ ತನ್ನದೇ ಆದ ವೈಶಿಷ್ಟತೆ ಇದೆ. ಯಾರೂ ಏನೋ ಮಾಡಿದ್ದಾರೆ ಎಂದಾಕ್ಷಣ ಅದರ ಘನತೆಗೆ ದಕ್ಕೆ ಬರುವುದಿಲ್ಲ. ಇಷ್ಟು ದಿನವೂ ಪ್ರಸಾದವನ್ನು ಭಕ್ತಿ ಭಾವದಿಂದ ಸ್ವೀಕಾರ ಮಾಡಿದ್ದೇನೆ. ಮುಂದೆಯೂ ಸ್ವೀಕಾರ ಮಾಡ್ತೇನೆ’ ಎಂದು ಅವರು ಹೇಳಿದ್ದಾರೆ.

ಜತೆಗೆ, ‘ಭಕ್ತರ ಭಾವನೆಗೆ ದಕ್ಕೆಯಾಗದಂತೆ ಯಾರು ಕೂಡ ನಡೆದುಕೊಳ್ಳಬೇಡಿ’ ಎಂದು ಅವರು ಸಲಹೆ ನೀಡಿದ್ದಾರೆ.

ತಿರುಪತಿ ಲಾಡು ಪ್ರಸಾದದಲ್ಲಿ ದನ ಮತ್ತು ಹಂದಿಯ ಕೊಬ್ಬಿನಂಥ ಅಂಶ ಪತ್ತೆಯಾಗಿರುವುದು ಬಯಲಾಗಿದ್ದು, ದೇಶದಾದ್ಯಂತ ಕೋಲಾಹಲ ಸೃಷ್ಟಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.