ಹೂವಿನಹಡಗಲಿ: ಕಳೆದ ಶೈಕ್ಷಣಿಕ ಸಾಲಿನ ಬಿ.ಎ. ಪದವಿಯಲ್ಲಿ ಮೊದಲ ರ‍್ಯಾಂಕ್ ಗಳಿಸಿರುವ ಪಟ್ಟಣದ ಜಿಬಿಆರ್ ಕಾಲೇಜು ವಿದ್ಯಾರ್ಥಿನಿ ಬಿ. ದೀಪಶ್ರೀ ಬಳ್ಳಾರಿಯಲ್ಲಿ ಜರುಗಿದ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಶುಕ್ರವಾರ ಚಿನ್ನದ ಪದಕ ಮತ್ತು ರ‍್ಯಾಂಕ್ ಪ್ರಮಾಣಪತ್ರ ಸ್ವೀಕರಿಸಿದರು.

ವಿ.ವಿ. ಕುಲಪತಿ ಮುನಿರಾಜು ವಿದ್ಯಾರ್ಥಿನಿಗೆ ಪ್ರಮಾಣಪತ್ರ ನೀಡಿ ಸತ್ಕರಿಸಿದರು. ದೀಪಾಶ್ರೀ ಕಲಾ ವಿಭಾಗದಲ್ಲಿ 3830 (ಶೇ 93.41) ಅಂಕ ಪಡೆದಿದ್ದಾರೆ.

‘ಬೋಧಕ ಸಿಬ್ಬಂದಿಯ ಮಾರ್ಗದರ್ಶನ, ವಿದ್ಯಾರ್ಥಿಗಳ ಕಠಿಣ ಪರಿಶ್ರಮದಿಂದ ನಮ್ಮ ಕಾಲೇಜಿಗೆ ಸತತ ಮೂರು ವರ್ಷಗಳಿಂದ ಮೊದಲ ರ‍್ಯಾಂಕ್ ಬಂದಿವೆ. ವೀ.ವಿ. ಸಂಘ, ಕಾಲೇಜು ಆಡಳಿತ ಮಂಡಳಿಯ ಇಚ್ಛಾಸಕ್ತಿಯಿಂದ ಕಾಲೇಜಿನಲ್ಲಿ ಉತ್ತಮ ಶೈಕ್ಷಣಿಕ ಪರಿಸರ ರೂಪುಗೊಂಡಿದೆ’ ಎಂದು ಜಿಬಿಆರ್ ಕಾಲೇಜು ಪ್ರಾಚಾರ್ಯ ಎಸ್.ಎಸ್. ಪಾಟೀಲ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.