ಬಳ್ಳಾರಿ: ಬಿಜೆಪಿ ಪ್ರಥಮ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾದ ಬೆನ್ನಲ್ಲೇ ಬಳ್ಳಾರಿ ಜಿಲ್ಲೆಯಲ್ಲಿ ಭಿನ್ನಮತ ಸ್ಪೋಟಗೊಂಡಿದೆ. ರಾಜ್ಯದ ಇನ್ನುಳಿದ ಎರಡು ಪ್ರಮುಖ ಪಕ್ಷಗಳ ಅಭ್ಯರ್ಥಿಗಳ ಪಟ್ಟಿ ಬಿಡುಗೆಗೊಂಡಿದ್ದ ಸುಮಾರು ದಿನಗಳ ಬಳಿಕ ಅಳೆದೂ ತೂಗಿ ಪಟ್ಟಿ ಪ್ರಕಟ ಮಾಡಿದ ಬಿಜೆಪಿಗೆ ಈಗ ಭಿನ್ನಮತದ ಕಾವು ತಟ್ಟುತ್ತಿದೆ.

ಅದರಲ್ಲಿಯೂ ಗಣಿ ನಾಡು, ಬಳ್ಳಾರಿಯಲ್ಲಿ ಬಿಜೆಪಿಯಲ್ಲಿ ಬಂಡಾಯದ ಬಿಸಿ ಭುಗಿಲೆದಿದ್ದೆ. ಸಂಡೂರು ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಕೆ ಎಸ್ ದಿವಾಕರ್ಗೆ ಟಿಕೆಟ್ ಸಿಕ್ಕಿಲ್ಲ. ಶಿಲ್ಪಾ ರಾಘವೇಂದ್ರ ಅವರಿಗೆ ಟಿಕೆಟ್ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಕೆ ಎಸ್ ದಿವಾಕರ್ ತೀವ್ರ ಅಸಮಧಾನಗೊಂಡಿದ್ದಾರೆ.

ಬಳ್ಳಾರಿ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಾ, ಪಕ್ಷಕ್ಕೆ ಹಲವು ವರ್ಷಗಳಿಂದ ದುಡಿಯುತ್ತಿರುವವರಿಗೆ ಟಿಕೆಟದ ದೊರೆಯುತ್ತಿಲ್ಲ. ಬದಲಿಗೆ ಬಿಜೆಪಿ ಟಿಕೆಟ್ ಮಾರಾಟವಾಗಿದೆ ಎಂದು ಸಂಡೂರು ಬಿಜೆಪಿ ಟಿಕೆಟ್ ವಂಚಿತ ಕೆ ಎಸ್ ದಿವಾಕರ್ ಗಂಭೀರ ಆರೋಪ ಮಾಡಿದ್ದಾರೆ.

ಬಿಜೆಪಿ ಪಕ್ಷದಲ್ಲಿ ತತ್ವ ಸಿದ್ದಾಂತಗಳಿಗೆ ಬೆಲೆಯಿಲ್ಲದಾಂತಾಗಿದೆ. ಸಂಡೂರಿನಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಒಳ ಒಪ್ಪಂದ ಮಾಡಿಕೊಂಡಿದೆ. ಹೀಗಾಗಿ ಪಕ್ಷಕ್ಕೆ ದುಡಿದವರಿಗೆ ಟಿಕೆಟ್ ಸಿಗದಂತಾಗಿದೆ. ಪಕ್ಷದ ಪ್ರಾಥಮಿಕ ಸದಸ್ಯತ್ವವಿಲ್ಲದವರಿಗೆ ಟಿಕೆಟ್ ದೊರೆತಿದೆ. ಕಳೆದ ಮೂರು ವಿಧಾನಸಭಾ ಚುನಾವಣೆಗಳಿಂದ ಆಕಾಂಕ್ಷಿಯಾಗಿದ್ದ ನನಗೆ, ಬಿಜೆಪಿ ಸತತ ಮೂರು ಸಾರಿ ನನಗೆ ಮೋಸ ಮಾಡಿದೆ ಎಂದು ತಮ್ಮ ಅಸಮಧಾನವನ್ನು ಹೊರಹಾಕಿದರು.

ಸತತ 10 ವರ್ಷಗಳ ಕಾಲ ನಾನು ಬಿಜೆಪಿ ಪಕ್ಷದಲ್ಲಿ ಸಂಘಟನೆ ಮಾಡಿರುವೆ. ನೈಜವಾಗಿ ಪಕ್ಷಕ್ಕಾಗಿ ಶ್ರಮಿಸಿದವರಿಗೆ ಟಕೆಟ್ ನೀಡಿಲ್ಲ. ಸರ್ವೆ, ಪಕ್ಷದ ಸಿದ್ದಾಂತಎAಬ ಎಲ್ಲ ಮಾತುಗಳು ಸುಳ್ಳು ಎಂದ ಅವರು, ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ತೀರ್ಮಾನ ಮಾಡಿರುವೆ.
ಬುಧವಾರ ಸಂಡೂರಿನಲ್ಲಿ ಕಾರ್ಯಕರ್ತರ ಸಭೆ ಬಳಿಕ ನನ್ನ ನಿರ್ಧಾರ ತಿಳಿಸುವೆ ಎಂದರು.

ಜನಾರ್ಧನ ರೆಡ್ಡಿ ರವರ ಕೆಆರ್ಪಿಪಿ ಪಕ್ಷದಿಂದ ಸ್ಪರ್ಧಿಸುತ್ತಿರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಕೆಆರ್ಪಿಪಿ ಪಕ್ಷದಿಂದ ದಿಂದಲೂ ನನಗೆ ಆಹ್ವಾನವಿದೆ. ನೋಡೋಣ ಕಾರ್ಯಕರ್ತರ ಸಭೆ ಬಳಿಕ ನನ್ನ ಅಂತಿಮ ನಿರ್ಧಾರ ತಿಳಿಸುವೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.