ಬಳ್ಳಾರಿ: ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ಅವರಿಗೆ ಸೋಮವಾರ ಜಾಮೀನು ಸಿಗಲಿದೆ ಎಂದು ಭಾವಿಸಿ ಬಳ್ಳಾರಿ ಕೇಂದ್ರ ಕಾರಾಗೃಹದ ಬಳಿ ಜಮಾಯಿಸಿದ್ದ ಅಭಿಮಾನಿಗಳು ನಿರಾಸೆಯಿಂದ ಹಿಂದಿರುಗಿದರು.

ಮಧ್ಯಾಹ್ನ 1 ಗಂಟೆ ಬಳಿಕ ಜೈಲಿನ ಬಳಿ ಸೇರುವ ಅಭಿಮಾನಿಗಳ ಸಂಖ್ಯೆ ಹೆಚ್ಚಾಗುತ್ತಲೇ ಇತ್ತು. ಆಗಾಗ ‘ಬಾಸ್ ಬಾಸ್ ಡಿ ಬಾಸ್’ ಎಂದು ಘೋಷಣೆ ಕೂಗುತ್ತಿದ್ದರು. ಆದರೆ, ಜಾಮೀನು ಅರ್ಜಿ ವಜಾಗೊಂಡಿರುವುದಾಗಿ ಯಾವಾಗ ಗೊತ್ತಾಯಿತೋ ಎಲ್ಲರ ಮೊಗದಲ್ಲಿ ಬೇಸರ ಆವರಿಸಿತು. ಬಳಿಕ ಒಬ್ಬೊಬ್ಬರೇ ನಿರ್ಗಮಿಸಿದರು.

ಇನ್ನೊಂದೆಡೆ, ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಜೈಲು ಬಳಿಗೆ ಆಗಮಿಸುವುದಾಗಿ ಸೋಮವಾರ ಬೆಳಗ್ಗೆ ಮಾಹಿತಿ ಸಿಕ್ಕಿತ್ತು. ಆದರೆ, ಅವರ ಭೇಟಿ ರದ್ದಾಯಿತು. ಸಂಬಂಧಿಗಳಾದ ಸುಶಾಂತ್ ನಾಯ್ಡು ಮತ್ತು ಸ್ನೇಹಿತರಾದ ಧನ್ವೀರ್, ಹೇಮಂತ್ ಎಂಬುವವರು ಜೈಲಿಗೆ ಬಂದು ತಿಂಡಿ ತಿನಿಸು, ಬಟ್ಟೆಗಳನ್ನು ಕೊಟ್ಟು ಹೋದರು.

ಸದ್ಯ ದರ್ಶನ್ ಅವರು ಬೆನ್ನು ನೋವಿನಿಂದ ಬಳಲುತ್ತಿದ್ದಾರೆ ಎನ್ನಲಾಗಿದ್ದು ಇತ್ತೀಚೆಗೆ ವಿಮ್ಸ್ನ ತಜ್ಞ ವೈದ್ಯರು ತಪಾಸಣೆ ಮಾಡಿ ಹೋಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.