ಬಳ್ಳಾರಿ: ‘ಗಣಿಗಾರಿಕೆ ಮೂಲಕ ಸಂಪತ್ತು ಲೂಟಿ ಮಾಡುವವರಿಗೆ ಸಂಡೂರಿನ ಜನ ಅವಕಾಶ ಮಾಡಿಕೊಡ ಬಾರದು. ಸಂಡೂರಿನವರೇ ಆದ ಇ.ಅನ್ನಪೂರ್ಣಾ ಅವರನ್ನು ಗೆಲ್ಲಿಸಬೇಕು’ ಎಂದು ಮಾಜಿ ಸಂಸದ ಕೆ.ಸಿ ಕೊಂಡಯ್ಯ ಮನವಿ ಮಾಡಿದ್ದಾರೆ.

ಬಳ್ಳಾರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿದ ಅವರು, ‘ಜಿಲ್ಲೆಯಲ್ಲಿ 2004 ರಿಂದ 2008 ರವರೆಗೆ ಅವ್ಯಾಹತ ಹಾಗೂ ಅಕ್ರಮ ಗಣಿಗಾರಿಕೆಗೆ ಕಾರಣವಾಗಿದ್ದವರು ಇಂದು ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ನಡೆಸುತ್ತಿದ್ದಾರೆ’ ಎಂದು ಎಚ್ಚರಿಸಿದರು.

‘ಬಿಜೆಪಿ ಅಭ್ಯರ್ಥಿ ಪ್ರಚಾರ ನಡೆಸುವರು ಅಭಿವೃದ್ಧಿಗಾಗಿ ಅಲ್ಲ. ಕ್ಷೇತ್ರದಲ್ಲಿರುವ ಕಬ್ಬಿಣ ಮತ್ತು ಮ್ಯಾಂಗನೀಸ್ ಗಣಿಗಳ ಮೇಲೆ ಅವರು ಕಣ್ಣಿಟ್ಟಿದ್ದಾರೆ. ಕ್ಷೇತ್ರದಲ್ಲಿ ಗಣಿಗಾರಿಕೆಯ ದೌರ್ಜನ್ಯಗಳು ಮತ್ತು ಗಲಾಟೆಗಳು, ಅಕ್ರಮ ಪುನಾರವರ್ತನೆ ಆಗದಂತೆ ಕ್ಷೇತ್ರದ ಮತದಾರರು ಎಚ್ವೇತ್ತುಕೊಳ್ಳಬೇಕು’ ಎಂದರು.

‘ಯಾವುದೆ ಕಾರಣಕ್ಕೂ ಹೊರಗಿನ ಅಭ್ಯರ್ಥಿಗಳನ್ನು ಬೆಂಬಲಿಸಬೇಡಿ’ ಎಂದು ಮನವಿ ಮಾಡಿದರು.

ಕೆಪಿಸಿಸಿ ವಕ್ತಾರ ವೆಂಕಟೇಶ್ ಹೆಗಡೆ, ಸ್ಥಳೀಯ ಕಾಂಗ್ರೆಸ್ ನಾಯಕರಾದ ರಾಮಪ್ರಸಾದ ಮನೋಹರ್, ಸಿ. ರಾಮರಾಜು, ಪಾರ್ಥ ಸಾರಥಿ, ವೆಂಕಟರಮಣ ರೆಡ್ಡಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.