ಹೊಸಪೇಟೆ: ನಗರದ ಮೂರಂಗಡಿ ವೃತ್ತದ ಮೀರ್ ಆಲಂ ಚಿತ್ರಮಂದಿರ ರಸ್ತೆಯಲ್ಲಿ ಓಡಾಡಲು ಹೇಸಿಗೆಯಾಗುತ್ತಿದೆ. ಆ ಮಟ್ಟಿಗೆ ರಸ್ತೆಯ ಪಕ್ಕದಲ್ಲಿ ತ್ಯಾಜ್ಯ ಸುರಿಯಲಾಗುತ್ತಿದೆ.

ಬಸವ ಕಾಲುವೆಗೆ ಹೊಂದಿಕೊಂಡಂತೆ ನಗರಸಭೆಯವರು ಕಸದ ತೊಟ್ಟಿ ಇಟ್ಟಿದ್ದಾರೆ. ಆದರೆ, ಸುತ್ತಮುತ್ತಲಿನ ಹಣ್ಣು ಹಾಗೂ ಇತರೆ ಮಳಿಗೆ ವ್ಯಾಪಾರಿಗಳು ಕಸವನ್ನು ಅದರೊಳಗೆ ಸುರಿಯುವ ಬದಲು ಹೊರಗೆ ಚೆಲ್ಲಿ ಹೋಗುತ್ತಿದ್ದಾರೆ. ಅದು ಸಕಾಲಕ್ಕೆ ವಿಲೇವಾರಿ ಆಗುತ್ತಿಲ್ಲ. ಅಲ್ಲಿಯೇ ಕೊಳೆತು ಗಬ್ಬು ನಾರುತ್ತಿದೆ. ಬೀದಿ ನಾಯಿಗಳು, ಹಂದಿಗಳು ಅದರಲ್ಲೇ ಠಿಕಾಣಿ ಹೂಡುತ್ತಿವೆ. ಬಿಡಾಡಿ ದನಗಳು ಕೊಳೆತ ಹಣ್ಣು, ತರಕಾರಿ ತಿನ್ನಲು ಗುಂಪು ಗುಂಪಾಗಿ ಸೇರುತ್ತಿವೆ. ಇದರಿಂದಾಗಿ ದಾರಿಹೋಕರು ಹಾಗೂ ವಾಹನ ಸಂಚಾರರಿಗೆ ತೊಂದರೆ ಆಗುತ್ತಿದೆ.

ಪ್ರವಾಸಿ ತಾಣವಾಗಿರುವ ಹಂಪಿಗೆ ದೇಶ–ವಿದೇಶಗಳಿಂದ ನಿತ್ಯ ನೂರಾರು ಜನ ಪ್ರವಾಸಿಗರು ಬರುತ್ತಾರೆ. ಎಲ್ಲರೂ ನಗರದ ಮೂಲಕವೇ ಹಾದು ಹೋಗುತ್ತಾರೆ. ಪರಿಸ್ಥಿತಿ ಹೀಗೆಯೇ ಇದ್ದರೆ ನಮ್ಮೂರಿನ ಬಗ್ಗೆ ಅವರು ಏನೆಂದುಕೊಂಡಾರೂ ಎಂಬ ಕನಿಷ್ಠ ಕಳಕಳಿಯು ಜನರಿಗೆ ಇಲ್ಲ. ರಸ್ತೆ ಪಕ್ಕದಲ್ಲಿ ತ್ಯಾಜ್ಯ ಸುರಿಯುತ್ತಿರುವವರ ವಿರುದ್ಧ ನಗರಸಭೆ ಕಠಿಣ ಕ್ರಮ ಜರುಗಿಸಬೇಕು. ಅಂದಾಗ ಸ್ವಚ್ಛತೆ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ. ಸ್ವಚ್ಛತೆ ಎನ್ನುವುದು ಘೋಷಣೆಗಷ್ಟೇ ಸೀಮಿತಗೊಳ್ಳಬಾರದು.
– ರಾಜು, ನವೀನ್, ಬಸವ, ವಿನಯ್, ಸ್ಥಳೀಯ ನಿವಾಸಿಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.