ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚುನಾವಣಾ ಯುದ್ಧಕ್ಕೆ ಸಿದ್ಧರಾಗಿ: ಎಐಸಿಸಿ ಕಾರ್ಯದರ್ಶಿ ಮಯೂರ್ ಜಯಕುಮಾರ್ ಕರೆ

ಎಐಸಿಸಿ ಕಾರ್ಯದರ್ಶಿ ಮಯೂರ್ ಜಯಕುಮಾರ್ ಕರೆ
Published : 19 ಸೆಪ್ಟೆಂಬರ್ 2024, 3:19 IST
Last Updated : 19 ಸೆಪ್ಟೆಂಬರ್ 2024, 3:19 IST
ಫಾಲೋ ಮಾಡಿ
Comments

ಸಂಡೂರು: ‘ಉಪ‌ಚುನಾವಣೆ ಯಾವ ಸಂದರ್ಭದಲ್ಲಿ‌ ಬೇಕಾದರೂ ಘೋಷಣೆಯಾಗಬಹುದು. ಚುನಾವಣೆ ಒಂದು ಯುದ್ಧವಿದ್ದಂತೆ, ಕಾರ್ಯಕರ್ತರು ಕಡಿಮೆ ಅವಧಿಯಲ್ಲಿ ಸಂಘಟಿತರಾಗಿ ಪಕ್ಷದಿಂದ ಅಂತಿಮಗೊಳ್ಳುವ ಅಭ್ಯರ್ಥಿ ಗೆಲುವಿಗೆ ಶ್ರಮಿಸಿ’ ಎಂದು ಎಐಸಿಸಿ ಕಾರ್ಯದರ್ಶಿ ಮಯೂರ್ ಜಯಕುಮಾರ್ ತಿಳಿಸಿದರು.

ಇಲ್ಲಿನ ಕೃಷ್ಣಾನಗರದ ಸಂತೋಷ್ ಲಾಡ್ ನಿವಾಸದ ಆವರಣದಲ್ಲಿ ಬುಧವಾರ‌ ನಡೆದ ಸಂಡೂರು ಉಪ ಚುನಾವಣೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

‘ಸಂಡೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಗಟ್ಟಿಯಾಗಿದೆ. ಅಷ್ಟಕ್ಕೆ ಸಮಾಧಾನಗೊಳ್ಳಬೇಕಿಲ್ಲ. ಪ್ರತಿಸ್ಪರ್ಧಿಗಳನ್ನು ಕಡೆಗಣಿಸುವಂತಿಲ್ಲ. ಜನರ ಬಳಿ ತೆರಳಿ ಕಾಂಗ್ರೆಸ್ ಸರ್ಕಾರದ ಯೋಜನೆಗಳ ಕುರಿತು ತಿಳಿಸಿ’ ಎಂದು ಹುರಿದುಂಬಿಸಿದರು.

ಕಾಂಗ್ರೆಸ್ ಮುಖಂಡ ವಿನಯ್ ಕುಮಾರ್ ಸೊರಕೆ, ‘ಧರ್ಮದ ಹೆಸರಿನಲ್ಲಿ‌ ಚುನಾವಣೆ ನಡೆಸಿದ ಬಿಜೆಪಿ ಅಯೋಧ್ಯೆಯಲ್ಲಿ ಸೋತಿದೆ. ಬಿಜೆಪಿ ಉಳಿದಿರೋದೇ ಮಾಧ್ಯಮಗಳಿಂದ’ ಎಂದು ಲೇವಡಿ ಮಾಡಿದರು.

ಸಂಸದ ಇ.ತುಕಾರಾಂ, ವಿಧಾನಪರಿಷತ್ ಮಾಜಿ ಸದಸ್ಯ ಕೆ.ಎಸ್.ಎಲ್ ಸ್ವಾಮಿ, ಹರಪನಹಳ್ಳಿ ಶಾಸಕಿ ಲತಾ ಮಲ್ಲಿಕಾರ್ಜುನ, ಕೆಪಿಸಿಸಿ ಸದಸ್ಯ ವೆಂಕಟರಾವ್ ಘೋರ್ಪಡೆ, ಕಾರ್ಯಾಧ್ಯಕ್ಷ ವಸಂತ್ ಕುಮಾರ್, ಹಿರಿಯ ಮುಖಂಡ ಚಂದ್ರಶೇಖರ್ ಮಾತನಾಡಿದರು.

ಆಕಾಂಕ್ಷಿಗಳಾಗಿ ಆರ್. ಶಿವರಾಮ್, ತುಮಟಿ ಲಕ್ಷ್ಮಣ, ಯಂಕಪ್ಪ‌ ಅರ್ಜಿ ಸಲ್ಲಿಸಿದರು.

ವಕ್ಫ್ ಬೋರ್ಡ್ ಅಧ್ಯಕ್ಷ ಹುಮಾಯೂನ್ ಖಾನ್, ಬುಡಾ ಅಧ್ಯಕ್ಷ ಆಂಜನೇಯಲು, ಬಳ್ಳಾರಿ ನಗರ ಘಟಕದ ಅಧ್ಯಕ್ಣ ಅಲ್ಲಂ ಪ್ರಶಾಂತ್, ಮಹಿಳಾ ಘಟಕದ ಆಶಾಲತಾ ಸೋಮಪ್ಪ, ಮುಖಂಡರಾದ ಮಹಮ್ಮದ್ ರಫಿ, ಶಿವಯೋಗಿ, ಪುರಸಭೆ ಅಧ್ಯಕ್ಷ ಸಿರಾಜ್ ಹುಸೇನ್, ಕುರುಬರ ಸತ್ಯಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಏಕಾಂಬರಪ್ಪ, ಚಿತ್ರಿಕಿ ಸತೀಶ್, ವಿಜಯ್ ಮುಳುಗುಂದ, ಅಕ್ಷಯ್ ಲಾಡ್, ವೃಷಭೇಂದ್ರಯ್ಯ, ಕಲ್ಗುಡೆಪ್ಪ, ಬಸಮ್ಮ ಚಂದ್ರಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT