ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಳ್ಳಾರಿಯಲ್ಲಿ ಮಳೆ ಆರ್ಭಟ: 9 ಮನೆಗಳಿಗೆ ಹಾನಿ

Published : 5 ಅಕ್ಟೋಬರ್ 2024, 19:37 IST
Last Updated : 5 ಅಕ್ಟೋಬರ್ 2024, 19:37 IST
ಫಾಲೋ ಮಾಡಿ
Comments

ಬಳ್ಳಾರಿ: ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಶುಕ್ರವಾರ ರಾತ್ರಿಯಿಂದ ಶನಿವಾರ ನಸುಕಿನವರೆಗೆ ಭಾರಿ ಮಳೆಯಾಗಿದೆ. ಕೆರೆ ಕಟ್ಟೆಗಳು ತುಂಬಿ ಹರಿದರೆ, ಹಲವು ಕಡೆ ಹಾನಿಯೂ ಆಗಿದೆ.  

ಎರಡೂ ಜಿಲ್ಲೆಗಳಲ್ಲಿ ಮನೆಗಳು, ಮರಗಳು, ವಿದ್ಯುತ್‌ ಕಂಬಗಳು ಬಿದ್ದಿವೆ. ಬೆಳೆ ಹಾನಿಯಾಗಿದೆ. ವಿಜಯನಗರ ಜಿಲ್ಲೆಯಲ್ಲಿ 18 ಮನೆಗಳಿಗೆ ಹಾನಿಯಾಗಿದೆ. ಕಾನೋಹೊಸಳ್ಳಿ ಹೋಬಳಿ
ಯೊಂದರಲ್ಲೇ 14 ಪ್ರಕರಣ ವರದಿಯಾಗಿವೆ. ಬಳ್ಳಾರಿ ಜಿಲ್ಲೆಯಲ್ಲಿ ಒಟ್ಟು 9 ಮನೆಗಳಿಗೆ ಹಾನಿಯಾಗಿದೆ.

ಬಳ್ಳಾರಿ ಜಿಲ್ಲೆ ಅಸುಂಡಿ ಗ್ರಾಮದ ‌ರಸ್ತೆಗಳು ಜಲಾವೃತ್ತಗೊಂಡಿತ್ತು. ನಾರಿಹಳ್ಳ ಜಲಾಶಯ, ದರೋಜಿ ಕರೆ ತುಂಬಿತ್ತು. ಬಳ್ಳಾರಿಯ ಶಂಕರಬಂಡೆ ಎಂಬಲ್ಲಿ ರಭಸವಾಗಿ ಹರಿಯುತ್ತಿದ್ದ ಹೊಳೆಯಲ್ಲೇ ಕಾರು ಚಲಾಯಿಸಲು ಹೋಗಿ ಕೊಚ್ಚಿ ಹೋಗಿದ್ದ ವ್ಯಕ್ತಿಯೊಬ್ಬರು ಮರದಲ್ಲಿ ಸಿಲುಕಿಕೊಂಡಿದ್ದರು. ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಅವರು ಮೃತಪಟ್ಟಿದ್ದಾರೆ. 

ಕೂಲಿ ಕಾರ್ಮಿಕರನ್ನು ಕರೆದೊಯ್ಯು ತ್ತಿದ್ದ ಗೂಡ್ಸ್ ವಾಹನ ವಿಜಯನಗರ ಜಿಲ್ಲೆಯ ಕಾನಹೊಸಹಳ್ಳಿ ಹೋಬಳಿ ಕೇಂದ್ರದ ಸಮೀಪದ ಕೆಂಚಮಲ್ಲನ ಹಳ್ಳಿಯ ಹಳ್ಳದಲ್ಲಿ ಕೊಚ್ಚಿಹೋಯಿತು. ಅದೃಷ್ಟವಾಷತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

ಬಳ್ಳಾರಿ ಜಿಲ್ಲೆಯಲ್ಲಿ 3.75 ಸೆಂ.ಮೀ ಮಳೆ ಸುರಿದಿದೆ. ಸಂಡೂರಿನ ಯಶವಂತ ನಗರದಲ್ಲಿ ಅತಿಹೆಚ್ಚು 15 ಸೆಂ.ಮೀ ಮಳೆಯಾಗಿದೆ. ವಿಜಯನಗರ ಜಿಲ್ಲೆಯಲ್ಲಿ 2.62 ಸೆಂ.ಮೀ ಮಳೆಯಾಗಿದೆ. 

ನಾಯಕನಹಟ್ಟಿಯಲ್ಲಿ ದಾಖಲೆ ಮಳೆ (ನಾಯಕನಹಟ್ಟಿ, ಚಿತ್ರದುರ್ಗ):

ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿಯಲ್ಲಿ ಶುಕ್ರವಾರ ತಡರಾತ್ರಿ ದಾಖಲೆಯ 13 ಸೆಂ.ಮೀ. ಮಳೆ ಸುರಿದಿದೆ. ರಾತ್ರಿ 9 ರಿಂದ ಬೆಳಿಗ್ಗೆ 6.30ರವರೆಗೂ ನಿರಂತರ ಗುಡುಗು, ಸಿಡಿಲಿನ ಆರ್ಭಟದೊಂದಿಗೆ ವರ್ಷಧಾರೆಯಾಗಿದೆ. 

ಸುತ್ತಮುತ್ತಲಿನ ಗ್ರಾಮಗಳಲ್ಲಿನ ಹಳ್ಳ ಕೊಳ್ಳಗಳು, ಚೆಕ್‌ಡ್ಯಾಂಗಳು ತುಂಬಿವೆ. ಕೆರೆಗಳಿಗೆ ಅಪಾರ ‍ಪ್ರಮಾಣದ ನೀರು ಹರಿಯುತ್ತಿದೆ. ನಾಯಕನಹಟ್ಟಿ ಸಮೀಪದ ಕುದಾಪುರ ಐಐಎಸ್‌ಸಿ ವಿಜ್ಞಾನ
ಕ್ಯಾಂಪಸ್‌ನಲ್ಲಿರುವ ಚಿಕ್ಕಕೆರೆಗಳು ಇದೇ ಮೊದಲ ಬಾರಿಗೆ ಕೋಡಿ ಬಿದ್ದಿವೆ. 

ಮೊಳಕಾಲ್ಮುರಿನಲ್ಲಿ 7.26 ಸೆಂ.ಮೀ, ರಾಯಾಪುರ 6.20 ಸೆಂ.ಮೀ, ಬಿಜಿ ಕೆರೆ 3.44 ಸೆಂ.ಮೀ, ರಾಂಪುರ 7.01 ಸೆಂ.ಮೀ ಹಾಗೂ ದೇವಸಮುದ್ರದಲ್ಲಿ 8.93 ಸೆಂ.ಮೀ ಮಳೆ ದಾಖಲಾಗಿದೆ. ಹಿರಿಯೂರು ತಾಲ್ಲೂಕಿನ ಧರ್ಮಪುರದಲ್ಲೂ ಉತ್ತಮ ಮಳೆ ಬಿದ್ದಿದೆ.

‘ನಾಯಕನಹಟ್ಟಿಯಲ್ಲಿ 2005ರ ಜುಲೈ 15 ರಂದು 11.02 ಸೆಂ.ಮೀ ಮಳೆ ಸುರಿದಿತ್ತು. ಶುಕ್ರವಾರ ರಾತ್ರಿ 12.96 ಸೆಂ.ಮೀ ಮಳೆ ಬಿದ್ದಿರುವುದು ಹೊಸ ದಾಖಲೆ’ ಎಂದು ಕೃಷಿ ಇಲಾಖೆ ಅಧಿಕಾರಿ ಎನ್‌.ಹೇಮಂತ್‌ ನಾಯ್ಕ ತಿಳಿಸಿದ್ದಾರೆ.

ವೃದ್ಧ ಸಾವು:

ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ದಾವಣಗೆರೆ ಜಿಲ್ಲೆ ಸಂತೇಬೆನ್ನೂರಿನ ಮನೆಯೊಂದರ ಗೋಡೆ ಕುಸಿದು ವೃದ್ಧರೊಬ್ಬರು ಶನಿವಾರ ಮೃತಪಟ್ಟಿದ್ದಾರೆ. ಕುಳಗಟ್ಟೆ ಬಸವರಾಜಪ್ಪ (81) ಸಾವಿಗೀಡಾದವರು.

ಮೈಸೂರು ಭಾಗದಲ್ಲಿ ಧಾರಾಕಾರ ಮಳೆ (ಮೈಸೂರು): ಮೈಸೂರು ಭಾಗದ ಮೈಸೂರು, ಕೊಡಗು ಮತ್ತು ಮಂಡ್ಯದ ಹಲವೆಡೆ ಶುಕ್ರವಾರ ರಾತ್ರಿ ಶುರುವಾದ ಮಳೆ ಶನಿವಾರವೂ ಮುಂದುವರಿಯಿತು. ಕೆಲವೆಡೆ ಗುಡುಗು ಸಿಡಿಲಿನಿಂದ ಕೂಡಿದ ಧಾರಾಕಾರ ಮಳೆ ಸುರಿಯಿತು. ಮನೆಗಳಿಗೆ ನೀರು ನುಗ್ಗಿತು. ಬೆಳೆಗಳಿಗೂ ಹಾನಿಯಾಯಿತು.

ಚಾಮರಾಜನಗರ ಜಿಲ್ಲೆಯ ಹಲವೆಡೆ ಹೊಲ, ಗದ್ದೆಗಳು ಜಲಾವೃತವಾಗಿವೆ. ಕಾಲುವೆ, ಕಟ್ಟೆಯತ್ತ ನೀರು ಹರಿಯುತ್ತಿದೆ. ಕೊಳ್ಳೇಗಾಲ ತಾಲ್ಲೂಕಿನ ಹಲವೆಡೆ ಮನೆಗಳಿಗೆ ನೀರು ನುಗ್ಗಿದೆ.

ಮೈಸೂರು ಜಿಲ್ಲೆಯ ಹುಣಸೂರು, ಎಚ್‌.ಡಿ. ಕೋಟೆ, ತಿ.ನರಸೀಪುರ, ಧರ್ಮಾಪುರ, ಹಂಪಾಪುರ, ಜಯಪುರ ಭಾಗದಲ್ಲಿ ಉತ್ತಮ ಮಳೆಯಾಗಿದ್ದು, ತಿ.ನರಸೀಪುರ ಪಟ್ಟಣದ ವಿವೇಕಾನಂದ ನಗರದ ಕೆಲವು ಮನೆಗಳಿಗೆ ನೀರು ನುಗ್ಗಿತು. ಮೈಸೂರು ನಗರದಲ್ಲಿ ಸಂಜೆಯಿಂದ ಬಿದ್ದ ಜೋರು ಮಳೆಯಿಂದಾಗಿ, ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅಡ್ಡಿಯಾಯಿತು. ಕೆಲವೆಡೆ ವಿದ್ಯುತ್‌ ದೀಪಾಲಂಕಾರವಿರಲಿಲ್ಲ.

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಪಟ್ಟಣ ಸೇರಿದಂತೆ ವಿವಿಧೆಡೆ ಮಧ್ಯಾಹ್ನ ಅರ್ಧ ತಾಸಿಗೂ ಹೆಚ್ಚು ಕಾಲ ಜೋರು ಮಳೆ ಸುರಿಯಿತು. ಪಟ್ಟಣದಲ್ಲಿ ನಡೆಯುತ್ತಿರುವ ದಸರಾ ಉತ್ಸವದ ವಸ್ತುಪ್ರದರ್ಶನದ ಆವರಣದಲ್ಲಿ ಅವ್ಯವಸ್ಥೆ ಉಂಟಾಯಿತು.‌ ಕೊಡಗು ಜಿಲ್ಲೆಯ ನಾಪೋಕ್ಲು ಭಾಗದಲ್ಲಿ ಸಿಡಿಲು ಅಬ್ಬರ ಜೋರಾಗಿತ್ತು, ಮಡಿಕೇರಿ ನಗರದಲ್ಲೂ ಭಾರಿ ಗುಡುಗು, ಸಿಡಿಲು ಬಂದರೂ ಮಳೆ ಹೆಚ್ಚು ಸುರಿಯಲಿಲ್ಲ.

ಕೂಲಿ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಗೂಡ್ಸ್ ವಾಹನ ವಿಜಯನಗರ ಜಿಲ್ಲೆಯ ಕಾನಹೊಸಹಳ್ಳಿ ಹೋಬಳಿ ಸಮೀಪದ ಕೆಂಚಮಲ್ಲನಹಳ್ಳಿ ಬಳಿಯ ಹಳ್ಳದಲ್ಲಿ ಕೊಚ್ಚಿಹೋಗುತ್ತಿರುವುದು 
ಕೂಲಿ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಗೂಡ್ಸ್ ವಾಹನ ವಿಜಯನಗರ ಜಿಲ್ಲೆಯ ಕಾನಹೊಸಹಳ್ಳಿ ಹೋಬಳಿ ಸಮೀಪದ ಕೆಂಚಮಲ್ಲನಹಳ್ಳಿ ಬಳಿಯ ಹಳ್ಳದಲ್ಲಿ ಕೊಚ್ಚಿಹೋಗುತ್ತಿರುವುದು 
ಮೈಸೂರು ಭಾಗದಲ್ಲಿ ಧಾರಾಕಾರ ಮಳೆ
ಮೈಸೂರು: ಮೈಸೂರು ಭಾಗದ ಮೈಸೂರು, ಕೊಡಗು ಮತ್ತು ಮಂಡ್ಯದ ಹಲವೆಡೆ ಶುಕ್ರವಾರ ರಾತ್ರಿ ಶುರುವಾದ ಮಳೆ ಶನಿವಾರವೂ ಮುಂದುವರಿಯಿತು. ಕೆಲವೆಡೆ ಗುಡುಗು ಸಿಡಿಲಿನಿಂದ ಕೂಡಿದ ಧಾರಾಕಾರ ಮಳೆ ಸುರಿಯಿತು. ಮನೆಗಳಿಗೆ ನೀರು ನುಗ್ಗಿತು. ಬೆಳೆಗಳಿಗೂ ಹಾನಿಯಾಯಿತು. ಚಾಮರಾಜನಗರ ಜಿಲ್ಲೆಯ ಹಲವೆಡೆ ಹೊಲ, ಗದ್ದೆಗಳು ಜಲಾವೃತವಾಗಿವೆ. ಕಾಲುವೆ, ಕಟ್ಟೆಯತ್ತ ನೀರು ಹರಿಯುತ್ತಿದ್ದು, ಜನ, ಜಾನುವಾರು, ವನ್ಯ ಜೀವಿಗಳಲ್ಲೂ ಸಂಭ್ರಮ ಮೂಡಿಸಿದೆ. ಕೊಳ್ಳೇಗಾಲ ತಾಲ್ಲೂಕಿನ ಹಲವೆಡೆ ಮನೆಗಳಿಗೆ ನೀರು ನುಗ್ಗಿದೆ. ಮೈಸೂರು ಜಿಲ್ಲೆಯ ಹುಣಸೂರು, ಎಚ್‌.ಡಿ. ಕೋಟೆ, ತಿ.ನರಸೀಪುರ, ಧರ್ಮಾಪುರ, ಹಂಪಾಪುರ, ಜಯಪುರ ಭಾಗದಲ್ಲಿ ಉತ್ತಮ ಮಳೆಯಾಗಿದ್ದು, ತಿ.ನರಸೀಪುರ ಪಟ್ಟಣದ ವಿವೇಕಾನಂದ ನಗರದ ಕೆಲವು ಮನೆಗಳಿಗೆ ನೀರು ನುಗ್ಗಿತು. ಜಯಪುರ ಹೋಬಳಿಯ ವಿವಿಧೆಡೆ ಶುಂಠಿ ಮತ್ತು ರಾಗಿ ಬೆಳೆಗೆ ಹಾನಿಯಾಗಿದೆ. ಮೈಸೂರು ನಗರದಲ್ಲಿ ಸಂಜೆಯಿಂದ ಬಿದ್ದ ಜೋರು ಮಳೆಯಿಂದಾಗಿ, ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅಡ್ಡಿಯಾಯಿತು. ಕೆಲವೆಡೆ ವಿದ್ಯುತ್‌ ದೀಪಾಲಂಕಾರವಿರಲಿಲ್ಲ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಪಟ್ಟಣ ಸೇರಿದಂತೆ ವಿವಿಧೆಡೆ ಮಧ್ಯಾಹ್ನ ಅರ್ಧ ತಾಸಿಗೂ ಹೆಚ್ಚು ಕಾಲ ಜೋರು ಮಳೆ ಸುರಿಯಿತು. ಪಟ್ಟಣದಲ್ಲಿ ನಡೆಯುತ್ತಿರುವ ದಸರಾ ಉತ್ಸವದ ವಸ್ತುಪ್ರದರ್ಶನದ ಆವರಣದಲ್ಲಿ ಅವ್ಯವಸ್ಥೆ ಉಂಟಾಯಿತು.‌ ಮಳವಳ್ಳಿ ತಾಲ್ಲೂಕಿನ ಬುಗತಗಹಳ್ಳಿಯ ವೆಂಕಟೇಶ್ ಅವರ ಮನೆಗೆ ನೀರು ನುಗ್ಗಿದ್ದು, ವಸ್ತುಗಳಿಗೆ ಹಾನಿಯಾಗಿದೆ. ಕುಟುಂಬದ ಸದಸ್ಯರು ರಾತ್ರಿಯಿಡೀ ಆತಂಕದಲ್ಲಿ ಕಾಲ ಕಳೆದರು. ಕೊಡಗು ಜಿಲ್ಲೆಯ ನಾಪೋಕ್ಲು ಭಾಗದಲ್ಲಿ ಸಿಡಿಲುಗಳ ಅಬ್ಬರ ಜೋರಾಗಿತ್ತು. ಮಡಿಕೇರಿ ನಗರದಲ್ಲೂ ಭಾರಿ ಗುಡುಗು, ಸಿಡಿಲುಗಳು ಕಂಡು ಬಂದರೂ ಮಳೆ ಹೆಚ್ಚು ಸುರಿಯಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT