ಸಿರುಗುಪ್ಪ: ಮಳೆಗಾಲದಲ್ಲಿ ನೈಸರ್ಗಿಕವಾಗಿ ಬೆಳೆಯುವ ಕಾರ್ಚಿಕಾಯಿ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ವ್ಯಾಪರ ಜೋರಾಗಿದೆ. ಗ್ರಾಹಕರಿಂದ ಸಾಕಷ್ಟು ಬೇಡಿಕೆಯೂ ಇದೆ.

ತಾಲ್ಲೂಕಿನಲ್ಲಿ ಮುಂಗಾರು ಆರಂಭಕ್ಕೂ ಮುನ್ನವೇ ಹೊಲವನ್ನು ಹದಗೊಳಿಸಿರುವ ರೈತರು ಬಿತ್ತನೆಗೆ ಸಿದ್ಧಗೊಳಿಸಿದ ಹೊಲಗಳಲ್ಲಿ ಮೊದಲ ಮಳೆ ಬೀಳುತ್ತಿದ್ದಂತೆ ಕಾರ್ಚಿಕಾಯಿ ಬಳ್ಳಿ ಹುಟ್ಟಿಕೊಳ್ಳುತ್ತದೆ. ಈ ಬಳ್ಳಿಯು ಭೂಮಿಯಲ್ಲಿ ನೈಸರ್ಗಿಕವಾಗಿಯೇ ಹುಲುಸಾಗಿ ಬೆಳೆಯುತ್ತದೆ.

ಕೆಲವು ರೈತರು ಈ ಬೆಳೆಯನ್ನು ಕಿತ್ತೆಸೆಯಲು ನಿರ್ಲಕ್ಷಿಸುತ್ತಿದ್ದಾರೆ. ರೈತ ಮಹಿಳೆಯರು ಇದರ ಮಹತ್ವವನ್ನು ಅರಿತು ಹೊಲಗಳಿಗೆ ತೆರಳಿ ಬಳ್ಳಿಯಲ್ಲಿರುವ ಕಾಯಿಗಳನ್ನು ಕಿತ್ತುಕೊಂಡು ಬಂದು ನಗರದ ಸೇರಿದಂತೆ ತಾಲ್ಲೂಕಿನಾದ್ಯಂತ ಮಾರಾಟ ಮಾಡುತ್ತಾರೆ. ಒಂದು ಕೆ.ಜಿ ಕಾರ್ಚಿಕಾಯಿಗೆ ₹150 ಮತ್ತು ಒಂದು ಸೇರ್ಗೆ ₹ 50 ದರವಿದೆ. ಇದರಿಂದ ಆದಾಯವೂ ಹೆಚ್ಚಿದೆ.

ಪಟ್ಟಣ ಮತ್ತು ನಗರ ಪ್ರದೇಶಗಳಲ್ಲಿ ಪ್ರತಿವರ್ಷ ಜೂನ್ ಮತ್ತು ಜುಲೈ ತಿಂಗಳ ಮಳೆಗಾಲದಲ್ಲಿ ಸಿಗುವ ಕಾರ್ಚಿಕಾಯಿಯನ್ನು ತರಕಾರಿ ಪ್ರಿಯರು ಹುಡುಕಿಕೊಂಡು ಬಂದು ಖರೀದಿಸುವುದರಿಂದ ಇತ್ತೀಚಿನ ದಿನಗಳಲ್ಲಿ ಭಾರಿ ಬೇಡಿಕೆ ಬಂದಿದ್ದು, ದಾಖಲೆ ಬೆಳೆಯಲ್ಲಿ ಮಾರಾಟವಾಗುತ್ತಿದೆ.

ಸೇವನೆ ವಿಧಾನ: ದೊಡ್ಡ ಗಾತ್ರದ ಕಾರ್ಚಿಕಾಯಿಯಲ್ಲಿ ಬಿಳಿಬಣ್ಣದ ಬೀಜಗಳು ಕಂಡುಬರುತ್ತವೆ. ಈ ಕಾಯಿಯನ್ನು ಎಣ್ಣೆಯಲ್ಲಿ ಹುರಿದು ನೀರು ಬೆರೆಸದೇ ಪಲ್ಯ ಸಿದ್ಧಪಡಿಸಿ,ಜೋಳದ ರೊಟ್ಟಿಯ ಜೊತೆಗೆ ತಿನ್ನುತ್ತಾರೆ. ಇದು ಹಾಗಲಕಾಯಿ ಜಾತಿಗೆ ಸೇರಿದ್ದರೂ ಅದರಷ್ಟು ಕಹಿ ಇರುವುದರಿಲ್ಲ.

‘ಕೆ.ಜಿಗೆ ₹160, ಒಂದು ಸೇರಿಗೆ ₹50 ರಂತೆ ಕಾರ್ಚಿಕಾಯಿ ಮಾರಾಟ ಮಾಡುತ್ತಿದ್ದೇವೆ. ಜನರು ಕಾರ್ಚಿಕಾಯಿ ಖರೀದಿಗೆ ಹುಡುಕಿಕೊಂಡು ಬರುತ್ತಿದ್ದಾರೆ. ಇದರಿಂದಾಗಿ ಉತ್ತಮ ವ್ಯಾಪಾರವಾಗುತ್ತಿದೆ’ ಎಂದು ವ್ಯಾಪಾರಿ ಸಿದ್ದಮ್ಮ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.