ಸಂಡೂರು: ಇಲ್ಲಿನ ಧರ್ಮಾಪುರದ ಈಶ್ವರ ದೇವಸ್ಥಾನದ ಕಲ್ಯಾಣಿಗೆ ಈಗ ಪುನಶ್ಚೇತನದ ‘ಭಾಗ್ಯ’ ಸಿಕ್ಕಿದೆ.

ಪಾಳು ಬಿದ್ದಿದ್ದ ಕಲ್ಯಾಣಿಯಿಂದಹೂಳು ತೆಗೆಯುವ ಕೆಲಸವನ್ನು ಎಸ್.ಕೆ.ಎಂ.ಇ. ಗಣಿ ಕಂಪನಿಯ ಸಹಕಾರದಿಂದ ಕೈಗೆತ್ತಿಕೊಳ್ಳಲಾಗಿದೆ.

2015ರಲ್ಲಿ ಜಿಲ್ಲೆಯ ಮಠಾಧೀಶರ ಪರಿಷತ್ತಿನ ಸದಸ್ಯ ಸ್ವಾಮೀಜಿಗಳು ಒಂದು ದಿನ ಸಾಂಕೇತಿಕವಾಗಿ ಕಲ್ಯಾಣಿ ಸ್ವಚ್ಛತಾ ಕೆಲಸ ಕೈಗೆತ್ತಿಕೊಂಡಿದ್ದರು.ಅಂದಿನಿಂದ ಕಲ್ಯಾಣಿಯನ್ನು ಜೀರ್ಣೋದ್ಧಾರಗೊಳಿಸುವ ಕುರಿತು ಚರ್ಚೆಗಳು ನಡೆಯುತ್ತಿದ್ದವು. ಅದು ಈಗ ಕಾರ್ಯರೂಪಕ್ಕೆ ಬಂದಿದೆ.

ಕಲ್ಯಾಣಿಯಲ್ಲಿ ನೀರಿದ್ದಾಗ ಸುತ್ತಮುತ್ತಲಿನ ಪ್ರದೇಶದಲ್ಲಿ ಅಂತರ್ಜಲ ಮಟ್ಟ ಉತ್ತಮವಾಗಿತ್ತು. ಬೇಸಿಗೆಯಲ್ಲಿ ವಿವಿಧ ಭಾಗದಿಂದ ಜನ ಬಂದು ಈಜಾಡುತ್ತಿದ್ದರು. ಆದರೆ, ಅನೇಕ ವರ್ಷಗಳಿಂದ ಇದ್ಯಾವುದು ನಡೆಯುತ್ತಿರಲಿಲ್ಲ. ಹೂಳು ತೆಗೆದು ಅಭಿವೃದ್ಧಿಗೊಳಿಸುತ್ತಿರುವ ಕಾರಣ ಮುಂದಿನ ದಿನಗಳಲ್ಲಿ ಹಿಂದೆ ನಡೆಯುತ್ತಿದ ಚಟುವಟಿಕೆಗಳು ಮತ್ತೆ ಆರಂಭವಾಗಬಹುದು ಎನ್ನುತ್ತಾರೆ ಸ್ಥಳೀಯರು.

‘ನಮ್ಮ ಊರಿನ ಈಶ್ವರ ದೇವಸ್ಥಾನದ ಬಾವಿ ನೂರಾರು ವರ್ಷಗಳಷ್ಟು ಹಳೆಯದು. ಇತ್ತೀಚಿನ ವರ್ಷಗಳಲ್ಲಿ ಮಳೆ ಕೊರತೆಯಿಂದ ನೀರಿಲ್ಲದೆ ಬಣಗುಡುತ್ತಿತ್ತು. ಶಿಥಿಲಾವಸ್ಥೆ ತಲುಪಿತ್ತು. ಗ್ರಾಮಸ್ಥರೆಲ್ಲ ಸೇರಿ ಬಾವಿಯ ಹೂಳನ್ನು ತೆಗೆಸಿದ್ದೆವು. ಗ್ರಾಮಸ್ಥರು ಈ ಕುರಿತು ಎಸ್.ಕೆ.ಎಂ.ಇ. ಗಣಿ ಕಂಪನಿಯ ಅಧಿಕಾರಿಗಳೊಂದಿಗೆ ಚರ್ಚಿಸಿದಾಗ ಅವರು ಬಾವಿಯ ಜೀರ್ಣೋದ್ಧಾರಕ್ಕೆ ಸಹಕಾರ ಕೊಡುವ ಭರವಸೆ ನೀಡಿದರು’ ಎಂದುಗ್ರಾಮದ ಮುಖಂಡ ಜಿ.ಎಸ್. ಸಿದ್ದಪ್ಪ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.