ಸಂಡೂರು: ರಾಜಕೀಯದಲ್ಲಿ ಯಾವೊಂದು ಕಪ್ಪು ಚುಕ್ಕಿಯೂ ಇಲ್ಲ ಎನ್ನುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈಗ ಇಡೀ ಮೈ ಕಪ್ಪು ಮಾಡಿಕೊಂಡಿದ್ದಾರೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ತಿಳಿಸಿದರು.

ಪಟ್ಟಣದ ದೌಲತ್ ಪುರ ರಸ್ತೆಯ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.

'ಕಾಂಗ್ರೆಸ್ ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ತೊಡಗಿದೆ. ವರ್ಗಾವಣೆ ದಂಧೆ. ವಾಲ್ಮೀಕಿ ನಿಗಮ, ಮುಡಾ, ವಕ್ಫ್ ಹಗರಣಗಳೇ ಇದಕ್ಕೆ ತಾಜಾ ಉದಾಹರಣೆ. ವಾಲ್ಮೀಕಿ ನಿಗಮದಲ್ಲಿ ಹಗರಣವೇ ನಡೆದಿಲ್ಲ ಎಂದಿದ್ದ ಸಿದ್ರಾಮಯ್ಯ ₹87 ಕೋಟಿ ಹಗರಣ ಎಂದು ಒಪ್ಪಿಕೊಂಡಿದ್ದರು. ಅರಿಸಿನ ಕುಂಕುಮಕ್ಕೆ ತಮ್ಮ ಪತ್ನಿಗೆ ನೀಡಲಾಗಿದೆ ಎಂದಿದ್ದ ನಿವೇಶನಗಳನ್ನು ವಾಪಾಸ್ ಕೊಟ್ಟರು. ಹಗರಣಗಳನ್ನು ಮಾಡುತ್ತಿರುವುದು ಈ ಸರ್ಕಾರದ 6ನೇ ಗ್ಯಾರಂಟಿಯಾದರೆ ಸಿದ್ದರಾಮಯ್ಯನವರ ರಾಜೀನಾಮೆ 7ನೇ ಗ್ಯಾರಂಟಿಯಾಗಿದೆ. ಅವರ ಸ್ಥಾನದ ಮೇಲೆ ತೂಗುಗತ್ತಿ ಬೀಸುತ್ತಿದೆ. ಅವರ ಪಕ್ಷದವರೇ ಮುಡಾ ದಾಖಲೆ ಕೊಟ್ಟು ಮುಖ್ಯಮಂತ್ರಿ ಕುರ್ಚಿ ಮೇಲೆ ಟವೆಲ್ಹಾಕಿಕೊಂಡು ಕುಳಿತಿದ್ದಾರೆ' ಎಂದರು.

'ಸಚಿವ ಜಮೀರ್ ಅಹ್ಮದ್ ಅವರನ್ನು ಪಾಕಿಸ್ತಾನಕ್ಕೆ ಗಡಿಪಾರು ಮಾಡಬೇಕು. ದೇಶದಲ್ಲಿ ರೈಲ್ವೆ, ಮಿಲಿಟರಿ ನಂತರ ಹೆಚ್ಚು ಭೂಮಿಯನ್ನು ವಕ್ಫ್ ಬೋರ್ಡ್ ಹೊಂದಿದೆ. ಜಮೀರ್ ತಲೆ ಹರಟೆ ಮಾಡಿದರೆ ತಕ್ಕ ಪಾಠ ಕಲಿಸಬೇಕಾಗುತ್ತದೆ. ಡಿ.ಕೆ.ಶಿವಕುಮಾರ್ ಬಣ್ಣ ಹಚ್ಚದೇ ನಾಟಕ ಮಾಡುತ್ತಾರೆ. ಉಪಚುನಾವಣೆ ಇರುವ ಕಾರಣಕ್ಕೆ ಗ್ಯಾರಂಟಿ ಯೋಜನೆಗಳು ಮುಂದುವರೆದಿವೆ.

ಸಂಡೂರಿನಲ್ಲಿ ಸಂಪತ್ತಿದ್ದು ಕ್ಷೇತ್ರವನ್ನು ಕತ್ತಲೆಯಲ್ಲಿಇಟ್ಟಿದ್ದಾರೆ. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ, ಡಿಎಂಎಫ್, ಸಿಎಸ್ಆರ್, ಕೆಎಂಇಆರ್ಸಿ, ಸರ್ಕಾರದ ವಿಶೇಷ ಅನುದಾನ ಎಲ್ಲವೂ ಇದ್ದು ಒಂದು ಉತ್ತಮ ಆಸ್ಪತ್ರೆ, ರಸ್ತೆಗಳು, ಬಸ್ ನಿಲ್ದಾಣ,ಕುಡಿಯುವ ನೀರಿನಂತಹ ಮೂಲ ಸೌಕರ್ಯ ಒದಗಿಸುವಲ್ಲಿ ಇಲ್ಲಿನ ಮಾಜಿ ಶಾಸಕರು ವಿಫಲರಾಗಿದ್ದಾರೆ. ಇದೆಲ್ಲವನ್ನೂ ನೋಡಿ ಜನ ಈ ಬಾರಿ ಬಂಗಾರು ಹನುಮಂತುಗೆ ಮತ ನೀಡಿ ಜಯಶಾಲಿಯಾಗಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು, ಸಂಡೂರು ಮಂಡಲ ಅಧ್ಯಕ್ಷ ನಾನಾ ಸಾಹೇಬ್ ನಿಕ್ಕಂ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.