ಭಾನುವಾರ, 24 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಳ್ಳಾರಿ: ಉದ್ಯಾನ ಅಭಿವೃದ್ಧಿಗಿಲ್ಲ ಯೋಜನೆ!

Published : 25 ಸೆಪ್ಟೆಂಬರ್ 2023, 5:18 IST
Last Updated : 25 ಸೆಪ್ಟೆಂಬರ್ 2023, 5:18 IST
ಫಾಲೋ ಮಾಡಿ
Comments
ಬಳ್ಳಾರಿಯ ಎಂಎಂಟಿಸಿ ಉದ್ಯಾನ ನಿರ್ವಹಣೆ ಇಲ್ಲದೆ ಹಾಳುಬಿದ್ದಿರುವುದು.
ಬಳ್ಳಾರಿಯ ಎಂಎಂಟಿಸಿ ಉದ್ಯಾನ ನಿರ್ವಹಣೆ ಇಲ್ಲದೆ ಹಾಳುಬಿದ್ದಿರುವುದು.
ಬಳ್ಳಾರಿಯ ಅಂತಾಪುರ ಕಾಲೋನಿ ಉದ್ಯಾನವನ
ಬಳ್ಳಾರಿಯ ಅಂತಾಪುರ ಕಾಲೋನಿ ಉದ್ಯಾನವನ
ನಾನು ಹೊಸದಾಗಿ ಬಂದಿದ್ದೇನೆ. ಉದ್ಯಾನಗಳ ನಿರ್ವಹಣೆ ಹೊಣೆ ಪಡೆದಿರುವ ಕೆಲ ಶಾಲೆಗಳು ಅವುಗಳಿಗೆ ಬೀಗ ಹಾಕಿರುವ ವಿಷಯ ಗೊತ್ತಿಲ್ಲ. ಈ ಬಗ್ಗೆ ಪರಿಶೀಲಿಸುವೆ
- ಖಲೀಲ್‌ ಸಾಬ್‌, ಪಾಲಿಕೆ ಆಯುಕ್ತ
ಉದ್ಯಾನಗಳ ನಿರ್ವಹಣೆ ಹೊಣೆ ಪಡೆದಿರುವ ಶಾಲೆಗಳು ಸದರಿ ಜಾಗಕ್ಕೆ ಬೀಗ ಹಾಕಿಕೊಂಡಿದ್ದರೆ ತಕ್ಷಣ ತೆಗೆಸಬೇಕು. ಸಾರ್ವಜನಿಕರಿಗೆ ಮುಕ್ತಗೊಳಿಸಬೇಕು
- ಕೆ.ಎಂ. ಮಹೇಶ್ವರಸ್ವಾಮಿ, ಗುಲ್ಬರ್ಗಾ ವಿವಿ ಸಿಂಡಿಕೇಟ್‌ ಮಾಜಿ ಸದಸ್ಯ
ಶಾಲಾ– ಕಾಲೇಜಿಗೂ ಉದ್ಯಾನ! 
ಮಹಾನಗರಪಾಲಿಕೆ ಕೆಲವು ಶಾಲಾ– ಕಾಲೇಜುಗಳಿಗೂ ಉದ್ಯಾನವನ ನಿರ್ವಹಣೆ ಹೊಣೆಯನ್ನು ವಹಿಸಿದೆ. ಪಾಲಿಕೆ ಅಧಿಕಾರಿಗಳೇ ಹೇಳುವ ಪ್ರಕಾರ ಸದ್ಯ ಮೂರು ಉದ್ಯಾನಗಳನ್ನು ಶಾಲಾ– ಕಾಲೇಜುಗಳ ಸುಪರ್ದಿಗೆ ಕೊಡಲಾಗಿದೆ. ಸೋಜಿಗದ ಸಂಗತಿ ಎಂದರೆ ಶಾಲಾ– ಕಾಲೇಜುಗಳ ಆಡಳಿತ ಮಂಡಳಿ ಉದ್ಯಾನಗಳಿಗೆ ಸಾರ್ವಜನಿಕರ ‍‍ಪ್ರವೇಶ ನಿರ್ಬಂಧಿಸಿವೆ. ಗಾಂಧಿನಗರದ ಎರಡು ಶಾಲೆಗಳು ಸಾರ್ವಜನಿಕರಿಗಾಗಿ ತೆರೆಯಲಾಗಿದ್ದ ದ್ವಾರಗಳಿಗೆ ಬೀಗ ಹಾಕಿ ಬಂದ್‌ ಮಾಡಿವೆ. ಶಾಲೆ ಕಡೆಯಿಂದ ವಿದ್ಯಾರ್ಥಿಗಳ ಪ್ರವೇಶಕ್ಕೆ ಮಾತ್ರ ಗೇಟುಗಳನ್ನು ತೆರೆಯಲಾಗಿದೆ. ಆದರೆ ಈ ಉದ್ಯಾನಗಳನ್ನು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಉದ್ಯಾನಗಳ ಅಭಿವೃದ್ಧಿ ನಿರ್ವಹಣೆಯನ್ನು ಹೊರಗಿನವರಿಗೆ ವಹಿಸುವ ಸಂಬಂಧ ಮಹಾನಗರಪಾಲಿಕೆ ಕಳೆದ ವರ್ಷ ನವೆಂಬರ್‌ 22ರಂದು ಆದೇಶವೊಂದನ್ನು ಹೊರಡಿಸಿದೆ. ಅದರಂತೆ ಉದ್ಯಾನವನ ಮಾಲೀಕತ್ವ ಪಾಲಿಕೆಯದ್ದಾಗಿರುತ್ತದೆ. ಅಭಿವೃದ್ಧಿ ಹೆಸರಿನಲ್ಲಿ ಯಾವುದೇ ಕಟ್ಟಡ ಕಟ್ಟುವಂತಿಲ್ಲ. ಯಾರೂ ಒತ್ತುವರಿ ಮಾಡಬಾರದು. ಅವಧಿ ಮುಗಿದ ಬಳಿಕ ಉದ್ಯಾನವನ್ನು ಹಿಂತಿರುಗಿಸಬೇಕು. ಉದ್ಯಾನವನ ಪ್ರವೇಶಕ್ಕೆ ಹಿರಿಯ ನಾಗರಿಕರು ಸಾರ್ವಜನಿಕರು ಹಾಗೂ ಮಕ್ಕಳ ಪ್ರವೇಶಕ್ಕೆ ನಿರ್ಬಂಧ ಹಾಕುವಂತಿಲ್ಲ ಎಂಬುವುದೂ ಸೇರಿದಂತೆ ಹಲವಾರು ಷರತ್ತುಗಳನ್ನು ಹಾಕಲಾಗಿದೆ. ಆದರೂ ಕೆಲವು ಶಾಲೆಗಳು ಉದ್ಯಾನವನಕ್ಕೆ ಬೀಗ ಹಾಕಿಕೊಂಡು ಸ್ವಂತ ಆಸ್ತಿಯಂತೆ ವರ್ತಿಸುತ್ತಿವೆ. ಪಾಲಿಕೆ ಅಧಿಕಾರಿಗಳು ಮತ್ತು ಸಿಬ್ಬಂದಿ ಈ ಬಗ್ಗೆ ಮೌನವಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿದೆ.       

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT