ಬಳ್ಳಾರಿ: ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಸೋಮವಾರ ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಮತ ಯಾಚಿಸಿದರು. ‘ನಮ್ಮ ಅಭ್ಯರ್ಥಿಯ ಪರ ಜನರ ಒಲವು ಇದೆ’ ಎಂದು ಎರಡೂ ಪಕ್ಷಗಳ ಮುಖಂಡರು ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್ ಅಭ್ಯರ್ಥಿ ಇ. ಅನ್ನಪೂರ್ಣಾ ಪರ ಸಚಿವರಾದ ಸಂತೋಷ್ ಲಾಡ್, ಎಸ್.ಎನ್ ಬೋಸರಾಜು, ಸಂಸದೆ ಪ್ರಭಾ ಮಲ್ಲಿಕಾರ್ಜುನ ಸೋಮವಾರ ಮತಯಾಚಿಸಿದರು. ಬಳಿಕ ಸುದ್ದಿಗಾರರ ಜೊತೆ ಲಾಡ್ ಮಾತನಾಡಿ, ‘ಬಿಜೆಪಿ ಅಭ್ಯರ್ಥಿ ಈ ತಾಲ್ಲೂಕಿನವರಲ್ಲ. ಅನ್ನಪೂರ್ಣಾ ಸ್ಥಳೀಯರು. ಜನ ಅವರನ್ನು ಬೆಂಬಲಿಸುವರು’ ಎಂದರು.

‘ಸಂಡೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 17 ಪ್ರಚಾರ ಸಭೆಗಳಲ್ಲಿ ಪಾಲ್ಗೊಂಡು, 1.50 ಲಕ್ಷ ಜನರನ್ನು ಭೇಟಿಯಾಗಿದ್ದಾರೆ. ಇದರಿಂದ ನಮಗೆ ಅನುಕೂಲವಾಗಲಿದೆ’ ಎಂದು ಅವರು ಹೇಳಿದರು.

ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತ ಪರವಾಗಿ ಶಾಸಕ ಜನಾರ್ದನ ರೆಡ್ಡಿ ಪ್ರಚಾರ ನಡೆಸಿದರು. ಹನುಮಂತ ಅವರು ಸಂಘ, ಸಂಸ್ಥೆಗಳ ಮುಖಂಡರನ್ನು ಭೇಟಿಯಾಗಿ ಬೆಂಬಲ ಕೋರಿದರು.

ಸುದ್ದಿಗಾರರ ಜೊತೆ ಜನಾರ್ದನ ರೆಡ್ಡಿ ಮಾತನಾಡಿ, ‘ನಾನು ಸಂಡೂರನ್ನು ಸಿಂಗಪುರ, ಬೀಜಿಂಗ್ ಮಾಡುವುದಾಗಿ ಹೇಳಿಲ್ಲ. ಆದರೆ, ಚೀನಾಕ್ಕೆ ಬೀಜಿಂಗ್ ಹೇಗೆ ಸ್ಟೀಲ್ ಹಬ್ ಆಗಿದೆಯೋ ಅದೇ ರೀತಿ ಬಳ್ಳಾರಿಯನ್ನು ದೇಶಕ್ಕೆ ಸ್ಟೀಲ್ ಹಬ್ ಮಾಡುವೆ. ಹಿಂದಿನ ಶಾಸಕ ಇ. ತುಕಾರಾಂ ಇಲ್ಲಿ ಕೆಲಸ ಮಾಡಿಲ್ಲ. ಬಂಗಾರು ಹನುಮಂತಗೆ ಬೆಂಬಲ ಸಿಗಲಿದೆ’ ಎಂದರು.

ಮತದಾರರ ಚೀಟಿ ವಿಷಯಕ್ಕೆ ಗಲಾಟೆ: ಕುಡುತಿನಿಯ ಬುಡ್ಗಾ ಜಂಗಮ ಕಾಲೊನಿಯಲ್ಲಿ ಮತದಾರರ ಗುರುತಿನ ಚೀಟಿ ಹಂಚುವ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಗಲಾಟೆಯಾಗಿದ್ದು, ದೂರು ಪ್ರತಿದೂರು ದಾಖಲಾಗಿದೆ. ಎರಡೂ ಪ್ರಕರಣದಲ್ಲಿ ಒಟ್ಟು 27 ಜನರ ವಿರುದ್ಧ ಎಫ್ಐಆರ್ ಆಗಿದೆ.

ಮತದಾನ ಬಹಿಷ್ಕಾರದ ಎಚ್ಚರಿಕೆ–ಮನವೊಲಿಕೆ: ಸಂಡೂರು ಕ್ಷೇತ್ರದ ಹೊಸೂರು, ವಿಠಲಾಪುರ ಮತ್ತು ತುಮಟಿ ತಾಂಡಗಳ ಜನರು ಮತದಾನ ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿದ್ದರು. ಮಾಹಿತಿ ಪಡೆದ ಅಧಿಕಾರಿಗಳು ಗ್ರಾಮಸ್ಥರ ಸಮಸ್ಯೆ ಆಲಿಸಿ ಆಲಿಸಿ ಪರಿಹಾರ ಸೂಚಿಸಿದ್ದಾರೆ.

‘ಸದ್ಯ ಗ್ರಾಮಸ್ಥರು ಮತದಾನಕ್ಕೆ ಒಪ್ಪಿದ್ದಾರೆ. ಈವರೆಗೆ ತಾತ್ಕಾಲಿಕ ಚೆಕ್ ಪೋಸ್ಟ್ಗಳಲ್ಲಿ ದಾಖಲೆ ಇಲ್ಲದೇ ಸಾಗಿಸುತ್ತಿದ್ದ ₹28 ಲಕ್ಷ ಹಣ ವಶಪಡಿಸಿಕೊಳ್ಳಲಾಗಿದೆ. ಸುಮಾರು 2,900 ಲೀಟರ್ ಮದ್ಯ ವಶಪಡಿಸಿಕೊಳ್ಳಲಾಗಿದೆ’ ಎಂದು ಚುನಾವಣಾಧಿಕಾರಿ ರಾಜೇಶ್ ಎಚ್.ಡಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.