ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹೂವಿನಹಡಗಲಿ | ಷಟಲ್ ಬ್ಯಾಡ್ಮಿಂಟನ್: ರಾಜ್ಯ ಮಟ್ಟಕ್ಕೆ ಆಯ್ಕೆ

Published : 4 ಅಕ್ಟೋಬರ್ 2024, 12:54 IST
Last Updated : 4 ಅಕ್ಟೋಬರ್ 2024, 12:54 IST
ಫಾಲೋ ಮಾಡಿ
Comments

ಹೂವಿನಹಡಗಲಿ: ಇಲ್ಲಿನ ಜೇಸಿಸ್ ಹಿರಿಯ ಪ್ರಾಥಮಿಕ ಶಾಲೆಯ ಬಾಲಕರ ಷಟಲ್ ಬ್ಯಾಡ್ಮಿಂಟನ್ ತಂಡ ಸತತ ನಾಲ್ಕನೇ ಬಾರಿಗೆ  ರಾಜ್ಯಮಟ್ಟಕ್ಕೆ ಆಯ್ಕೆಯಾಗಿದೆ.

ಹೊಸಪೇಟೆಯಲ್ಲಿ ಜರುಗಿದ ಕಲಬುರ್ಗಿ ವಿಭಾಗ ಮಟ್ಟದ ಷಟಲ್ ಬ್ಯಾಡ್ಮಿಂಟನ್ ಪಂದ್ಯದಲ್ಲಿ ವಿಜಯನಗರ ಜಿಲ್ಲೆ ಪ್ರತಿನಿಧಿಸಿ ರಾಯಚೂರು ಜಿಲ್ಲೆಯ ತಂಡದ ವಿರುದ್ಧ ಜಯ ಗಳಿಸಿ ರಾಜ್ಯಮಟ್ಟಕ್ಕೆ ಪ್ರವೇಶಿಸಿದೆ.

ವಿದ್ಯಾರ್ಥಿಗಳಾದ ಜೆ.ನಿಖಿಲ್, ವೈ.ದಿಲೀಪ, ಕಾಶೀಂ, ಮೈನುದ್ದಿನ್, ಅಬ್ಬು ಹಸೇನ್ ತಂಡದಲ್ಲಿದ್ದರು. ವಿದ್ಯಾರ್ಥಿಗಳ ಸಾಧನೆಯನ್ನು ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಅಶೋಕ ಕುಮಾರ್ ಧಾರಿವಾಲ್, ಮುಖ್ಯ ಶಿಕ್ಷಕ ಪಿ.ಜಯಪ್ಪ, ದೈಹಿಕ ಶಿಕ್ಷಣ ಶಿಕ್ಷಕ ಎಚ್.ಷಣ್ಮುಖಪ್ಪ, ತರಬೇತುದಾರ ನಿಯಾಜ್ ಪ್ರಶಂಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT