ಕೊಟ್ಟೂರು: ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಪಟ್ಟಣದಲ್ಲಿ ವಾಹನ ಸಂಚಾರದ ದಟ್ಟಣೆ ಹೆಚ್ಚುತ್ತಿದೆ. ಗಿಜಿಗುಡುವ ವಾತಾವರಣದಿಂದ ಪಾದಚಾರಿಗಳು ಜೀವಭಯದಿಂದ ಮುಖ್ಯರಸ್ತೆಗಳಲ್ಲಿ ಅಡ್ಡಾಡುವ ಪರಿಸ್ಥಿತಿ ಇದೆ.

ಗಾಂಧಿ ವೃತ್ತದಿಂದ ಉಜ್ಜಯಿನಿ ವೃತ್ತದವರೆಗೂ ಸರಕು ಸಾಮಗ್ರಿಗಳನ್ನು ಹೊತ್ತು ತಂದ ಲಾರಿಗಳು ಅಂಗಡಿಗಳ ಮುಂದೆ ಗಂಟೆಗಟ್ಟಲೆ ಸರಕು ಇಳಿಸುವ ಕಾರ್ಯದಲ್ಲಿ ತೊಡಗುವುದರಿಂದ ಕಿರಿದಾದ ರಸ್ತೆಯಲ್ಲಿ ಎದುರಿಗೆ ಬರುವ ವಾಹನಗಳು ಮುಂದೆ ಹೋಗಲು ಸಾಧ್ಯವಾಗದ ಪರಿಸ್ತಿತಿ ಇದೆ. ಇದರ ಮಧ್ಯೆ ಬಿಡಾಡಿ ದಮಕರುಗಳ ಹಾವಳಿ ಒಂದೆಡೆಯಾದರೆ ದ್ವಿಚಕ್ರ ವಾಹನ ಸವಾರರು ತಮಗೆ ಇಚ್ಛೆ ಬಂದಲ್ಲಿ ನಿಲ್ಲಿಸುವುದರಿಂದ ಟ್ರಾಫಿಕ್ ಸಮಸ್ಯೆ ಹೆಚ್ಚಾಗಿದೆ.

ಕೊಟ್ಟೂರೇಶ್ವರ ಸ್ವಾಮಿಯ ದರ್ಶನಕ್ಕೆ ದಿನ ನಿತ್ಯವು ಅಸಂಖ್ಯಾತ ಭಕ್ತರು ಆಗಮಿಸುತ್ತಾರೆ.ಬಂದಂತಹ ಭಕ್ತರ ವಾಹನಗಳ ನಿಲುಗಡೆಗೆ ಸೂಕ್ತ ಸ್ಥಳವಿಲ್ಲದಿರುವುದರಿಂದ ದ್ವಾರ ಬಾಗಿಲಿನಿಂದ ದೇವಸ್ಥಾನದವರೆಗೂ ವಾಹನಗಳ ದಟ್ಟಣೆ ಹೆಚ್ಚಾಗುತ್ತದೆ.

ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಬೆಳಿಗ್ಗೆ ಮತ್ತು ಸಂಜೆ ಸುಗಮವಾಗಿ ರಸ್ತೆಯನ್ನು ದಾಟಿ ಮನೆ ಸೇರಬೇಕಾದರೆ ಹರಸಾಹಸಪಡಬೇಕಾಗಿದೆ ಅದರಲ್ಲೂ ಹಿರಿಯ ನಾಗರಿಕರ ಪರಿಸ್ಥಿತಿ ಹೇಳುವಂತಿಲ್ಲ.

ಬೀದಿ ಬದಿಯ ವ್ಯಾಪಾರಿಗಳು ರಸ್ತೆ ಅತಿಕ್ರಮಿಸುವುದರಿಂದ ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿದೆ ಎಂದು ಸಾರ್ವಜನಿಕರ ದೂರು.

ರೇಣುಕಾ ಟಾಕೀಸ್ ರಸ್ತೆ ಹಾಗೂ ಮುಖ್ಯರಸ್ತೆಗೆ ವಿಭಜಕ ನಿರ್ಮಿಸದ ಕಾರಣ ಹಾಗೂ ವಾಹನ ಸವಾರರು ವೇಗದಿಂದ ಚಲಾಯಿಸುವುದರಿಂದ ಅಪಘಾತಗಳು ನಡೆಯುತ್ತಿರುವುದನ್ನು ನಿತ್ಯವೂ ಕಾಣಬಹುದಾಗಿದೆ. ಮುಖ್ಯರಸ್ತೆ ಹಾಗೂ ರೇಣುಕ ಟಾಕೀಸ್ ರಸ್ತೆಗಳಲ್ಲಿ ಏಕಮುಖ ಸಂಚಾರಕ್ಕೆ ಪೊಲೀಸ್ ಇಲಾಖೆ ಕ್ರಮಕೈಗೊಂಡರೆ ಸ್ವಲ್ಪಮಟ್ಟಿಗೆ ವಾಹನಗಳ ದಟ್ಟಣೆ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಸ್ಥಳೀಯ ವ್ಯಾಪಾರಿ ಬಸವರಾಜ್ ಹೇಳುತ್ತಾರೆ.

ಸ್ಥಳೀಯ ಆಡಳಿತ ಹಾಗೂ ಪೊಲೀಸ್ ಇಲಾಖೆ ಸೂಕ್ತ ಕ್ರಮಕೈಗೊಂಡು ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂಬುದು ಸಾರ್ವಜನಿಕರ ಒತ್ತಾಸೆಯಾಗಿದೆ.

ಸಂಚಾರಿ ನಿಯಮ ಉಲ್ಲಂಘಿಸಿದವರ ವಿರುದ್ದ ಶಿಸ್ತುಕ್ರಮ ಕೈಗೊಳ್ಳಲಾಗುವುದು. ರೇಣುಕಾ ಟಾಕೀಸ್ ರಸ್ತೆ ಹಾಗೂ ಮುಖ್ಯರಸ್ತೆಗಳಲ್ಲಿ ಏಕಮುಖ ಸಂಚಾರಕ್ಕೆ ಕ್ರಮ ಕೈಗೊಳ್ಳಲಾಗುವುದು
–ಗೀತಾಂಜಲಿ ಶಿಂಧೆ ಪಿಎಸ್‌ಐ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.