ಹೊಸಪೇಟೆ(ವಿಜಯನಗರ): ‘ಮದುವೆ ಮತ್ತಿತರ ಸಮಾರಂಭದ ಛಾಯಾಚಿತ್ರಗಳನ್ನು ಆಯ್ಕೆ ಮಾಡಲು ಗ್ರಾಹಕರಿಗೆ ಟೆಕ್ನೋ ಸಾಫ್ಟ್‌ವೇರ್ ಸಹಕಾರಿಯಾಗಲಿದೆ, ವೃತ್ತಿಪರ ಛಾಯಾಗ್ರಾಹಕರು ಇದರ ಬಳಕೆ ಮಾಡಬೇಕು’ ಎಂದು ತುಂಗಭದ್ರಾ ಫೋಟೋ ಮತ್ತು ವಿಡಿಯೋಗ್ರಾಫರ್ಸ್ ಅಸೋಸಿಯೇಶನ್ ಅಧ್ಯಕ್ಷ ಸಿ.ಎಂ.ಸೋಮಶೇಖರ್ ಸಲಹೆ ನೀಡಿದರು.

ನಗರದ ನಿಶಾನಿ ಕ್ಯಾಂಪ್‌ನಲ್ಲಿ ಸೋಮವಾರ ಆಯೋಜಿಸಿದ್ದ 182ನೇ ವಿಶ್ವ ಛಾಯಾಗ್ರಹಣ ದಿನಾಚರಣೆಯಲ್ಲಿ ಮಾತನಾಡಿದರು.

‘ಯಾವುದೇ ಶುಭ ಸಮಾರಂಭಗಳ ಫೋಟೋ ತೆಗೆದ ನಂತರ ಅವುಗಳ ಆಯ್ಕೆಯದ್ದೇ ಸಮಸ್ಯೆ ಉಂಟಾಗುತ್ತದೆ. ಟೆಕ್ನೋ ಸಾಫ್ಟ್‌ವೇರ್ ಮೂಲಕ ಎಲ್ಲಾ ಫೋಟೋಗಳನ್ನು ವೆಬ್ ಲಿಂಕ್ ಮೂಲಕ ಗ್ರಾಹಕರಿಗೆ ಕಳಿಸಬಹುದು. ಟೆಕ್ನೋ ಸಾಫ್ಟ್‌ವೇರ್ ಮೂಲಕ ಗ್ರಾಹಕರಿಗೆ ಫೋಟೋ ಆಯ್ಕೆಗೆ ಅವಕಾಶವಿದೆ. ಅವರು ಆಯ್ಕೆ ಮಾಡಿದ ಫೋಟೋಗಳನ್ನು ಯಾವುದೇ ಗೊಂದಲವಿಲ್ಲದೆ ಆಲ್ಬಂ ಮಾಡಬಹುದು’ ಎಂದರು.

ವೃತ್ತಿಪರ ಛಾಯಾಗ್ರಾಹಕರಿಗೆ ‘ಐದೃಷ್ಟಿ’ ಸಂಸ್ಥೆಯಿಂದ ನೇತ್ರ ತಪಾಸಣೆ ಮಾಡಲಾಯಿತು. ಛಾಯಾಗ್ರಾಹಕರಿಗೆ 'ಮದುವೆಯ ಮಧುರ ಕ್ಷಣಗಳು' ಎಂಬ ಸ್ಪರ್ಧೆ ಏರ್ಪಡಿಸಲಾಗಿತ್ತು. ಸಂಘದ ಪ್ರಧಾನ ಕಾರ್ಯದರ್ಶಿ ಸಂಜಯ್ ಕುಮಾರ್, ಖಜಾಂಚಿ ಸಂಜಯ್, ತಾಹೀರ್ ಹುಸೇನ್, ರಾಮಬಾಬು, ಲವ, ಮಂಜು, ಬಾಲಾಜಿ, ಉಮೇಶ್, ಗಣೇಶ್ ಪಾಟೀಲ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.