ಹೊಸಕೋಟೆ: ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕೂ ವಯಸ್ಸಿಗೂ ಸಂಬಂಧವಿಲ್ಲ ಎಂದು ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ಹೇಳಿದರು.

ಅವರು ನಗರದಲ್ಲಿ ಮತ ಯಾಚಿಸುತ್ತಿದ್ದಾಗ ಉಪ ಮುಖ್ಯಮಂತ್ರಿ ಕಾರಜೋಳ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ನನಗೆ ಬಿಜೆಪಿ ಬಿ ಫಾರಂ ಕೊಟ್ಟಿತ್ತು. ಈಗ ನಾನು ಒಂದುವರೆ ವರ್ಷ ದೊಡ್ಡವನಾಗಿದ್ದೇನೆ ಚುನಾವಣೆಗೂ ವಯಸ್ಸಿಗೂ ಸಂಬಂಧವಿಲ್ಲ ಎಂದು ತಿಳಿಸಿದರು.

‘ಜನರ ಭಾವನೆಗಳಿಗೆ ಬೆಲೆ ಕೊಟ್ಟು ಚುನಾವಣೆಗೆ ನಿಂತಿರುವೆ. ತಂದೆ ಬಚ್ಚೇಗೌಡರು ಚುನಾವಣಾ ಪ್ರಚಾರಕ್ಕೆ ಬಾರದಿರುವ ಬಗ್ಗೆ ನೋವಿದೆ. ಆದರೆ, ಅವರು ಬಿಜೆಪಿಯ ಸಂಸದರು. ಅವರು ಚುನಾವಣಾ ಪ್ರಚಾರಕ್ಕೆ ಬರುವ ವಿಚಾರ ಅವರಿಗೇ ಬಿಟ್ಟಿದ್ದು’ ಎಂದರು.

ನಗರದ ವಿಶ್ವೇಶ್ವರಯ್ಯ ಬಡಾವಣೆಯಲ್ಲಿ ಪತ್ನಿ ಪ್ರತಿಭಾ ಸೇರಿದಂತೆ ನೂರಾರು ಜನ ಮತದಾರರು ಅವರೊಂದಿಗೆ ಪ್ರಚಾರ ಕಾರ್ಯದಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.