ದೊಡ್ಡಬಳ್ಳಾಪುರ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಮಾ.6ರವರೆಗೆ ತಾಲ್ಲೂಕಿನಾದ್ಯಂತ ನಡೆಯಲಿರುವ 2024ನೇ ಸಾಲಿನ 5 ವರ್ಷ ಒಳಗಿನ ಮಕ್ಕಳಿಗೆ ಪಲ್ಸ್ ಪೋಲಿಯೊ ಲಸಿಕಾ ಹನಿ ಹಾಕುವ ಅಭಿಯಾನಕ್ಕೆ ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ನಗರಸಭೆ ಅಧ್ಯಕ್ಷೆ ಎಸ್.ಸುಧಾರಾಣಿ ಲಕ್ಷ್ಮೀನಾರಾಯಣ್ ಚಾಲನೆ ನೀಡಿದರು.

ಶಾಶ್ವತ ಅಂಗವೈಫಲ್ಯ ಉಂಟು ಮಾಡಲು ಕಾರಣವಾಗುವ ಪೋಲಿಯೊ ವೈರಸ್‍ನಿಂದ ಮುಕ್ತವಾಗಲು 5 ವರ್ಷ ಒಳಗಿನ ಮಕ್ಕಳಿಗೆ ಪಲ್ಸ್ ಪೋಲಿಯೊ ಲಸಿಕೆ ನೀಡಬೇಕಿದೆ. ಈಗಾಗಲೇ ದೇಶ ಪೋಲಿಯೊ ಮುಕ್ತ ಎಂದು ಘೋಷಿತವಾಗಿದೆ. ಯಾವುದೇ ಕಾರಣಕ್ಕೂ ಪೋಲಿಯೊ ಮತ್ತೆ ಮರುಕಳಿಸದಂತೆ ಎಚ್ಚರ ವಹಿಸುವ ನಿಟ್ಟಿನಲ್ಲಿ ಹಮ್ಮಿಕೊಂಡಿರುವ ಪಲ್ಸ್ ಪೋಲಿಯೊ ಲಸಿಕಾ ಅಭಿಯಾನಕ್ಕೆ ಎಲ್ಲರ ಸಹಕಾರ ಮುಖ್ಯ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಶಾರದಾ ಹೇಳಿದರು.

ತಾಲ್ಲೂಕಿನಲ್ಲಿ ವಲಸಿಗರು ಸೇರಿದಂತೆ 3,53,965 ಜನಸಂಖ್ಯೆ ಅಂದಾಜಿಸಲಾಗಿದೆ. ಇದರಲ್ಲಿ 27,983 ಮಕ್ಕಳಿಗೆ ಪೋಲಿಯೊ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ತಾಲ್ಲೂಕಿನಲ್ಲಿ 17 ಪ್ರಾಥಮಿಕ ಕೇಂದ್ರಗಳು ಸೇರಿ 154 ಬೂತ್‍ಗಳನ್ನು ಸ್ಥಾಪಿಸಲಾಗಿದೆ. 616 ಲಸಿಕಾ ಕಾರ್ಯಕರ್ತರು ಕಾರ್ಯನಿರ್ವಹಿಸಲಿದ್ದಾರೆ. 33 ಮಂದಿ ಮೇಲ್ವಿಚಾರಕರಿದ್ದಾರೆ. 81,871 ಕುಟುಂಬಗಳನ್ನು ಗುರುತಿಸಲಾಗಿದೆ ಎಂದು ತಿಳಿಸಿದರು.

ಭಾನುವಾರ ಲಸಿಕೆ ಹಾಕಿಸಿಕೊಳ್ಳದೇ ಇರುವ ಮಕ್ಕಳಿಗೆ ಮಾ.6ರವರೆಗೆ ಮನೆ ಮನೆಗೆ ತೆರಳಿ ಪೋಲಿಯೊ ಹಾಕಲಾಗುವುದು 5 ವರ್ಷ ಒಳಗಿನ ಯಾವುದೇ ಮಕ್ಕಳು ಲಸಿಕೆ ಹಾಕಿಸಿಕೊಳ್ಳದೇ ಇರಬಾರದು ಎಂದರು.

ಕಾರ್ಯಕ್ರಮದಲ್ಲಿ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ವಿ.ಎಸ್.ರವಿಕುಮಾರ್, ಸದಸ್ಯೆ ಸುಮಿತ್ರ,ಮುಖ್ಯ ವೈದ್ಯಾಕಾರಿ ಡಾ.ರಮೇಶ್ ಇದ್ದರು.

ತಾಲ್ಲೂಕಿನ ಘಾಟಿ ಸುಬ್ರಹ್ಮಣ್ಯಸ್ವಾಮಿ ದೇವಾಲಯಕ್ಕೆ ಪೋಷಕರೊಂದಿಗೆ ಬಂದಿದ್ದ ಐದು ವರ್ಷದ ಒಳಗಿನ ಮಕ್ಕಳಿಗೆ ಪೋಲಿಯೊ ಲಸಿಕಾ ಹನಿಯನ್ನು ಪ್ರದಾನ ಅರ್ಚಕ ನಾಗೇಂದ್ರಸ್ವಾಮಿ ಹಾಕಿದರು. ಈ ಸಂದರ್ಭದಲ್ಲಿ ದೇವಸ್ಥಾನದ ಕಾರ್ಯನಿರ್ವಹಣಾ ಅಧಿಕಾರಿ ಡಿ.ನಾಗರಾಜು, ಎಸ್.ಎಸ್.ಘಾಟಿ ಪ್ರಾಥಮಿಕ ಆರೋಗ್ಯ ಕೇಂದ್ರದ ಮಹದೇವನಾಯ್ಕ್, ಎಲ್.ನೇತ್ರಾವತಿ, ಎಂ.ಶ್ರಾವಣಿ, ಬಿ.ಸರಿತಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.