ದೇವನಹಳ್ಳಿ: ನಕಲಿ ಪಾಸ್ಪೋರ್ಟ್ ಹಾಗೂ ಪ್ರವಾಸಿ ವೀಸಾ ಬಳಕೆ ಮಾಡಿಕೊಂಡು ವಿದೇಶಕ್ಕೆ ಪ್ರಯಾಣಿಸಲು ಬಂದಿದ್ದ ಮೂವರು ಮಹಿಳೆಯರನ್ನು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಪೊಲೀಸರು ಈಚೆಗೆ ಬಂಧಿಸಿದ್ದಾರೆ.

ಒಮೆನ್ ದೇಶದ ಮಸ್ಕತ್ಗೆ ಕೆಲಸಕ್ಕಾಗಿ ವಲಸೆ ಹೋಗಲು ಬಂದಿದ್ದ ಆಂಧ್ರ ಪ್ರದೇಶದ ನಾಗಲಕ್ಷ್ಮಿ ಚೀರಾ (30), ಗೊಂಡಿ ಲಕ್ಷ್ಮಿದೇವಿ (42), ಲಕ್ಷ್ಮಿ ಪಶುಪುಲೇಟಿ (39) ಬಂಧಿತರು.

ನ.19ರಂದು ಆರೋಪಿಗಳು ಇಮಿಗ್ರೇಷನ್ನಲ್ಲಿ ತಮ್ಮ ದಾಖಲೆ ಹಾಜರುಪಡಿಸಿದಾಗ ಪಾಸ್ ಪೋರ್ಟ್ನಲ್ಲಿದ್ದ ಕೆಲವು ಪುಟಗಳು ಅದಲು ಬದಲು ಆಗಿವೆ. ಈ ಹಿಂದೆ ಹಾಕಲಾಗಿದ್ದ ವೀಸಾ ಮೇಲಿನ ಸೀಲ್ ಅಳಿಸಿರುವುದು ಕಂಡು ಬಂದಿದೆ. ಇದರಿಂದ ಅನುಮಾನಗೊಂಡ ಇಮಿಗ್ರೇಷನ್ ಅಧಿಕಾರಿಗಳು, ಪರಿಶೀಲನೆ ನಡೆಸಿದಾಗ ನಕಲಿ ಎಂದು ಗೊತ್ತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.