ವಿಜಯಪುರ: ರಾಜ್ಯದಲ್ಲಿ ಆ.1ರಿಂದ ನಂದಿನಿ ಹಾಲಿನ ದರ ಲೀಟರ್ ಒಂದು ರೂಪಾಯಿ ಏರಿಕೆ ಮಾಡಿದ್ದು, ಏರಿಕೆ ಮಾಡಿರುವ ಹಣ ನೇರವಾಗಿ ಹಾಲು ಉತ್ಪಾದಕರಿಗೆ ವರ್ಗಾಯಿಸಿರುವುದು ಹಾಲು ಉತ್ಪಾದಕರಲ್ಲಿ ಸಂತಸ ಉಂಟು ಮಾಡಿದೆ.

ರೈತ ವೆಂಕಟರಮಣಪ್ಪ ಮಾತನಾಡಿ, ಸರ್ಕಾರ ನಂದಿನಿ ಹಾಲಿನ ಬೆಲೆ ಲೀಟರ್ಗೆ ₹3 ಏರಿಕೆ ಮಾಡಿದ್ದು, ಹೆಚ್ಚಳ ಮಾಡಿರುವ ಹಣವನ್ನು ರೈತರಿಗೆ ವರ್ಗಾವಣೆ ಮಾಡುತ್ತಿರುವುದರಿಂದ ರೈತರಿಗೆ ಆಗುತ್ತಿದ್ದ ನಷ್ಟ ಸರಿದೂಗಿಸಿಕೊಳ್ಳಲು ಅನುಕೂಲವಾಗಲಿದೆ. ₹30 ಇದ್ದ ಹಾಲಿನ ದರ ಈಗ ಲೀಟರ್ಗೆ ₹33 ಆಗಿದೆ. ಕೊಬ್ಬಿನಾಂಶ ಹೆಚ್ಚಾದಂತೆ ಬೆಲೆಯೂ ಜಾಸ್ತಿಯಾಗಲಿದೆ ಎಂದರು.

ಹಾಲು ಉತ್ಪಾದಕ ಮುನಿಬೈರಪ್ಪ ಮಾತನಾಡಿ, ಸರ್ಕಾರ ರೈತರಿಗೆ ನೀಡುತ್ತಿರುವ ಹಾಲಿನ ದರ ಕೊಬ್ಬಿನಾಂಶ ಮೇಲೆ ಹೆಚ್ಚಳ ಮಾಡಿದೆ. ಕೊಬ್ಬಿನಾಂಶ 4.10ರಷ್ಟು ಹೆಚ್ಚಳವಾದರೆ ಒಂದು ಲೀಟರ್ ಹಾಲಿಗೆ ₹34.38 ಆಗಲಿದೆ ಸರ್ಕಾರದ ನಿರ್ಧಾರ ರೈತ ವರ್ಗಕ್ಕೆ ಸಮಾಧಾನ ತಂದಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.