ದೇವನಹಳ್ಳಿ: ತಾಲ್ಲೂಕಿನಾದ್ಯಂತ ಮಂಗಳವಾರ ಸುರಿದ ಬಿರುಗಾಳಿ ಸಹಿತ ಮಳೆಗೆ ಜನರು ತತ್ತರಿಸಿದ್ದು, ಪಟ್ಟಣದಲ್ಲಿ ಸಂಚಾರ ಅಸ್ತವ್ಯಸ್ತವಾಗಿದೆ. ಸರ್ವಿಸ್ ರಸ್ತೆಗಳು, ಹೊಸಕೋಟೆಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯ ಗುಂಡಿಗಳಲ್ಲಿ ನೀರು ನಿಂತ ಕಾರಣ ವಾಹನ ಸವಾರರು ಪರದಾಡಿದರು.

ರಸ್ತೆಯಲ್ಲಿ ನೀರು ನಿಂತ ಪರಿಣಾಮದಿಂದಾಗಿ ಕಾರು, ಲಾರಿಗಳು ಸಾಗಿದಾಗ ದ್ವಿಚಕ್ರ ವಾಹನಗಳ ಮೇಲೆ ಮಳೆ ನೀರು ಸಿಡಿಯುತ್ತಿದ್ದ ದೃಶ್ಯವೂ ಸಾಮಾನ್ಯವಾಗಿತ್ತು. ತಗ್ಗು ಪ್ರದೇಶಗಳಿಗೆ ಮಳೆ ನೀರು ನುಗ್ಗಿದ್ದು ಜನ ಜೀವನಕ್ಕೆ ತೊಂದರೆಯುಂಟಾಯಿತು.

ಹಲವೆಡೆ ವಿದ್ಯುತ್ ಕಂಬುಗಳಿಗೆ ಹಾನಿಯಾದ ಹಿನ್ನೆಲೆಯಲ್ಲಿ ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯವಾಗಿದ್ದು, ತೋಟಗಳಲ್ಲಿ ಫಸಲಿಗೆ ಬಂದಿದ್ದ ಹೂ ಮಳೆ ನೀರು ಪಾಲಾಗಿದೆ.

ದಿಢೀರ್ ಮಳೆಯಿಂದಾಗಿ ಜನರು ದಿಕ್ಕಾಪಾಲಾಗಿ ಓಡಿ ಮಳೆಯಿಂದ ಆಶ್ರಯ ಪಡೆಯಲು ಹರಸಾಹಸ ಪಟ್ಟಿದ್ದಾರೆ. ತೀವ್ರ ತಾಪಮಾನ ಏರಿಕೆಯಿಂದಾಗಿ ಬೇಸತ್ತಿದ್ದ ಜನರಿಗೆ ಮಳೆಯಿಂದ ಅಲ್ಪ ತಣ್ಣನೆಯ ಅನುಭವವಾಗಿದ್ದು, ಸಂತೃಪ್ತಿ ಭಾವ ಮೂಡಿದೆ. ಸಿಡಿಲಿನ ಅಬ್ಬರದೊಂದಿಗೆ ಸುರಿದ ಮಳೆಯಿಂದಾಗಿ ರಾಜಕಾಲುವೆಗಳಲ್ಲಿದ್ದ ಕಳೆಗಳು ನೀರಿನ ರಭಸಕ್ಕೆ ಕೊಚ್ಚಿಹೊಗಿದೆ.

ಮುಂಗಾರು ಆರಂಭಕ್ಕೂ ಮುನ್ನವೇ ಸ್ಥಳೀಯ ಪುರಸಭೆ, ಗ್ರಾಮ ಪಂಚಾಯಿತಿಗಳು ಮಳೆ ನೀರು ಸರಗವಾಗಿ ಹೋಗಲು ಅಗತ್ಯ ಕ್ರಮ ಕೈಗೊಳ್ಳುವ ಅಗತ್ಯತೆ ಇದ್ದು, ಸ್ಥಳೀಯರು ರಸ್ತೆಯಲ್ಲಿರುವ ಗುಂಡಿಗಳನ್ನು ಮುಚ್ಚಿ, ಅಪಘಾತಗಳಿಂದ ಕಾಪಾಡುವಂತೆ ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.