ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೈಗಾರಿಕೆ ತರಬೇತಿ ಪಡೆದರೆ ಉದ್ಯೋಗವಕಾಶ ವೈಜಗೊಂಡ

ತರಬೇತಿ
Published 26 ಜುಲೈ 2024, 14:01 IST
Last Updated 26 ಜುಲೈ 2024, 14:01 IST
ಅಕ್ಷರ ಗಾತ್ರ

ದೇವನಹಳ್ಳಿ: ದೇವನಹಳ್ಳಿಯಲ್ಲಿ ಸಾಕಷ್ಟು ಕೈಗಾರಿಕೆಗಳು ಸ್ಥಾಪನೆಯಾಗುತ್ತಿವೆ. ಇಲ್ಲಿ ಸೃಷ್ಟಿಯಾಗುವ ಉದ್ಯೋಗವಕಾಶ ಸದುಪಯೋಗಪಡಿಸಿಕೊಳ್ಳಬೇಕೆಂದು ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ಜಂಟಿ ನಿರ್ದೇಶಕ ವೈಜಗೊಂಡ ತಿಳಿಸಿದರು.

ಇಲ್ಲಿನ ಬನಶಂಕರಿ ಐಟಿ ತರಬೇತಿ ಸಂಸ್ಥೆ ವಾರ್ಷಿಕ ಪದವಿ ಪ್ರಧಾನ ಸಮಾರಂಭ ಶುಕ್ರವಾರ ಉದ್ಘಾಟಿಸಿ  ಮಾತನಾಡಿದರು.

ವಿನೂತನ ಶೈಕ್ಷಣಿಕ ಬೋಧನೆಯಿಂದಾಗಿ ಕಳೆದ 3 ವರ್ಷಗಳಲ್ಲಿ ಸಾಕಷ್ಟು ವಿದ್ಯಾರ್ಥಿಗಳು ಐಟಿಐ ಪದವಿಗೆ ದಾಖಲಾಗುತ್ತಿದ್ದಾರೆ. ಮಕ್ಕಳ ಶೈಕ್ಷಣಿಕ ಪ್ರಗತಿ ಕುರಿತು ಪೋಷಕರು ಮನೆಯಿಂದಲೇ ತಿಳಿದುಕೊಳ್ಳುವಂತೆ ವೆಬ್‌ಸೈಟ್‌ ಪ್ರಾರಂಭಿಸಿರುವುದು ಶ್ಲಾಘನೀಯ ಎಂದರು.

ಹಳೆ ವಸ್ತುಗಳನ್ನು ಬಳಸಿ ನಾಲ್ಕು ಗಂಟೆ ಚಾರ್ಜ್‌ ಮಾಡಿದರೆ 92ಕಿ.ಮೀ ನೀಡುವ ಎಲೆಕ್ಟ್ರಿಕ್‌ ಬೈಕ್‌ ಕಾಲೇಜಿನ ವಿದ್ಯಾರ್ಥಿಗಳಾದ ದಯಾನಂದ್‌ ಹಾಗೂ ತಂಡ ಸಿದ್ಧಪಡಿಸಿದ್ದಾರೆ. ವಿದ್ಯಾರ್ಥಿಗಳಲ್ಲಿರುವ ಕೌಶಲ ಪರಿಚಯಿಸುತ್ತದೆ ಎಂದು ಅಭಿನಂದಿಸಿದರು.

ಸರ್ಕಾರಿ ಐಟಿಐ ಕಾಲೇಜಿನ ಪ್ರಾಂಶುಪಾಲ ಪ್ರಕಾಶ್‌ ನಾಗರಾಜ್‌ ಮಾತನಾಡಿ, ಕೌಶಲ ಆಧಾರಿತ ಶಿಕ್ಷಣಕ್ಕೆ ವಿಶ್ವದ ಎಲ್ಲೆಡೆ ಬೇಡಿಕೆ ಇದೆ. ತಾಂತ್ರಿಕವಾಗಿ ಮಕ್ಕಳ ಮೇಧಾವಿತನ ಹೆಚ್ಚು ಮಾಡುವ ಕೆಲಸವನ್ನು ಕೈಗಾರಿಕಾ ತರಬೇತಿ ಸಂಸ್ಥೆಗಳು ಮಾಡುತ್ತಿವೆ ಎಂದು ತಿಳಿಸಿದರು.

ಕಾಲೇಜಿನ ಸಂಸ್ಥಾಪಕ ಕಾರ್ಯದರ್ಶಿ ವೆಂಕಟೇಶ್‌.ಡಿ, ಅಧ್ಯಕ್ಷೆ ಭಾಗ್ಯ ಲೋಕೇಶ್, ವಾಲ್‌ ಡೆಲ್‌ ಅಡ್ವಾನ್ಸ್‌ಡ್‌ ಟೆಕ್ನಾಲಜಿ ವ್ಯವಸ್ಥಾಪಕಿ ರಾಜೇಶ್ವರಿ, ಎಸಿ ಮೈಕ್ರೋಮ್ಯಾಟಿಕ್ಸ್ ವ್ಯವಸ್ಥಾಪಕ ಮಂಜುನಾಥ್, ಪ್ರಾಂಶುಪಾಲರಾದ ಶಿವರಾಮ್‌.ಕೆ.ಎಲ್‌, ವಿದ್ಯಾರ್ಥಿಗಳು, ಪೋಷಕರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT