ಹೊಸಕೋಟೆ (ಬೆಂಗಳೂರು ಗ್ರಾ.): ಹೊಸಕೋಟೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸೋಮವಾರ ನಾಮಪತ್ರ ಸಲ್ಲಿಸಿದ ಪೌರಾಡಳಿತ ಸಚಿವ ಎಂ.ಟಿ.ಬಿ ನಾಗರಾಜ್ ಅವರು ₹1,510 ಕೋಟಿ ಒಡೆಯನೆಂದು ಘೋಷಿಸಿಕೊಂಡಿದ್ದಾರೆ. ರಾಜ್ಯದ ಅತೀ ಶ್ರೀಮಂತ ಅಭ್ಯರ್ಥಿಗಳ ಪೈಕಿ ನಾಗರಾಜ್ ಒಬ್ಬರಾಗಿದ್ದಾರೆ.

2019ರಲ್ಲಿ ನಡೆದ ಉಪ ಚುನಾವಣೆ ಸಮಯದಲ್ಲಿ ಅವರು ₹1,015 ಕೋಟಿ ಒಡೆಯನೆಂದು ಘೋಷಿಸಿಕೊಂಡಿದ್ದರು. ನಾಲ್ಕು ವರ್ಷದಲ್ಲಿ ಅವರ ಭಂಡಾರ ₹495 ಕೋಟಿ ಏರಿಕೆ ಕಂಡಿದೆ.

ನಾಗರಾಜ್ ₹71 ಕೋಟಿ ಸಾಲ ಮಾಡಿದ್ದರೆ, ಅವರ ಪತ್ನಿ ಶಾಂತಕುಮಾರಿ ₹27 ಕೋಟಿ ಸಾಲ ಮಾಡಿದ್ದಾರೆ. ಒಟ್ಟು ವಿವಿಧ ಬ್ಯಾಂಕ್ಗಳಲ್ಲಿ ₹98 ಕೋಟಿ ಸಾಲ ಹೊಂದಿದ್ದಾರೆ.

9ನೇ ತರಗತಿ ಪಾಸಾಗಿರುವ ಎಂ.ಟಿ.ಬಿ ಬಳಿ ಇರುವ ಕಾರುಗಳ ಮೌಲ್ಯವೇ ₹1.72 ಕೋಟಿ. ಅವರ ಹೆಸರಿನಲ್ಲಿ ಐ10, ಲ್ಯಾಂಡ್ ರೋವರ್ ಡಿವೆಂಡರ್, ಬೊಲೆರೊ ವಾಹನಗಳಿವೆ. ಅವರ ಪತ್ನಿ ಹೆಸರಲ್ಲಿ ಪೋರ್ಶ್ ಮತ್ತು ಇನೋವಾ ಕ್ರಿಸ್ಟಾ ಕಾರುಗಳಿದ್ದು ಎರಡು ಕಾರುಗಳ ಮೌಲ್ಯ ₹1.33 ಕೋಟಿಯಾಗಿದೆ. ಎಂಟಿಬಿ ಬಳಿ ₹ 64 ಲಕ್ಷ ಮತ್ತು ಪತ್ನಿ ಬಳಿ ₹ 34 ಲಕ್ಷ ನಗದು ಇದೆ.

2019 ಉಪ ಚುನಾವಣೆಯಲ್ಲಿ ಒಟ್ಟು ₹419.28 ಕೋಟಿ ಮೌಲ್ಯದ ಚರಾಸ್ತಿ ಹೊಂದಿದ್ದು, ಈಗ ₹372 ಕೋಟಿಗೆ ಇಳಿದಿದೆ. ₹417.11 ಕೋಟಿ ಮೌಲ್ಯದ ಸ್ಥಿರಾಸ್ತಿ ಇದೀಗ ₹792 ಕೋಟಿಗೆ ಏರಿಕೆ ಆಗಿದೆ.

ನಾಲ್ಕು ವರ್ಷದ ಹಿಂದೆ ಇವರ ಪತ್ನಿ ಶಾಂತಕುಮಾರಿ ಅವರ ₹167.34 ಕೋಟಿ ಮೌಲ್ಯದ ಚಿರಾಸ್ತಿ ಈಗ ₹163 ಕೋಟಿಗೆ ಇಳಿದಿದೆ. ₹167.34 ಕೋಟಿಯಷ್ಟು ಇದ್ದ ಸ್ಥಿರಾಸ್ತಿ ₹274 ಕೋಟಿಗೆ ಏರಿಕೆಯಾಗಿದೆ.

ಅಪಾರ ಚಿನ್ನಾಭರಣ: ₹ 38 ಲಕ್ಷ ಮೌಲ್ಯದ ಚಿನ್ನ, ₹ 98 ಲಕ್ಷ ಮೌಲ್ಯದ ವಜ್ರ, ₹ 1.1 ಕೋಟಿ ಮೌಲ್ಯದ 214 ಕೆ.ಜಿ ಬೆಳ್ಳಿ ಸೇರಿದಂತೆ ಒಟ್ಟು ₹ 2.41 ಕೋಟಿ ಮೌಲ್ಯದ ಆಭರಣಗಳನ್ನು ಎಂಟಿಬಿ ಹೊಂದಿದ್ದಾರೆ. ಅವರ ಪತ್ನಿ ಬಳಿ 2 ಕೆ.ಜಿ ಚಿನ್ನ, ₹63 ಲಕ್ಷ ಮೌಲ್ಯದ ವಜ್ರ, 26 ಕೆ.ಜಿ ಬೆಳ್ಳಿ ಸೇರಿದಂತೆ ಒಟ್ಟು ₹ 1.64 ಕೋಟಿ ಮೌಲ್ಯದ ಆಭರಣಗಳಿವೆ.

ಕಾಂಗ್ರೆಸ್ ಅಭ್ಯರ್ಥಿ ಶರತ್ ಕೂಡ ಕೋಟ್ಯಧೀಶ: ಹೊಸಕೋಟೆ ಶಾಸಕ, ಕಾಂಗ್ರೆಸ್ ಅಭ್ಯರ್ಥಿ ಶರತ್ ಬಚ್ಚೇಗೌಡ ₹104.74 ಕೋಟಿ ಆಸ್ತಿ ಘೋಷಣೆ ಮಾಡಿಕೊಂಡಿದ್ದಾರೆ. ಕಳೆದ ಉಪ ಚುನಾವಣೆಯಲ್ಲಿ ಅವರ ಒಟ್ಟು ಆಸ್ತಿ ₹135.65 ಕೋಟಿಯಷ್ಟಿತ್ತು. ನಾಲ್ಕು ವರ್ಷಗಳಲ್ಲಿ ಆಸ್ತಿ ಮೌಲ್ಯ ₹31 ಕೋಟಿಯಷ್ಟು ಕುಸಿದಿದೆ. ಶರತ್ ₹1.44 ಕೋಟಿ ಸಾಲ ಮಾಡಿದ್ದರೆ, ಅವರ ಪತ್ನಿ ₹ 6.31 ಲಕ್ಷ ಸಾಲ ಮರು ಪಾವತಿ ಮಾಡಬೇಕಿದೆ.

2019ರ ಉಪಚುನಾವಣೆಯಲ್ಲಿ ₹23.88 ಕೋಟಿ ಇದ್ದ ಅವರ ಚರಾಸ್ತಿ ಈಗ ₹31.49 ಕೋಟಿಗೆ ಏರಿಕೆಯಾಗಿದೆ. ಅವರ ಪತ್ನಿ ಪ್ರತಿಭಾ ಅವರ ಚರಾಸ್ತಿ ₹14.27 ಕೋಟಿಯಿಂದ ₹13.25 ಕೋಟಿಗೆ ಇಳಿಕೆಯಾಗಿದೆ. ₹98.50 ಕೋಟಿ ಇದ್ದ ಸ್ಥಿರಾಸ್ತಿ ₹60 ಕೋಟಿಗೆ ಇಳಿಕೆಯಾಗಿದೆ.

ಐಷಾರಾಮಿ ಕಾರುಗಳು: ಶರತ್ ಹೆಸರಲ್ಲಿ ₹ 52 ಲಕ್ಷ ಮೌಲ್ಯದ ಫಾರ್ಚೂನರ್, ಇನೋವಾ ಕ್ರಿಸ್ಟಾ ಕಾರುಗಳಿವೆ. ಪತ್ನಿ ಪ್ರತಿಭಾ ₹ 52 ಲಕ್ಷದ ಮರ್ಸಿಡೀಸ್ ಬೆಂಜ್ ಕಾರು ಹೊಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.