ಹೊಸಕೋಟೆ: ತಾಲ್ಲೂಕಿನ ಶ್ರೀಮಂತ ಗ್ರಾಮ ಪಂಚಾಯಿತಿಗಳಲ್ಲಿ ಒಂದೆನಿಸಿಕೊಂಡಿರುವ ಚೊಕ್ಕಹಳ್ಳಿ ಪಂಚಾಯಿತಿ ವ್ಯಾಪ್ತಿ ಹಾಗೂ ಪ್ರಮುಖ ಕೈಗಾರಿಕಾ ಪ್ರದೇಶಗಳಲ್ಲಿ ಒಂದಾದ ಪಿಲ್ಲಗುಂಪೆಯಲ್ಲಿ ಸ್ವಚ್ಛತೆ ಮರಿಚೀಕೆಯಾಗಿದ್ದು, ಮೂಲ ಸೌಕರ್ಯಗಳಿಲ್ಲದೆ ಜನ ಪರದಾಡುವಂತಾಗಿದೆ.

ಚೊಕ್ಕಹಳ್ಳಿ ಗ್ರಾಮ ಪಂಚಾಯಿತಿ ಕೇಂದ್ರ ಮತ್ತು ಅದಕ್ಕೆ ಹೊಂದಿಕೊಂಡಿರುವ ಪಿಲ್ಲಗುಂಪೆ ಗ್ರಾಮಗಳಲ್ಲಿ ಸಾವಿರಾರು ಮಂದಿ ಬಾಡಿಗೆ ಮನೆಗಳಲ್ಲಿ ವಾಸ ಮಾಡುತ್ತಿದ್ದಾರೆ. ಆದ್ದರಿಂದ ದಿನೇದಿನೇ ಜನನಿಬಿಡ ಪ್ರದೇಶವಾಗಿ ಚೊಕ್ಕಹಳ್ಳಿ ಮತ್ತು ಪಿಲ್ಲಗುಂಪೆಗಳು ಮಾರ್ಪಡುತ್ತಿವೆ. ಕಸ ಸಂಗ್ರಹ ಸರಿಯಾಗ ಆಗದ ಕಾರಣ ಎಲ್ಲೆಂದರಲ್ಲಿ ಕಸ ಬೀಸಾಡಲಾಗುತ್ತಿದ್ದು, ಎಲ್ಲೆಡೆ ತ್ಯಾಜ್ಯದ ರಾಶಿಗಳು ಕಣ್ಣಿಗೆ ರಾಚುತ್ತವೆ. ಈ ರಾಶಿಯೂ ಸರಿಯಾದ ಸಮಯಕ್ಕೆ ವಿಲೇವಾರಿಯಾಗದೆ ಅಶುಚಿತ್ವ ತಾಂಡವವಾಡುತ್ತಿದೆ.

ಚರಂಡಿಗಳಲ್ಲಿ ಮಡುಗಟ್ಟಿದ ಕೊಳಚೆ ನೀರು, ಹದಗೆಟ್ಟ ರಸ್ತೆ... ಇವೆಲ್ಲವೂ ಗ್ರಾಮ ಪಂಚಾಯಿತಿ ಕೇಂದ್ರದಲ್ಲಿ ಕಾಣಸಿಗುವ ಸಮಸ್ಯೆಯಾಗಿವೆ.

ಗ್ರಾಮಕ್ಕೆ ನೀರು ಸರಬರಾಜು ಮಾಡಲು ಪೈಪ್ಗಳನ್ನು ಚರಂಡಿಯಲ್ಲಿ ಅಳವಡಿಸಿದ್ದಾರೆ. ಪೈಪ್ ಒಡೆದು ಕೊಳಚೆ, ನೀರಿಗೆ ಸೇರಿದರೆ ಏನು ಗತಿ ಎಂದು ಸಾರ್ವಜನಿಕರು ಕಳವಳ ವ್ಯಕ್ತಪಡಿಸಿದ್ದಾರೆ.

ಅವೈಜ್ಞಾನಿಕ ಕಾಮಗಾರಿ: ಗ್ರಾಮದಲ್ಲಿ ನಡೆಸುತ್ತಿರುವ ಜಲಜೀವನ್ ಮಿಷನ್ ಕಾಮಗಾರಿ ಸಂಪೂರ್ಣವಾಗಿ ಅವೈಜ್ಞಾನಿಕವಾಗಿದ್ದು, ಹಲವು ದಿನಗಳಿಂದ ನನೆಗುದಿಗೆ ಬಿದ್ದಿದೆ. ಮುಂದಾಲೋಚನೆ ಇಲ್ಲದೆ ಎಲ್ಲೆಂದರಲ್ಲಿ ನಲ್ಲಿಯ ಪಾಯಿಂಟ್ ಅಳವಡಿಸಿದ್ದು, ಗುಣಮಟ್ಟ ಕಾಯ್ದುಕೊಂಡಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.

Cut-off box - ತಂಗುದಾಣ ನಿರ್ಮಿಸಿ ಪಿಲ್ಲಗುಂಪೆ ಕೈಗಾರಿಕಾ ಪ್ರದೇಶದ ಬಸ್ ತಂಗುದಾಣ ಇಲ್ಲದಿರುವುದು ದುರಂತ. ಪ್ರತಿನಿತ್ಯ ಸಾವಿರಾರು ಕಾರ್ಮಿಕರು ಸ್ಥಳೀಯ ಜನರು ಸ್ಥಳೀಯ ಬಸ್ ನಿಲ್ದಾಣದ ಮೂಲಕ ಸಂಚಾರಿಸುತ್ತಾರೆ. ತಂಗುದಾಣವಿಲ್ಲದಿರುವುದು ಪ್ರಯಾಣಿಕರಿಗೆ ತೀವ್ರ ತೊಂದರೆ ಉಂಟು ಮಾಡಿದೆ. ಹಲವು ಬಾರಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜವಾಗಿಲ್ಲ. ಡಿ.ಶ್ರೀನಿವಾಸ್ ವಕೀಲರು ದೊಡ್ಡನಲ್ಲೂರಹಳ್ಳಿ. ಪೌರಕಾರ್ಮಿಕರ ಕೊರತೆ ಚೊಕ್ಕಹಳ್ಳಿ ಗ್ರಾಮ ಪಂಚಾಯಿತಿ ಕೇಂದ್ರದಲ್ಲಿ ಸ್ವಚ್ಚತೆಗೆ ಪೌರಕಾರ್ಮಿಕರ ಕೊರತೆ ಇದೆ. ಮುಂದಿನ ದಿನಗಳಲ್ಲಿ ಗ್ರಾ.ಪಂ ವ್ಯಾಪ್ತಿಯ ಸ್ವಚ್ಛತೆಗೆ ಬೇಕಾದ ಕಾರ್ಮಿಕರನ್ನು ನೇಮಿಸಿಕೊಳ್ಳಲಾಗುವುದು. ಈ ಕುರಿತು ಗ್ರಾ.ಪಂ ಸಭೆಯಲ್ಲಿ ಪ್ರಸ್ತಾಪ ಮಾಡಿದ್ದು ಆದಷ್ಟು ಬೇಗ ಅದಕ್ಕೆ ಅನುಮತಿ ಸಿಗಲಿದೆ. ಶೀಘ್ರ ಕಸದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು. ಮಹೇಶ್ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚೊಕ್ಕಹಳ್ಳಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.