ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಸರ್ವರ್ ಸಮಸ್ಯೆ: ಪ್ರಯಾಣಿಕರ ಪರದಾಟ

Published : 6 ಅಕ್ಟೋಬರ್ 2024, 16:24 IST
Last Updated : 6 ಅಕ್ಟೋಬರ್ 2024, 16:24 IST
ಫಾಲೋ ಮಾಡಿ
Comments

ದೇವನಹಳ್ಳಿ: ಇಲ್ಲಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್‌ –1ರಲ್ಲಿ ಶನಿವಾರ ಮಧ್ಯಾಹ್ನ ಇಂಡಿಗೋ ಏರ್‌ಲೈನ್ಸ್‌ ಸಂಸ್ಥೆಯ ಸರ್ವರ್‌ ಸಮಸ್ಯೆಯಿಂದಾಗಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಪ್ರಯಾಣಿಕರು ಪರದಾಡಿದರು.

ದೇವನಹಳ್ಳಿ ವಿಮಾನ ನಿಲ್ದಾಣದಿಂದ ದೇಶದ ವಿವಿಧ ಭಾಗಗಳಿಗೆ ತೆರಳಲು ಆಗಮಿಸಿದ್ದ ಪ್ರಯಾಣಿಕರು ಬೋರ್ಡಿಂಗ್‌ ಪಾಸ್‌ ಪಡೆಯಲು ತಾಂತ್ರಿಕ ಸಮಸ್ಯೆ ಉಂಟಾಗಿದ್ದ ಪರಿಣಾಮ ಚೆಕ್‌ ಇನ್‌ ಆಗಲು ಆಗದೇ ಗಂಟೆಗಟ್ಟಲೇ ಸರತಿ ಸಾಲಿನಲ್ಲಿ ನಿಲ್ಲುವಂತಾಗಿತ್ತು.

ತಾಂತ್ರಿಕ ಸಮಸ್ಯೆಯಿಂದಾಗಿ ಕೆಲ ವಿಮಾನಗಳ ಹಾರಾಟದ ಸಮಯವನ್ನು ಬದಲಾಯಿಸಿದ್ದ ಏರ್‌ಲೈನ್ಸ್‌ ಸಿಬ್ಬಂದಿ, ಇಲ್ಲಿಗೆ ಆಗಮಿಸಿದ್ದ ಪ್ರಯಾಣಿಕರು ವಿಮಾನ ನಿಲ್ದಾಣದಿಂದ ಹೊರ ಹೋಗಲು ಸಹ ಚೆಕ್‌ ಔಟ್‌ ಆಗಲು ಸಾಧ್ಯವಾಗದೇ ಸಂಕಷ್ಟ ಎದುರಿಸಿದರು.

ಇಂಡಿಗೋ ವಿಮಾನ ನಿಲ್ದಾಣದ ಕೌಂಟರ್‌ಗಳಲ್ಲಿ ಚೆಕ್‌ ಇನ್‌ ಹಾಗೂ ಚೆಕ್‌ಔಟ್‌ ಆಗಲು ಪ್ರಯಾಣಿಕರ ಸರತಿ ಸಾಲಿನಲ್ಲಿ ತಮ್ಮ ಲಗೇಜ್‌ನೊಂದಿಗೆ ಬಿಡು ಬಿಟ್ಟಿದ್ದರು. ಬೆಳಿಗ್ಗೆ 11 ಗಂಟೆಯಿಂದ ಪ್ರಾರಂಭವಾದ ಈ ಸಮಸ್ಯೆಯೂ ಮಧ್ಯಾಹ್ನದವರೆಗೂ ಮುಂದುವರೆದಿತ್ತು. ನಾಲ್ಕೈದು ಗಂಟೆ ಬಳಿಕ ಸಮಸ್ಯೆ ಬಗೆಹರಿಯಿತು.

ನೂರಾರು ಜನ ಪ್ರಯಾಣಿಕರು ಸರಿಯಾದ ಸಮಯಕ್ಕೆ ವಿಮಾನಯಾನ ಮಾಡಲು ಸಾಧ್ಯವಾಗದ ಕಾರಣ ರನ್‌ ವೇಯಲ್ಲಿಯೇ ಕೆಲವೊತ್ತು ಇಂಡಿಗೋ ವಿಮಾನಗಳು ನಿಲುಗಡೆಯಾಗಿದ್ದ ದೃಶ್ಯಗಳು ಕಂಡು ಬಂತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT