ವಿಜಯಪುರ (ಬೆಂ.ಗ್ರಾಮಾಂತರ):ಪಟ್ಟಣದಿಂದ ಚಿಕ್ಕಬಳ್ಳಾಪುರದ ಕಡೆಗೆ ಸಂಚರಿಸುವ ಮುಖ್ಯರಸ್ತೆಯಲ್ಲಿರುವ ಕೆರೆ ಏರಿಯ ಮೇಲಿನ ತಿರುವಿನಲ್ಲಿ ಸರಕು ಸಾಗಾಣಿಕೆ ಲಾರಿಯೊಂದು ಸೋಮವಾರ ರಾತ್ರಿ ಆಯತಪ್ಪಿ ಕೆರೆಗೆ ಉರುಳಿ ಬಿದ್ದಿದೆ. ಅದೃಷ್ಟವಶಾತ್ ಲಾರಿ ಚಾಲಕ ಮತ್ತೊಂದು ಬದಿಯ ಬಾಗಿಲಿನಿಂದ ಹೊರಗೆ ಬಂದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ವಿಜಯಪುರದ ಕಡೆಯಿಂದ ಚಿಕ್ಕಬಳ್ಳಾಪುರದ ಕಡೆಗೆ ಹೊರಟಿದ್ದ ಲಾರಿಯು ತಿರುವಿನಲ್ಲಿ ಎಡಭಾಗಕ್ಕೆ ಬಂದಿರುವ ಕಾರಣ ಕೆರೆಗೆ ಉರುಳಿ ಬಿದ್ದಿದೆ. ತಡೆಗೋಡೆ ಇದ್ದಿದ್ದರೆ ಲಾರಿ ಉರುಳಿ ಬೀಳುತ್ತಿರಲಿಲ್ಲ. ಚಿಕ್ಕಬಳ್ಳಾಪುರದ ಕಡೆಗೆ ಸಂಚರಿಸುವ ಮುಖ್ಯರಸ್ತೆ ಇದಾಗಿದೆ. ಬಹುತೇಕ ಸರಕು ಸಾಗಾಣಿಕೆ ವಾಹನಗಳು ಇದೇ ರಸ್ತೆಯಲ್ಲಿಯೇ ಸಂಚರಿಸುತ್ತವೆ. ಈ ರಸ್ತೆ ಅಭಿವೃದ್ಧಿ ಕಡೆಗೆ ಕಿಂಚಿತ್ತೂ ಗಮನಹರಿಸುತ್ತಿಲ್ಲ ಎಂಬುದು ಜನರ ದೂರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.