ವಿಜಯಪುರ(ದೇವನಹಳ್ಳಿ): ವಾತಾವರಣದ ಏರುಪೇರು ನಡುವೆ ರೇಷ್ಮೆ ಗೂಡಿನ ಬೆಲೆ ₹500ರ ಗಡಿ ದಾಟಿದ್ದು, ರೇಷ್ಮೆಬೆಳೆಗಾರರ ಮುಖದಲ್ಲಿ ಮಂದಹಾಸ ಮೂಡಿದೆ.

ಕಳೆದ ಜುಲೈನಲ್ಲಿ ₹350ರ ಆಸುಪಾಸಿನಲ್ಲಿದ್ದ ಬೆಲೆ ಈಗ ಸರಾಸರಿ ₹515ಗೆ ಮಾರಾಟವಾಗುತ್ತಿದೆ. ಇದರಿಂದ ರೇಷ್ಮೆಹುಳುವಿನ ಸಾಕಾಣಿಕೆಗಾಗಿ ರೇಷ್ಮೆ ಕೃಷಿಕರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಸಾಮಾನ್ಯವಾಗಿ ಗೂಡಿನ ಬೆಲೆ ₹400ರ ಮೇಲೆ ಹರಾಜಾಗುತ್ತದೆ. ಆದರೆ, ಈಚೆಗೆ ಸ್ಥಗಿತಗೊಳಿಸಲಾಗಿದ್ದ ಕೆಲವು ನೂಲುಬಿಚ್ಚಾಣಿಕೆ ಘಟಕಗಳು ಚಾಲ್ತಿಯಾಗಿವೆ. ಮಾರುಕಟ್ಟೆಗೆ ಆವಕವಾಗುತ್ತಿರುವ ಗೂಡಿನ ಪ್ರಮಾಣ ಕಡಿಮೆಯಾಗಿದೆ. ಹೀಗಾಗಿ ಗೂಡಿನ ಬೆಲೆ ₹500ರ ಗಡಿ ದಾಟಿದೆ. ಕೆಲವೊಮ್ಮೆ ಮಾತ್ರವೇ ₹400ರೊಳಗೆ ಹರಾಜಾಗಿದೆ ಎಂದು ರೇಷ್ಮೆಗೂಡು ಮಾರುಕಟ್ಟೆಯ ಅಧಿಕಾರಿಯೊಬ್ಬರು ತಿಳಿಸಿದರು.

ರೇಷ್ಮೆಗೆ ಉತ್ತಮ ಬೆಲೆ ಸಿಗದೆ ಹಲವು ರೈತರು ರೇಷ್ಮೆ ಕೃಷಿಯಿಂದ ವಿಮುಖರಾಗಿದ್ದಾರೆ. ಈಗ ಉತ್ತಮ ಬೆಲೆ ಸಿಗುತ್ತಿರುವುದರಿಂದ ಮತ್ತೆ ರೇಷ್ಮೆ ಕೃಷಿಗೆ ಮುಂದಾಗಿದ್ದೇವೆ ಎನ್ನುತ್ತಾರೆ ರೈತ ಚಿಕ್ಕಮುನಿಶಾಮಪ್ಪ.

ಕಷ್ಟಪಟ್ಟು ಬೆಳೆದ ಬೆಳೆಗೆ ಉತ್ತಮ ಬೆಲೆ ಸಿಗುತ್ತಿರುವುದರಿಂದ ನಮ್ಮ ಶ್ರಮ ಸಾರ್ಥಕ ಎನ್ನಿಸುತ್ತಿದೆ. ಬೆಲೆ ಕಡಿಮೆಯಾದಾಗ ನಾವು ಸಾಲಗಾರರಾಗಿದ್ದೇವೆ. ಈಗ ಒಳ್ಳೆಯ ಬೆಲೆ ಸಿಕ್ಕಿದೆ. ಒಂದಷ್ಟು ಸಮಸ್ಯೆ ಕಳೆಯುತ್ತದೆ.
ವೆಂಕಟರೆಡ್ಡಿ ಕುಪ್ಪಂ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.