ಮೂಡಲಗಿ: ‘ನಾಗನೂರ ಅರ್ಬನ್ ಕ್ರೆಡಿಟ್ ಸೌಹಾರ್ದ ಸಹಕಾರಿ ಸೊಸೈಟಿಯು ಪ್ರಸಕ್ತ ಮಾರ್ಚ್ ಅಂತ್ಯಕ್ಕೆ ₹2.21 ಕೋಟಿ ಲಾಭ ಗಳಿಸಿ ಪ್ರಗತಿಯಲ್ಲಿ ಸಾಗುತ್ತಿದೆ’ ಎಂದು ಸೊಸೈಟಿ ಅಧ್ಯಕ್ಷ ಬಸವರಾಜ ಗೌಡಪ್ಪ ತಡಸನ್ನವರ ಹೇಳಿದರು.

ತಾಲ್ಲೂಕಿನ ನಾಗನೂರದ ಅರ್ಬನ್ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ 2022–23ನೇ ಸಾಲಿನ ವಾರ್ಷಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸೊಸೈಟಿಯು ಈವರೆಗೆ ₹80.70 ಲಕ್ಷ ಶೇರು ಬಂಡವಾಳ, ₹120.67 ಕೋಟಿ ಠೇವು ಸಂಗ್ರಹ, ₹8 ಕೋಟಿ ನಿಧಿಗಳನ್ನು ಹೊಂದಿದ್ದು, ₹89.80 ಕೋಟಿ ವಿವಿಧ ಕ್ಷೇತ್ರಗಳಿಗೆ ಸಾಲವನ್ನು ವಿತರಿಸಿದೆ ಎಂದರು.

ಶೇರುದಾರರಿಗೆ ಶೇ 25ರಷ್ಟು ಲಾಭಾಂಶವನ್ನು ವಿತರಿಸಿದ್ದು, ಈಗಾಗಲೇ 10 ಶಾಖೆಗಳನ್ನು ಪ್ರಾರಂಭಿಸಿದೆ. ನಾಲ್ಕು ಶಾಖೆಗಳ ಪ್ರಾರಂಭಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

ಗೋಕಾಕದ ಲೆಕ್ಕ ಪರಿಶೋಧಕ ಸೈದಪ್ಪ ಗದಾಡಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ನಾಗನೂರ ಸೊಸೈಟಿಯ ಪ್ರಗತಿಯು ಶ್ಲಾಘನೀಯವಾಗಿದೆ ಎಂದರು.

ವೇದಿಕೆಯಲ್ಲಿ ಬಿಡಿಸಿಸಿ ಬ್ಯಾಂಕ್ ನಿವೃತ್ತ ಶಾಖಾ ವ್ಯವಸ್ಥಾಪಕ ಬಾಳಗೌಡ ಪಾಟೀಲ, ಹಿಡಕಲ್ ಡ್ಯಾಂ ನೀರಾವರಿ ಮಹಾಮಂಡಳದ ಅಧ್ಯಕ್ಷ ಅಶೋಕ ಖಂಡ್ರಟ್ಟಿ, ಸಂಘದ ಉಪಾಧ್ಯಕ್ಷ ಶಿವಲಿಂಗಪ್ಪ ಗೋಟೂರ ಇದ್ದರು.

ಸಭೆಯಲ್ಲಿ ಪ್ರಧಾನ ಕಚೇರಿಯ ನಿರ್ದೇಶಕರಾದ ಮಲ್ಲಪ್ಪ ಬಂಡಿ, ರಾಮಪ್ಪ ಪದ್ದಿ, ಶಿವಾನಂದ ದಡ್ಡಿ, ದುಂಡಪ್ಪ ಬೆಳಕೂಡ, ಕೆಂಪಣ್ಣಾ ನಿಡಸೋಸಿ, ಗಂಗಪ್ಪ ಗೋಟೂರ, ಸುಭಾಸ ಸಣ್ಣಕ್ಕಿ, ವೆಂಕಪ್ಪ ಪೂಜೇರಿ, ಶೋಭಾ ಕೊಗನೊಳ್ಳಿ, ವಿಜಯಲಕ್ಷ್ಮೀ ಕರಿಹೊಳಿ ಹಾಗೂ ಸಂಘದ ತುಕ್ಕಾನಟ್ಟಿ, ಕುಲಗೋಡ, ಬೆಟಗೇರಿ, ಅರಭಾವಿಮಠ, ಗೋಕಾಕ, ಮೂಡಲಗಿ, ಹುಲಕುಂದ, ಯರಗಟ್ಟಿ, ಮುಗಳಖೋಡ, ಹಾರೂಗೇರಿ ಶಾಖೆಗಳ ಸಲಹಾ ಸಮೀತಿ ಪದಾಧಿಕಾರಿಗಳು ಮತ್ತು ಶೇರುದಾರರು ಹಾಗೂ ಸಿಬ್ಬಂದಿ ವರ್ಗದವರು ಇದ್ದರು.

ಸಿದ್ದಾರೂಢ ಕೆಸರಗೊಪ್ಪ ಸ್ವಾಗತಿಸಿದರು, ಶಾಖಾ ಉಪಪ್ರಧಾನ ವ್ಯವಸ್ಥಾಪಕ ಪ್ರಕಾಶ ಅಂಗಡಿ ನಿರೂಪಿಸಿದರು, ಅಶೋಕ ರತೂನ ವರದಿ ವಾಚಿಸಿದರ, ಗಂಗಾಧರ ಮುಕ್ಕುಂದ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.