ಖಾನಾಪುರ: ‘ಆಂತರಿಕ ಕಲಹ, ಸರಣಿ ಹಗರಣಗಳು, ಭ್ರಷ್ಟಾಚಾರದಿಂದಾಗಿ ರಾಜ್ಯದ ಜನರ ವಿಶ್ವಾಸ ಗಳಿಸಲು ಬಿಜೆಪಿಗೆ ಸಾಧ್ಯವಾಗಿಲ್ಲ. ತಮಗೆ ಗೌರವ ಸಿಗದ್ದರಿಂದ ಜಗದೀಶ ಶೆಟ್ಟರ್ ಹಾಗೂ ಲಕ್ಷ್ಮಣ ಸವದಿ ಆ ಪಕ್ಷ ತೊರೆದಿದ್ದಾರೆ. ಈಗ ಬಿಜೆಪಿ ಸ್ಥಿತಿ ಚಿಂತಾಜನಕವಾಗಿದೆ’ ಎಂದು ಕಾಂಗ್ರೆಸ್ನ ಸ್ಟಾರ್ ಪ್ರಚಾರಕರೂ ಆಗಿರುವ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಅಶೋಕ ಚವ್ಹಾಣ ಕುಟುಕಿದರು.

ತಾಲ್ಲೂಕಿನ ಗರ್ಲಗುಂಜಿಯಲ್ಲಿ ಖಾನಾಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳಕರ ಪ್ರಚಾರಾರ್ಥವಾಗಿ ಶುಕ್ರವಾರ ಆಯೋಜಿಸಿದ್ದ ರೋಡ್ ಶೋನಲ್ಲಿ ಅವರು ಮಾತನಾಡಿದರು.

ಅಂಜಲಿ ನಿಂಬಾಳಕರ, ‘ಕಳೆದ ಐದು ವರ್ಷಗಳಲ್ಲಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದ್ದೇನೆ. ಮತ್ತೊಮ್ಮೆ ಜನಸೇವೆಗೆ ಅವಕಾಶ ನೀಡಿದರೆ, ಕ್ಷೇತ್ರಕ್ಕೆ ಹೊಸ ಉದ್ಯಮಗಳನ್ನು ತಂದು ನಿರುದ್ಯೋಗ ಸಮಸ್ಯೆ ನಿವಾರಣೆಗೆ ಪ್ರಯತ್ನಿಸುತ್ತೇನೆ’ ಎಂದು ಭರವಸೆ ಕೊಟ್ಟರು.

ಮಹಾರಾಷ್ಟ್ರದ ಮಾಜಿ ಸಚಿವ ಸದೇಶ ಬಂಟಿ ಪಾಟೀಲ, ಮುಖಂಡರಾದ ಪ್ರಸಾದ ಪಾಟೀಲ, ದೇಮಣ್ಣ ಬಸರಿಕಟ್ಟಿ, ಅಭಿಷೇಕ ಹೊಸಮನಿ, ಯಲ್ಲಪ್ಪ ಚೌಗುಲೆ, ಪ್ರಕಾಶ ದೇಶಪಾಂಡೆ, ಜಾನ್ ಲೋಬೋ, ನಾರಾಯಣ ಖಾನಾಪುರಿ, ಅನಿತಾ ದಂಡಗಲ, ಆಶಾ ಹಲಗೇಕರ, ಯಲ್ಲಪ್ಪ ಚಿನಿವಾಲ, ವಿವೇಕ ತಡಕೋಡ ಇದ್ದರು.

ನಿಂಬಾಳಕರ ಪರ ಪ್ರಚಾರಕ್ಕೆ ಬಂದಿದ್ದ ಅಶೋಕ ಚವ್ಹಾಣ ಅವರಿಗೆ ಎಂಇಎಸ್ ಮುಖಂಡರು ಕಪ್ಪು ಬಾವುಟ ಪ್ರದರ್ಶಿಸಿದರು. ಮರಾಠಿಗರ ಪರ ನಿಲ್ಲಬೇಕೆಂದು ಘೋಷಣೆ ಕೂಗಿದರು. ರಂಜೀತ್ ಪಾಟೀಲ, ಗೋಪಾಲ ಪಾಟೀಲ, ಕೃಷ್ಣಾ ಕುಂಬಾರ ಸೇರಿದಂತೆ 20ಕ್ಕೂ ಹೆಚ್ಚು ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದು ಬಿಡುಗಡೆಗೊಳಿಸಿದರು.

ಎಂಇಎಸ್ ಮುಖಂಡರಿಂದ ಕಪ್ಪು ಬಾವುಟ ಪ್ರದರ್ಶನ 20ಕ್ಕೂ ಹೆಚ್ಚು ಮುಖಂಡರ ವಶ; ಬಿಡುಗಡೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.